
ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದಲ್ಲಿ ಫ್ಲಾಪ್ ಸ್ಟಾರ್ ಆಗಿದ್ದಾರೆ. ಅವರ ನಟನೆಯ ಹಲವಾರು ಸಿನಿಮಾಗಳು ಒಂದರ ಹಿಂದೊಂದರಂತೆ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿವೆ. ‘ಅರ್ಜುನ್ ರೆಡ್ಡಿ’ ಮೂಲಕ ಭಾರಿ ಗೆಲುವು ಕಂಡ ವಿಜಯ್ ದೇವರಕೊಂಡ, ತೆಲುಗು ಚಿತ್ರರಂಗದ ಫ್ಯೂಚರ್ ಸ್ಟಾರ್ ಎನ್ನಲಾಯ್ತು. ಅದರ ಬಳಿಕ ಬಂದ ‘ಗೀತಾ ಗೋವಿಂದಂ’ ಸಹ ದೊಡ್ಡ ಹಿಟ್ ಆಯ್ತು. ಆದರೆ ವಿಜಯ್ ದೇವರಕೊಂಡ ಗೆಲುವು ನೋಡಿದ್ದು ಅದೇ ಕೊನೆ. ‘ಡಿಯರ್ ಕಾರೇಡ್’ ಸಾಧಾರಣ ಯಶಸ್ಸು ಕಂಡಿತಾದರೂ ಆ ಬಳಿಕ ಬಂದ ಎಲ್ಲ ಸಿನಿಮಾಗಳು ಫ್ಲಾಪ್ ಆದವು.
ವಿಜಯ್ ದೇವರಕೊಂಡ ನಟನೆಯ ಸತತ ಒಂಬತ್ತು ಸಿನಿಮಾಗಳು ಫ್ಲಾಪ್ ಆಗಿವೆ. ಆಶ್ಚರ್ಯವೆಂದರೆ ಆದರೂ ಸಹ ವಿಜಯ್ ದೇವರಕೊಂಡಗೆ ಅವಕಾಶಗಳು ಕಡಿಮೆ ಆಗಿಲ್ಲ. ಒಂದಲ್ಲ ಒಂದು ಸಿನಿಮಾಗಳು ವಿಜಯ್ ದೇವರಕೊಂಡ ಕೈಯಲ್ಲಿವೆ. ಇದೀಗ ಅವರ ನಟನೆಯ ‘ಕಿಂಗ್ಡಮ್’ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆ ಆಗಲಿದೆ. ವಿಜಯ್ ದೇವರಕೊಂಡಗೆ ತಾವೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂಬ ಆಸೆ ಬಹಳ ಇತ್ತು. ಆದರೆ ಇತ್ತೀಚೆಗೆ ಅವರಿಗೆ ಬಾಲಿವುಡ್ನ ಭಾರಿ ದೊಡ್ಡ ಸಿನಿಮಾದಿಂದ ಆಫರ್ ಒಂದು ಬಂದಿತ್ತು. ಆದರೆ ವಿಜಯ್ ಅದನ್ನು ನಿರಾಕರಿಸಿದ್ದಾರೆ.
ಬಾಲಿವುಡ್ನ ದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾದ ‘ಡಾನ್’ ಸರಣಿಯ ಮೂರನೇ ಸಿನಿಮಾ ‘ಡಾನ್ 3’ ಸಿನಿಮಾದ ಮುಖ್ಯವಾದ ಪಾತ್ರಕ್ಕೆ ವಿಜಯ್ ದೇವರಕೊಂಡ ಅವರನ್ನು ಕೇಳಲಾಗಿತ್ತು. ಕಲ್ಟ್ ಸಿನಿಮಾಗಳಾಗಿರುವ ‘ದಿಲ್ ಚಾಹ್ತಾ ಹೈ’, ‘ಲಕ್ಷ್ಯ’, ‘ಡಾನ್’ ಸಿನಿಮಾಗಳನ್ನು ನಿರ್ದೇಶಿಸಿರುವ, ಸ್ಟಾರ್ ನಟರೂ ಆಗಿರುವ ಫರ್ಹಾನ್ ಅಖ್ತರ್, ಈಗ ‘ಡಾನ್ 3’ ಸಿನಿಮಾ ನಿರ್ದೇಶಿಸುತ್ತಿದ್ದು, ವಿಜಯ್ ದೇವರಕೊಂಡಗೆ ಮುಖ್ಯವಾದ ಪಾತ್ರವೊಂದಕ್ಕಾಗಿ ಕೇಳಲಾಗಿತ್ತು. ಆದರೆ ವಿಜಯ್ ಆಫರ್ ಅನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ:ತಂದೆಯಾದ ಖುಷಿಯಲ್ಲಿ ಹೊಸ ಕಾರು ಖರೀದಿಸಿದ ರಣ್ವೀರ್ ಸಿಂಗ್, ಬೆಲೆ ಎಷ್ಟು ಕೋಟಿ?
‘ಡಾನ್’ ಸಿನಿಮಾನಲ್ಲಿ ವಿಲನ್ ನಾಯಕನೇ ಆಗಿರುತ್ತಾನೆ. ಈ ಹಿಂದಿನ ಸಿನಿಮಾಗಳಲ್ಲಿ ಶಾರುಖ್ ಖಾನ್ ನಾಯಕ (ವಿಲನ್) ಆಗಿದ್ದರು. ಇದೀಗ ‘ಡಾನ್ 3’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ವಿಲನ್ ಅಥವಾ ನಾಯಕ ಆಗಿದ್ದಾರೆ. ಪೊಲೀಸ್ ಪಾತ್ರಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಕೇಳಲಾಗಿತ್ತು ಎನ್ನಲಾಗಿದೆ. ಆದರೆ ತಾವು ವಿಲನ್ ಪಾತ್ರದಲ್ಲಿ ಅಥವಾ ಪೋಷಕ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಅವಕಾಶವನ್ನು ನಿರಾಕರಿಸಿದ್ದಾರೆ ವಿಜಯ್ ದೇವರಕೊಂಡ. ಆ ಪಾತ್ರ ಬಾಲಿವುಡ್ ನಟ ‘12ತ್ ಫೇಲ್’ ಖ್ಯಾತಿಯ ವಿಕ್ರಾಂತ್ ಮಾಸ್ಸಿ ಪಾಲಾಗಿದೆ.
ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆ ಆಗಲಿದೆ. ಪಕ್ಕಾ ಆಕ್ಷನ್ ಸಿನಿಮಾ ಅದಾಗಿದೆ. ಅದರ ಬಳಿಕ ರಶ್ಮಿಕಾ ಮಂದಣ್ಣ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾನಲ್ಲಿ ವಿಜಯ್ ನಟಿಸಲಿದ್ದಾರೆ. ಅದಾದ ಬಳಿಕ ‘ಆರ್ಯ 3’ ಸಿನಿಮಾನಲ್ಲಿ ವಿಜಯ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ಅನ್ನು ಸುಕುಮಾರ್ ಅವರೇ ನಿರ್ದೇಶನ ಮಾಡಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ