ವಿಜಯ್ ದೇವರಕೊಂಡ (Vijay Devarakonda) ಅವರ ನಟನೆಯ ‘ಲೈಗರ್’ ಸಿನಿಮಾ ಹೇಳ ಹೆಸರಿಲ್ಲದಂತೆ ಹೋಗಿದೆ. ಈ ಚಿತ್ರದಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಬಾಲಿವುಡ್ಗೆ ಕಾಲಿಡಬೇಕು ಎಂಬ ವಿಜಯ್ ದೇವರಕೊಂಡ ಅವರ ಕನಸು ಭಗ್ನವಾಗಿದೆ. ಈ ಚಿತ್ರದಿಂದ ವಿಜಯ್ ಅವರು ದೊಡ್ಡ ಮಟ್ಟದ ಸೋಲು ಕಂಡಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡ ಬಂಡವಾಳ ಹೂಡಿದ್ದರು. ಈಗ ವಿಜಯ್ ಹಾಗೂ ಕರಣ್ (Karan Johar)ಮತ್ತೆ ಒಂದಾಗುತ್ತಿದ್ದಾರೆ. ಈ ವಿಚಾರ ಕೇಳಿ ವಿಜಯ್ ಫ್ಯಾನ್ಸ್ ಖುಷಿಯಾಗಿದ್ದಾರೆ.
ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಸಾಕಷ್ಟು ಗಮನ ಸೆಳೆದವರು. ‘ಲೈಗರ್’ ಮೂಲಕ ಇದೇ ಮೊದಲ ಬಾರಿಗೆ ಅವರು ಆ್ಯಕ್ಷನ್ ಸಿನಿಮಾ ಮಾಡುವ ಪ್ರಯತ್ನಕ್ಕೆ ಕಾಲಿಟ್ಟಿದ್ದರು. ಆದರೆ, ಅದು ಯಶಸ್ಸು ಕಂಡಿಲ್ಲ. ಇದನ್ನು ಅಭಿಮಾನಿಗಳು ತಿರಸ್ಕರಿಸಿದರು. ವಿಜಯ್ ದೇವರಕೊಂಡ ಜತೆ ಕೈ ಜೋಡಿಸೋಕೆ ದೊಡ್ಡ ದೊಡ್ಡ ನಿರ್ದೇಶಕರು ನಿರಾಕರಿಸುತ್ತಿದ್ದಾರೆ ಎನ್ನಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್ ಸಹಾಯಕ್ಕೆ ಕರಣ್ ಆಗಮಿಸಿದ್ದಾರೆ.
‘ಕಾಫಿ ವಿತ್ ಕರಣ್’ ಶೋನಲ್ಲಿ ಈ ಮೊದಲು ಬಾಲಿವುಡ್ ಸ್ಟಾರ್ಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದರು ಕರಣ್ ಜೋಹರ್. ಆದರೆ, ಈ ಬಾರಿ ದಕ್ಷಿಣದ ಕೆಲ ಸ್ಟಾರ್ಗಳಿಗೂ ಅವಕಾಶ ಸಿಕ್ಕಿತ್ತು. ಈ ಸಾಲಿನಲ್ಲಿ ವಿಜಯ್ ದೇವರಕೊಂಡ ಕೂಡ ಇದ್ದಾರೆ. ಇದು ವಿಜಯ್ ಹಾಗೂ ಕರಣ್ ನಡುವಿನ ಗೆಳೆತನಕ್ಕೆ ಸಾಕ್ಷ್ಯ ನೀಡುತ್ತದೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಹೀಗಾಗಿ, ವಿಜಯ್ ಸಿನಿಮಾಗೆ ಕರಣ್ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿದೆ.
ಕರಣ್-ವಿಜಯ್ ಮಾಡುತ್ತಿರುವ ಚಿತ್ರ ರೊಮ್ಯಾಂಟಿಕ್ ಶೈಲಿಯಲ್ಲಿ ಇರಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಲವ್ ಸ್ಟೋರಿ ಹೈಲೈಟ್ ಆಗಲಿದೆ. ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡುತ್ತಾರೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಒಂದೊಮ್ಮೆ ಇದು ನಿಜವೇ ಆದಲ್ಲಿ ವಿಜಯ್ ಮತ್ತೆ ಬಾಲಿವುಡ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ಲೈಗರ್’ ಚಿತ್ರದಿಂದ ವಿಜಯ್ ದೇವರಕೊಂಡಗೆ ಆಯ್ತು ದೊಡ್ಡ ನಷ್ಟ; ಅವರು ಅನುಭವಿಸುತ್ತಿರುವ ಕಷ್ಟಗಳೇನು?
ವಿಜಯ್ ದೇವರಕೊಂಡ ಅವರು ಸದ್ಯ ‘ಖುಷಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಮಂತಾ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಂತಾಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು ಎನ್ನಲಾಗಿದೆ. ಹೀಗಾಗಿ, ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದರಿಂದ ಸಿನಿಮಾ ಕೆಲಸಗಳು ವಿಳಂಬವಾದವು. ಶೀಘ್ರದಲ್ಲೇ ಶೂಟಿಂಗ್ ಪೂರ್ಣಗೊಳಿಸುವ ಆಲೋಚನೆಯಲ್ಲಿ ಇಡೀ ತಂಡ ಇದೆ.