‘ಬೈಕಾಟ್ ಗ್ಯಾಂಗ್’ ಬಗ್ಗೆ ವಿವೇಕ್ ಅಗ್ನಿಹೋತ್ರಿಗೆ ಅನುಮಾನ; ‘ಪಠಾಣ್​’ ತಂಡದ ಗಿಮಿಕ್ ಬಿಚ್ಚಿಟ್ಟ ನಿರ್ದೇಶಕ

ಬೈಕಾಟ್ ಮಾಡಬೇಕು ಎಂದು ಕೂಗುತ್ತಲೇ ಅನೇಕರು ಚಿತ್ರಕ್ಕೆ ಪ್ರಚಾರ ನೀಡಿದ್ದಾರೆ. ಇವರು ಸಾಮಾನ್ಯ ಬೈಕಾಟ್ ಗುಂಪಿನವರಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಈ

‘ಬೈಕಾಟ್ ಗ್ಯಾಂಗ್’ ಬಗ್ಗೆ ವಿವೇಕ್ ಅಗ್ನಿಹೋತ್ರಿಗೆ ಅನುಮಾನ; ‘ಪಠಾಣ್​’ ತಂಡದ ಗಿಮಿಕ್ ಬಿಚ್ಚಿಟ್ಟ ನಿರ್ದೇಶಕ
ಶಾರುಖ್​-ವಿವೇಕ್

Updated on: Feb 15, 2023 | 10:47 AM

‘ಪಠಾಣ್’ ಸಿನಿಮಾ (Pathaan Movie) ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಯಶಸ್ಸನ್ನು ಅರಗಿಸಿಕೊಳ್ಳೋಕೆ ಅನೇಕರಿಗೆ ಆಗುತ್ತಿಲ್ಲ. ಹೀಗಾಗಿ ಅನೇಕರು ಈ ಚಿತ್ರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ.  ಈಗ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ‘ಪಠಾಣ್​’ ಬಗ್ಗೆ ಕಿಡಿಕಾರಿದ್ದಾರೆ. ಸಿನಿಮಾ ಯಶಸ್ಸನ್ನು ಶಾರುಖ್ ಖಾನ್​ಗೆ (Shah Rukh Khan) ನೀಡಿರುವ ಅವರು ಚಿತ್ರದ ಗಳಿಕೆ ಬಗ್ಗೆ ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಅತಿಯಾದ ಪ್ರಚಾರದಿಂದ ಸಿನಿಮಾ ಹಣ ಮಾಡಿದೆ’ ಎಂದು ಅವರು ಹೇಳಿದ್ದಾರೆ.

‘ಪಠಾಣ್‌ ಬಳಿಕ ಎಲ್ಲರೂ ಅದೇ ಹಳೆಯ ವ್ಯವಸ್ಥೆಗೆ ಮರಳುತ್ತಾರೆ ಎಂಬ ಭಾವನೆ ನನ್ನದು. ಪಠಾಣ್‌ನ ಯಶಸ್ಸನ್ನು ನಾನು ಯಶಸ್ಸು ಎಂದು ಕರೆಯುವುದಿಲ್ಲ. ಅದನ್ನು ವಿಜಯ ಎಂದು ಹೇಳುತ್ತೇನೆ. ಇದು ಹಳೆಯ, ಶೋಷಣೆಯ, ಸ್ವಜನಪಕ್ಷಪಾತ ವ್ಯವಸ್ಥೆಯ ವಿಜಯವಾಗಿದೆ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

‘ಇಂದಿನ ಸಿನಿಮಾಗಳು ರಾಜಕೀಯ ಪ್ರಚಾರ ವೇದಿಕೆ ಆಗಿದೆ. ಪಠಾಣ್ ಚಿತ್ರದಿಂದ ರಾಜಕೀಯದವರಿಗೆ ಸಹಕಾರಿ ಆಗಿದೆ. ಸಿನಿಮಾ ತನ್ನ ವರ್ಚಸ್ಸಿನಿಂದ, ಶಾರುಖ್ ಖಾನ್ ಅವರ ಅಭಿಮಾನಿ ಬಳಗದಿಂದ ಗೆದ್ದಿದೆ. ಶಾರುಖ್ ಖಾನ್ ಅವರು ಇದು ತಮ್ಮ ಸಿನಿಮಾ ಎಂದು ಪ್ರಚಾರ ಮಾಡಿದರು. ಈ ಚಿತ್ರದ ಬಗ್ಗೆ ತಪ್ಪುತಪ್ಪಾದ ಹೇಳಿಕೆ ನೀಡಿದವರಿಗೂ ಈ ಯಶಸ್ಸಿನಲ್ಲಿ ಪಾಲು ಇದೆ. ಬೈಕಾಟ್ ಮಾಡಬೇಕು ಎಂದು ಕೂಗುತ್ತಲೇ ಅನೇಕರು ಚಿತ್ರಕ್ಕೆ ಪ್ರಚಾರ ನೀಡಿದ್ದಾರೆ. ಇವರು ಸಾಮಾನ್ಯ ಬೈಕಾಟ್ ಗುಂಪಿನವರಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಈ ಮೂಲಕ ಸಿನಿಮಾ ತಂಡದವರ ಗಿಮಿಕ್ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಅವರು ಶಾರುಖ್ ಖಾನ್ ಅವರನ್ನು ಹೊಗಳಿದ ವಿಡಿಯೋ ವೈರಲ್ ಆಗಿತ್ತು. ‘ಕೆಲವೇ ಸೆಕೆಂಡ್​ಗಳ ವಿಡಿಯೋನ ಕತ್ತರಿಸಿ ಪೋಸ್ಟ್​ ಮಾಡಿ ನನ್ನ ಹೇಳಿಕೆ ತಿರುಚಲಾಗಿದೆ. ಪೂರ್ತಿ ವಿಚಾರ ಬೇರೆಯೇ ಇದೆ’ ಎಂದು ಪೂರ್ತಿ ವಿಡಿಯೋದ ಲಿಂಕ್​ನ ವಿವೇಕ್ ಅಗ್ನಿಹೋತ್ರಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಅರ್ಬನ್ ನಕ್ಸಲ್ಸ್​ಗೆ ನಿದ್ದೆ ಬರುತ್ತಿಲ್ಲ’; ‘ಬೊಗಳುತ್ತಾರೆ, ಕಚ್ಚಲ್ಲ’ ಎಂಬ ಪ್ರಕಾಶ್​ ರಾಜ್ ಹೇಳಿಕೆಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ

‘ಪಠಾಣ್​’ ಸಿನಿಮಾ ವಿಶ್ವಾದ್ಯಂತ 953 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಪಠಾಣ್​’ ಗಳಿಕೆ ವಿಚಾರದ ಬಗ್ಗೆ ನಟ ಪ್ರಕಾಶ್ ರಾಜ್ ಅವರು ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ಅವರು ವಿವೇಕ್ ಅಗ್ನಿಹೋತ್ರಿ ಅವರನ್ನು ಟೀಕೆ ಮಾಡಿದ್ದರು. ‘ಮೂರ್ಖರು, ಮತಾಂಧರು ಬೊಗಳುತ್ತಾರೆ, ಕಚ್ಚಲ್ಲ’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Wed, 15 February 23