‘ಲೈಗರ್’ ಚಿತ್ರದಿಂದ ವಿಜಯ್ ದೇವರಕೊಂಡಗೆ ಆಯ್ತು ದೊಡ್ಡ ನಷ್ಟ; ಅವರು ಅನುಭವಿಸುತ್ತಿರುವ ಕಷ್ಟಗಳೇನು?
‘ಲೈಗರ್’ ಸಿನಿಮಾ ರಿಲೀಸ್ ಆದ ಬಳಿಕ ವಿಜಯ್ ದೇವರಕೊಂಡ ಅವರನ್ನು ದೊಡ್ಡದೊಡ್ಡ ನಿರ್ಮಾಣ ಸಂಸ್ಥೆಗಳು ಹಾಗೂ ಸ್ಟಾರ್ ನಿರ್ದೇಶಕರು ಹುಡುಕಿ ಬರಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಹಾಗಾಗಿಲ್ಲ.
ವಿಜಯ್ ದೇವರಕೊಂಡ (Vijay Devarakonda) ಅವರು ‘ಲೈಗರ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಯಿತು. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಅವರಂತಹ ಸ್ಟಾರ್ ನಿರ್ದೇಶಕ ಆ್ಯಕ್ಷನ್ಕಟ್ ಹೇಳುತ್ತಿದ್ದಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಜತೆಗೆ ದೊಡ್ಡ ಮಟ್ಟದಲ್ಲಿ ಸಿನಿಮಾಗೆ ಪ್ರಚಾರ ನೀಡಲಾಯಿತು. ಆದರೆ, ಅದೆಲ್ಲವೂ ತಲೆಕೆಳಗಾಯಿತು. ಸಿನಿಮಾ ಮಕಾಡೆ ಮಲಗಿತು. ಈ ಚಿತ್ರದಿಂದ ವಿಜಯ್ ದೇವರಕೊಂಡ ದೊಡ್ಡ ಸೋಲು ಕಂಡಿದ್ದಾರೆ. ಈಗ ‘ಲೈಗರ್’ ಬಳಿಕ ವಿಜಯ್ ಅವರಿಗೆ ಸ್ಟಾರ್ ನಿರ್ದೇಶಕರು ಕೈಗೆ ಸಿಗುತ್ತಿಲ್ಲ ಎಂದು ವರದಿ ಆಗಿದೆ.
‘ಲೈಗರ್’ ಸಿನಿಮಾ ರಿಲೀಸ್ ಆದ ಬಳಿಕ ವಿಜಯ್ ದೇವರಕೊಂಡ ಅವರನ್ನು ದೊಡ್ಡದೊಡ್ಡ ನಿರ್ಮಾಣ ಸಂಸ್ಥೆಗಳು ಹಾಗೂ ಸ್ಟಾರ್ ನಿರ್ದೇಶಕರು ಹುಡುಕಿ ಬರಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಹಾಗಾಗಿಲ್ಲ. ಬದಲಿಗೆ ವಿಜಯ್ ವೃತ್ತಿ ಜೀವನಕ್ಕೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ. ಶಿವ ನಿರ್ವಾಣ ನಿರ್ದೇಶನದ ‘ಖುಷಿ’ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಇದಾದ ಬಳಿಕ ಅವರ ಕೈಲಿ ಮತ್ಯಾವುದೇ ಪ್ರಾಜೆಕ್ಟ್ ಇಲ್ಲ.
ಸುಕುಮಾರ್ ಜತೆ ವಿಜಯ್ ದೇವರಕೊಂಡ ಸಿನಿಮಾ ಮಾಡಬೇಕಿತ್ತು. ಆದರೆ, ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಸುಕುಮಾರ್ ಬ್ಯುಸಿ ಆಗಿದ್ದಾರೆ. ಈ ಚಿತ್ರ ಯಶಸ್ಸು ಕಂಡರೆ ಸುಕುಮಾರ್ ಖ್ಯಾತಿ ಮತ್ತಷ್ಟು ಹೆಚ್ಚಲಿದೆ. ಆ ಬಳಿಕ ಸುಕುಮಾರ್ ಅವರು ವಿಜಯ್ ಜತೆ ಕೈ ಜೋಡಿಸೋದು ಅನುಮಾನ ಎಂಬುದು ಕೆಲವರ ಊಹೆ. ರಾಮ್ ಚರಣ್ ಅವರನ್ನು ಸುಕುಮಾರ್ ಇತ್ತೀಚೆಗೆ ಭೇಟಿ ಮಾಡಿದ್ದಾರೆ. ಇದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿದೆ. ಇಬ್ಬರೂ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡಗೆ ಇನ್ಸೆಕ್ಯೂರ್ ಭಾವನೆ ಇರಲಿಲ್ಲ’; ನೇರ ಮಾತಲ್ಲಿ ಹೇಳಿದ್ದ ರಶ್ಮಿಕಾ
ವಿಜಯ್ ದೇವರಕೊಂಡ ಅವರು ಸದ್ಯ ಗೌತಮ್ ನಾಯ್ಡು ತಿಣ್ಣನುರಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಗೌತಮ್ ಅವರು ರಾಮ್ ಚರಣ್ಗೆ ಕಥೆಯೊಂದನ್ನು ಹೇಳಿದ್ದರು. ಆದರೆ, ರಾಮ್ ಚರಣ್ಗೆ ಈ ಕಥೆ ಇಷ್ಟವಾಗಿಲ್ಲ. ಹೀಗಾಗಿ, ಅದನ್ನು ರಿಜೆಕ್ಟ್ ಮಾಡಿದ್ದರು. ಈಗ ಅದೇ ಕಥೆಯನ್ನು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.