ಒಟಿಟಿಗೆ ಬಂದ ನಂತರವೂ ಸಾಧನೆ ಮಾಡಿದ ‘ಛಾವ’; ಭಾರತದಲ್ಲೇ 600 ಕೋಟಿ ರೂ. ಗಳಿಕೆ

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ ‘ಛಾವ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಮೈಲಿಗಲ್ಲು ಸಾಧಿಸಿದೆ. 65ನೇ ದಿನ ಈ ಸಿನಿಮಾದ ಕಲೆಕ್ಷನ್ 600 ಕೋಟಿ ರೂಪಾಯಿ ಗಡಿ ದಾಟಿದ್ದು, ಚಿತ್ರತಂಡದವರು ಸಂಭ್ರಮಿಸಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಹಲವು ಥಿಯೇಟರ್​ಗಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.

ಒಟಿಟಿಗೆ ಬಂದ ನಂತರವೂ ಸಾಧನೆ ಮಾಡಿದ ‘ಛಾವ’; ಭಾರತದಲ್ಲೇ 600 ಕೋಟಿ ರೂ. ಗಳಿಕೆ
Vicky Kaushal

Updated on: Apr 21, 2025 | 8:01 PM

2025ರಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಸಿನಿಮಾ ‘ಛಾವ’. ವಿಕ್ಕಿ ಕೌಶಲ್ (Vicky Kaushal) ನಟನೆಯ ಈ ಸಿನಿಮಾವನ್ನು ಜನರು ಸಖತ್ ಮೆಚ್ಚಿಕೊಂಡರು. ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಈ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲೂ ಪ್ರಸಾರ ಆರಂಭಿಸಿತು. ಆದರೂ ಕೂಡ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ವಿಶೇಷ ಏನೆಂದರೆ, ಭಾರತದ ಬಾಕ್ಸ್ ಆಫೀಸ್​ನಲ್ಲೇ ‘ಛಾವ’ ಸಿನಿಮಾ 600.10 ಕೋಟಿ ರೂಪಾಯಿ ಗಳಿಸಿದೆ. 600 ಕೋಟಿ ರೂಪಾಯಿ ಕ್ಲಬ್ ಸೇರಿದ ಕೆಲವೇ ಸಿನಿಮಾಗಳ ಸಾಲಿಗೆ ‘ಛಾವ’ (Chhaava) ಕೂಡ ಸೇರ್ಪಡೆ ಆಗಿದೆ.

ಫೆಬ್ರವರಿ 14ರಂದು ‘ಛಾವ’ ಸಿನಿಮಾ ಬಿಡುಗಡೆ ಆಯಿತು. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಚಿತ್ರಕ್ಕೆ ಲಕ್ಷ್ಮಣ್ ಉಟೇಕ್ ಅವರು ನಿರ್ದೇಶನ ಮಾಡಿದ್ದಾರೆ. ಐತಿಹಾಸಿಕ ಕಥಹಂದರ ಇರುವ ಈ ಸಿನಿಮಾದ ಕಲೆಕ್ಷನ್ 65ನೇ ದಿನಕ್ಕೆ 600 ಕೋಟಿ ರೂಪಾಯಿ ಗಡಿ ದಾಡಿದೆ. ಈ ಸಂಭ್ರಮದ ವಿಷಯವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

Loading...

ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಮೊದಲು ‘ಜವಾನ್’, ‘ಪುಷ್ಪ 2’, ‘ಸ್ತ್ರೀ 2’ ಸಿನಿಮಾಗಳು 600 ಕೋಟಿ ರೂಪಾಯಿ ಕ್ಲಬ್ ದಾಟಿದ್ದವು. ‘ಜವಾನ್’ ಸಿನಿಮಾ 643.87 ಕೋಟಿ ರೂಪಾಯಿ ಗಳಿಸಿತ್ತು. ‘ಸ್ತ್ರೀ 2’ ಸಿನಿಮಾಗೆ 627.02 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ‘ಪುಷ್ಪ 2’ ಸಿನಿಮಾ 830.10 ಕೋಟಿ ರೂಪಾಯಿ ಗಳಿಸಿ ಬೀಗಿತು. ಈಗ ‘ಛಾವ’ ಸಿನಿಮಾ 600.10 ಕೋಟಿ ರೂಪಾಯಿ ಗಳಿಸಿ ಬೀಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಲೀಕ್ ಆಯ್ತು ‘ಛಾವ’ ಸಿನಿಮಾ; ನೂರಾರು ಕೋಟಿ ಬಿಸ್ನೆಸ್​ಗೆ ತೊಂದರೆ

ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ‘ಛಾವ’ ಸಿನಿಮಾ ಮೂಡಿಬಂದಿದೆ. ವಿಕ್ಕಿ ಕೌಶಲ್ ಅವರು ಸಂಭಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೇಸುಬಾಯಿ ಬೋಸ್ಲೆ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರು ಮಾಡಿದ್ದಾರೆ. ಔರಂಗ್​ಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅವರು ಅಭಿನಯಿಸಿದ್ದಾರೆ. ದಿನೇಶ್ ವಿಜನ್ ನಿರ್ಮಾಣ ಮಾಡಿದ ‘ಛಾವ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾದ ಗೆಲುವಿನ ಬಳಿಕ ವಿಕ್ಕಿ ಕೌಶಲ್ ಅವರ ಬೇಡಿಕೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us