ವಿದ್ಯಾ ಬಾಲನ್ ಅವರು ಬಾಲಿವುಡ್ನ ಯಶಸ್ವಿ ನಟಿಯರಲ್ಲಿ ಒಬ್ಬರು. ಅವರ ನಟನೆಯ ‘ಕಹಾನಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರ ಬಿಡುಗಡೆ ಆಗಿದ್ದು 2012ರಲ್ಲಿ. ಕೋಲ್ಕತ್ತಾ ಮೆಟ್ರೋದಲ್ಲಿ ನಡೆವ ಒಂದು ಕಲ್ಪನಾತ್ಮಕ ಘಟನೆ ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. 15 ಕೋಟಿ ರೂಪಾಯಿ ಬಜೆಟ್ನ ಈ ಚಿತ್ರ 79 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ವಿದ್ಯಾ ಬಾಲನ್ಗೆ ಆದ ಸಮಸ್ಯೆಗಳ ಬಗ್ಗೆ ಅವರು ಹೇಳಿದ್ದರು.
ಬಜೆಟ್ ಕಾರಣದಿಂದ ಯಾವುದೇ ವ್ಯಾನಿಟಿ ವ್ಯಾನ್ ತರೋಕೆ ಸಾಧ್ಯವಾಗಿಲ್ಲ. ಹೀಗಾಗಿ ಬಟ್ಟೆ ಬದಲಿಸಿಕೊಳ್ಳಬೇಕು ಎಂದರೆ ರಸ್ತೆ ಬದಿ ನಿಲ್ಲಿಸಿದ ಕಾರಿನಲ್ಲೇ ಮಾಡಿಕೊಳ್ಳಬೇಕಿತ್ತು. ‘ಅಲಾದಿನ್ ಸೋತ ನಂತರ ವಿದ್ಯಾ ಬಾಲನ್ ಅವರು ಕಹಾನಿ ಸಿನಿಮಾ ಮಾಡಲ್ಲ ಎಂದರು. ನಾನು ಅಮಿತಾಭ್ ಬಚ್ಚನ್ನಿಂದ ಶಾರುಖ್ ಖಾನ್ ಅವರಿಗೆ ಎಲ್ಲರನ್ನೂ ನೋಡಿದ್ದೇ. ಅವರು ಒಮ್ಮೆ ಸಿನಿಮಾ ಒಪ್ಪಿದರೆ ಅದನ್ನು ಮಾಡಿಯೇ ಮಾಡುತ್ತಾರೆ. ವಿದ್ಯಾ ಕೂಡ ಇದೇ ಸಾಲಿನಲ್ಲಿ ಬರುತ್ತಾರೆ. ಅವರು ಕಹಾನಿ ಮಾಡುತ್ತೇನೆ ಎಂದರು’ ಎಂಬುದಾಗಿ ಸುಜಯ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್
‘ನಿಮಗೆ ಆ ಬಗ್ಗೆ ಐಡಿಯಾ ಕೂಡ ಇಲ್ಲ. ನಮಗೆ ಯಾವುದೇ ವ್ಯಾನಿಟಿ ವ್ಯಾನ್ ಖರೀದಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಟೈಟ್ ಬಜೆಟ್ ಇತ್ತು. ಪ್ರತಿ ಬಾರಿ ಬಟ್ಟೆ ಚೇಂಜ್ ಮಾಡಬೇಕು ಎಂದಾಗ ಇನೋವಾ ಕಾರಿನ ಕಿಟಕಿಗೆ ಕಪ್ಪು ಬಟ್ಟೆ ಸುತ್ತುತ್ತಿದ್ದವು. ಅಲ್ಲಿಯೇ ವಿದ್ಯಾ ಬಟ್ಟೆ ಬದಲಿಸಿಕೊಳ್ಳುತ್ತಿದ್ದರು’ ಎಂದಿದ್ದಾರೆ ವಿದ್ಯಾ.
ಸುಜಯ್ ಘೋಷ್ ಅವರು ಜಾಹೀರಾತೊಂದರಲ್ಲಿ ವಿದ್ಯಾ ಅವರನ್ನು ನೋಡಿದ್ದರು. ಅವರ ಜೊತೆ ಕೆಲಸ ಮಾಡಬೇಕು ಎಂದು ಸುಜಯ್ ಅಂದುಕೊಂಡಿದ್ದರು. ಕೊನೆಗೂ ಅದು ಸಂಭವಿಸಿತು. ಕಹಾನಿ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ವಿದ್ಯಾ ಬಾಲನ್ ಅವರು ನಾಯಕಿ ಪಾತ್ರಗಳಿಂದ ದೂರ ಇದ್ದಾರೆ. ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ