ಕತ್ರಿನಾ-ವಿಕ್ಕಿ ಕೌಶಲ್ ಕಾರಿನ ನಂಬರ್​ ಪ್ಲೇಟ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; ಅದರಲ್ಲಿ ಅಂಥದ್ದೇನಿದೆ?

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು.

ಕತ್ರಿನಾ-ವಿಕ್ಕಿ ಕೌಶಲ್ ಕಾರಿನ ನಂಬರ್​ ಪ್ಲೇಟ್​ ನೋಡಿ ಅಚ್ಚರಿಗೊಂಡ ಫ್ಯಾನ್ಸ್​; ಅದರಲ್ಲಿ ಅಂಥದ್ದೇನಿದೆ?
ಕತ್ರಿನಾ-ವಿಕ್ಕಿ
Updated By: ರಾಜೇಶ್ ದುಗ್ಗುಮನೆ

Updated on: Oct 27, 2021 | 4:06 PM

ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಡೇಟಿಂಗ್​ ಮಾಡುತ್ತಿದ್ದಾರೆ. ಈ ಮೂಲಕ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. 2018ರಲ್ಲಿ ‘ಕಾಫಿ ವಿತ್​ ಕರಣ್’​ ಶೋನಲ್ಲಿ ಕತ್ರಿನಾ ಪಾಲ್ಗೊಂಡಿದ್ದರು. ಈ ವೇಳೆ ವಿಕ್ಕಿ ಜತೆ ತೆರೆ ಹಂಚಿಕೊಳ್ಳುವ ಆಸಕ್ತಿ ತೋರಿದ್ದರು. ಇದಾದ ನಂತರ ಅಂದರೆ, 2019ರಲ್ಲಿ ಇಬ್ಬರೂ ಮುಂಬೈನಲ್ಲಿ ಊಟಕ್ಕೆ ಒಟ್ಟಾಗಿ ಸೇರಿದ್ದರು. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇತ್ತೀಚೆಗೆ ಇಬ್ಬರೂ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ವೈರಲ್​ ಆಗಿತ್ತು. ಈಗ ಇಬ್ಬರ ಕಾರಿನ ನಂಬರ್​ ಪ್ಲೇಟ್​ ಸಾಕಷ್ಟು ಗಮನ ಸೆಳೆದಿದೆ.

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್​​ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ನೆಟ್ಟಿಗರು ಸುಮ್ಮನೆ ಕೂತಿಲ್ಲ. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿಬಿಟ್ಟಿದ್ದರು. ಇವೆಲ್ಲವುಗಳ ಮಧ್ಯೆ ವಿಕ್ಕಿ ಮತ್ತು ಕತ್ರಿನಾ ಕಾರಿನ  ನಂಬರ್​ಪ್ಲೇಟ್​ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಇಬ್ಬರೂ ಕೆಲಸದ ನಿಮಿತ್ತ ಬಾಂದ್ರಾಗೆ ಬಂದಿದ್ದರು. ಅವರಿಬ್ಬರ ವಾಹನಗಳ ನಂಬರ್ ಪ್ಲೇಟ್ ಅಭಿಮಾನಿಗಳ ಗಮನ ಸೆಳೆದಿದೆ. ವಿಕ್ಕಿ ಅವರ ಕಪ್ಪು ಬಣ್ಣದ ರೇಂಜ್ ರೋವರ್ ಸಂಖ್ಯೆ 7722 ಆಗಿದೆ. ಕತ್ರಿನಾ ಅವರ ಬೂದು ಬಣ್ಣದ ರೇಂಜ್ ರೋವರ್ ಸಂಖ್ಯೆ 8822. ಇಬ್ಬರ ಕಾರಿನ ಸಂಖ್ಯೆ ಕೊನೆ ಆಗುವುದು 22 ಇಂದ ಅನ್ನೋದು ವಿಶೇಷ. ಅವರ ಕಾರಿನ ನಂಬರ್ ಪ್ಲೇಟ್‌ನ ಚಿತ್ರಗಳನ್ನು ಪಾಪರಾಜಿಗಳು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್​ ‘ಟೈಗರ್ 3’ನಲ್ಲಿ ನಟ ಸಲ್ಮಾನ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಪಾಕಿಸ್ತಾನಿ ಏಜೆಂಟ್ ಆಗಿ ಕಾಣಿಸಿಕೊಂಡರೆ, ಸಲ್ಮಾನ್ ಖಾನ್ ಭಾರತದ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮನೀಶ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದಲ್ಲದೆ, ಗುರ್ಮೀತ್ ಸಿಂಗ್ ನಿರ್ದೇಶನದ ‘ಫೋನ್ ಭೂತ್’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್ ಅವರು ಶೀಘ್ರದಲ್ಲೇ ಮಹಾಭಾರತದ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮ ಜೀವನ ಆಧಾರಿತ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ಕತ್ರಿನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸ್ವೀಟ್​ ಕೊಡಪ್ಪ’; ಮಗನ ಕಾಲೆಳೆದ ವಿಕ್ಕಿ ತಂದೆ-ತಾಯಿ

Vicky Kaushal: ಕತ್ರೀನಾ ಜೊತೆಗಿನ ಎಂಗೇಜ್​ಮೆಂಟ್ ಕುರಿತು ಕೊನೆಗೂ ಮೌನ ಮುರಿದ ವಿಕ್ಕಿ ಕೌಶಲ್