‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’

Vicky Kaushal movie: ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ‘3 ಇಡಿಯಟ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಇತ್ತೀಚೆಗೆ ‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿವೆ. ಆಮಿರ್ ಖಾನ್ ಖುದ್ದು, ತಾವು ‘3 ಇಡಿಯಟ್ಸ್’ ಸೀಕ್ವೆಲ್ ಮಾಡುವುದಾಗಿ ಹೇಳಿದ್ದಾರೆ. ಇದೀಗ ‘3 ಇಡಿಯಟ್ಸ್’ ತಂಡಕ್ಕೆ ನಾಲ್ನೇ ಇಡಿಯಟ್ ಸೇರ್ಪಡೆ ಆಗಲಿರುವ ಸುದ್ದಿ ಹೊರಬಿದ್ದಿದೆ.

‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’
3 Idiots

Updated on: May 06, 2026 | 6:16 PM

‘3 ಇಡಿಯಟ್ಸ್’ (3 Idiots) ಬಾಲಿವುಡ್‌ನ (Bollywood) ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದು. ಕೆಲವು ಸಿನಿಮಾಗಳು ಹಣ ಮಾಡುತ್ತವೆ, ಕೆಲವು ಸಿನಿಮಾಗಳು ಜನ ಮೆಚ್ಚುಗೆ ಗಳಿಸುತ್ತವೆ. ‘3 ಇಡಿಯಟ್ಸ್’ ಎರಡನ್ನೂ ಹೇರಳವಾಗಿ ಪಡೆದ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ಇತ್ತೀಚೆಗೆ ‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿವೆ. ಆಮಿರ್ ಖಾನ್ ಖುದ್ದು, ತಾವು ‘3 ಇಡಿಯಟ್ಸ್’ ಸೀಕ್ವೆಲ್ ಮಾಡುವುದಾಗಿ ಹೇಳಿದ್ದಾರೆ. ಇದೀಗ ‘3 ಇಡಿಯಟ್ಸ್’ ತಂಡಕ್ಕೆ ನಾಲ್ನೇ ಇಡಿಯಟ್ ಸೇರ್ಪಡೆ ಆಗಲಿರುವ ಸುದ್ದಿ ಹೊರಬಿದ್ದಿದೆ.

ನಾಲ್ಕು ಜನ ಗೆಳೆಯರ ಕತೆಯನ್ನು ರಾಜ್​ಕುಮಾರ್ ಹಿರಾನಿ ಈ ಬಾರಿ ನಿರ್ದೇಶಿಸಲಿದ್ದು ಈ ಸಿನಿಮಾಕ್ಕೆ ‘4 ಇಡಿಯಟ್ಸ್’ ಎಂದು ಹೆಸರಿಡಲಾಗುತ್ತಿದೆ. ಈ ಚಿತ್ರದಲ್ಲಿ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಜೊತೆ ನಾಲ್ಕನೇ ಇಡಿಯಟ್ ಆಗಿ ಬಾಲಿವುಡ್​ನ ಸ್ಟಾರ್ ನಟ ಸೇರಿಕೊಳ್ಳಲಿದ್ದಾರೆ. ಅವರೇ ವಿಕ್ಕಿ ಕೌಶಲ್. ಈ ಪಾತ್ರಕ್ಕಾಗಿ ವಿಕ್ಕಿ ಅವರೊಂದಿಗೆ ರಾಜ್​ಕುಮಾರ್ ಹಿರಾನಿ ಚರ್ಚೆ ನಡೆಸಿದ್ದು, ವಿಕ್ಕಿ ಸಹ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ವಿಕ್ಕಿ ಕೌಶಲ್ ಮೆಚ್ಚಿನ ನಟ. ವಿಕ್ಕಿ ಕೌಶಲ್ ಅವರಿಗೆ ಇದು ಮೂರನೇ ರಾಜ್ಕುಮಾರ್ ಹಿರಾನಿ ಸಿನಿಮಾ. ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ವಿಕ್ಕಿ ಕೌಶಲ್ ಕೆಲಸ ಮಾಡಿದ್ದರು. ಹಿರಾನಿ ಅವರ ಶೈಲಿ ಮತ್ತು ಕಥೆ ಹೇಳುವ ವಿಧಾನದ ಮೇಲೆ ಅಪಾರ ನಂಬಿಕೆ ಹೊಂದಿರುವ ವಿಕ್ಕಿ, ಈ ಪ್ರತಿಷ್ಠಿತ ಫ್ರಾಂಚೈಸಿಯ ಭಾಗವಾಗಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ನಡೆಯದ ಸಾಯಿ ಪಲ್ಲವಿ ಕಮಾಲ್; ತಪ್ಪು ಮಾಡಿದ್ರಾ ಆಮಿರ್ ಖಾನ್?

ಪ್ರಸ್ತುತ ರಾಜ್‌ಕುಮಾರ್ ಹಿರಾನಿ ಮತ್ತು ಅವರ ಆಪ್ತ ಲೇಖಕ ಅಭಿಜಾತ್ ಜೋಶಿ ಚಿತ್ರದ ಚಿತ್ರಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ‘3 ಇಡಿಯಟ್ಸ್’ ಚಿತ್ರದ ಘನತೆಗೆ ತಕ್ಕಂತೆ ಸೀಕ್ವೆಲ್ ಅನ್ನು ರೂಪಿಸಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರವು 2027ರ ಆರಂಭದಲ್ಲಿ ಚಿತ್ರೀಕರಣ ಆರಂಭಿಸಲಿದೆ. ನಟ ಆಮೀರ್ ಖಾನ್ ಇತ್ತೀಚೆಗೆ ಈ ಚಿತ್ರದ ಸುದ್ದಿಗಳನ್ನು ಖಚಿತಪಡಿಸಿದ್ದು, ‘4 ಇಡಿಯಟ್ಸ್’ ಸಿನಿಮಾದ ಕಥೆಯು ‘3 ಇಡಿಯಟ್ಸ್’ ಮುಗಿದ ಹತ್ತು ವರ್ಷಗಳ ನಂತರದ ಘಟನೆಗಳನ್ನು ಆಧರಿಸಿರಲಿದೆ ಎಂದು ಸುಳಿವು ನೀಡಿದ್ದಾರೆ. ಪಾತ್ರಗಳ ಜೀವನದಲ್ಲಿ ಆಗಿರುವ ಬದಲಾವಣೆಗಳು ಮತ್ತು ಹೊಸ ಸಂಘರ್ಷಗಳನ್ನು ಈ ಚಿತ್ರದಲ್ಲಿ ತೋರಿಸಲಾಗುವುದು.

ಈ ಚಿತ್ರದ ಕೆಲಸಗಳು ಆರಂಭವಾಗುವ ಮುನ್ನ ವಿಕ್ಕಿ ಕೌಶಲ್ ಅವರು ತಮ್ಮ ಬಹುನಿರೀಕ್ಷಿತ ‘ಮಹಾವತಾರ್’ ಮತ್ತು ‘ಲವ್ ಆಂಡ್ ವಾರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಆಮೀರ್ ಖಾನ್ ಕೂಡ ಈ ಮಧ್ಯೆ ಮತ್ತೊಂದು ಚಿತ್ರವನ್ನು ಮುಗಿಸಲು ಯೋಜಿಸಿದ್ದು, ನಂತರ ಎಲ್ಲರೂ ಒಟ್ಟಾಗಿ ‘4 ಇಡಿಯಟ್ಸ್’ ಚಿತ್ರದ ಸೆಟ್ ಸೇರಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘3 ಇಡಿಯಟ್ಸ್’ ಚಿತ್ರದಲ್ಲಿ ಕರೀನಾ ಕಪೂರ್, ಬೊಮನ್ ಇರಾನಿ, ಓಮಿ ವೈದ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈಗ ಹಳೆಯ ತಾರಾಗಣದೊಂದಿಗೆ ಹೊಸದಾಗಿ ವಿಕ್ಕಿ ಕೌಶಲ್ ಸೇರ್ಪಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us