‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ

| Updated By: ರಾಜೇಶ್ ದುಗ್ಗುಮನೆ

Updated on: Mar 29, 2022 | 4:36 PM

ವಿವೇಕ್​ ಅವರ ಸಿನಿಮಾಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಬ್ರಿಟನ್​ ಸಂಸತ್ತಿನಿಂದ ಅವರಿಗೆ ಆಹ್ವಾನ ಬಂದಿದೆ. ಈ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಮಾತನಾಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ
ವಿವೇಕ್​-ಪಲ್ಲವಿ
Follow us on

1990ರ ಸಮಯದಲ್ಲಿ ಕಾಶ್ಮೀರದ ಪಂಡಿತರು (Kashmir Pandits) ಅನುಭವಿಸಿದ ಕಷ್ಟಗಳೇನು ಎನ್ನುವುದನ್ನು ‘ದಿ ಕಾಶ್ಮೀರ್ ಫೈಲ್ಸ್​’ (The Kashmir Files) ಸಿನಿಮಾ ಮೂಲಕ ಜನರ ಮುಂದಿಡುವ ಪ್ರಯತ್ನವನ್ನು ವಿವೇಕ್​ ಅಗ್ನಿಹೋತ್ರಿ (Vivek agnihotri) ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಷಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರು ಚಿತ್ರವನ್ನು ಹೊಗಳಿದ್ದರು. ಈಗ ಈ ವಿವೇಕ್​ ಅವರಿಗೆ ವಿಶೇಷ ಆಹ್ವಾನವೊಂದು ಬಂದಿದೆ. ಈ ಬಗ್ಗೆ ಅವರು ಸಂತಸ ಹಂಚಿಕೊಂಡಿದ್ದಾರೆ.

ವಿವೇಕ್​ ಅವರ ಸಿನಿಮಾಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಬ್ರಿಟನ್​ ಸಂಸತ್ತಿನಿಂದ ಅವರಿಗೆ ಆಹ್ವಾನ ಬಂದಿದೆ. ಈ ಬಗ್ಗೆ ಮಾತನಾಡಿರುವ ವಿವೇಕ್​ ಅಗ್ನಿಹೋತ್ರಿ, ‘ಪತ್ನಿ ಪಲ್ಲವಿ ಮತ್ತು ನನ್ನನ್ನು ಬ್ರಿಟನ್ ಸಂಸತ್​ನವರು ಆಹ್ವಾನಿಸಿದ್ದಾರೆ. ಮುಂದಿನ ತಿಂಗಳು ನಾವು ಅಲ್ಲಿಗೆ ಹೋಗುತ್ತೇವೆ. ಕಾಶ್ಮೀರಿ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶದಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾಡಲಾಗಿದೆ. ಬ್ರಿಟನ್​ ಸಂಸತ್ತಿಗೆ ಹೋಗುತ್ತಿರುವುದಕ್ಕೆ ನನಗೆ ಖುಷಿಯಿದೆ’ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಭಾಷೆಗಳಿಗೆ ಡಬ್​ ಆಗಲಿದೆ ಸಿನಿಮಾ.

ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡುವವರ ಹಾಗೂ ಹಿಂದಿ ಭಾಷೆಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ತುಂಬಾನೇ ಕಡಿಮೆ. ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ಹೀಗಾಗಿ, ಎಲ್ಲಾ ವಿಚಾರಗಳು ಇಲ್ಲಿಯವರಿಗೆ ತಲುಪದೇ ಇರಬಹುದು. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಮೊದಲಾದ ಭಾಷೆಗಳಿಗೆ ಡಬ್​ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆಯೂ ವಿವೇಕ್​ ಮಾಹಿತಿ ನೀಡಿದ್ದಾರೆ.

ವಿವೇಕ್​ ಅಗ್ನಿಹೋತ್ರಿಗೆ ವೈ ಭದ್ರತೆ

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮಾಡಿದ್ದಕ್ಕಾಗಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ಕೆಲವು ಬೆದರಿಕೆ ಕರೆಗಳು ಬರುತ್ತಿವೆ. ಸೋಶಿಯಲ್​ ಮೀಡಿಯಾದಲ್ಲೂ ಅವರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರದಿಂದ ತೀರ್ಮಾನಿಸಲಾಗಿದೆ. 7ರಿಂದ 8 ಜನ CRPF ಕಮಾಂಡೋಗಳು ವಿವೇಕ್​ ಅವರಿಗೆ ಭದ್ರತೆ ಒದಗಿಸಲಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಅವರಿಗೆ ಅನೇಕರು ಕೊಲೆ ಬೆದರಿಗೆ ಹಾಕಿದ್ದರು. ಆ ಕಾರಣದಿಂದ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯನ್ನು ಡಿಆ್ಯಕ್ಟೀವೇಟ್​​ ಮಾಡುವುದಾಗಿ ವಿವೇಕ್​ ಅಗ್ನಿಹೋತ್ರಿ ತಿಳಿಸಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ ಬೆದರಿಕೆ ಕರೆಗಳು ಹೆಚ್ಚಿವೆ ಎನ್ನಲಾಗಿದೆ.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​’ ಮಾತ್ರವಲ್ಲ, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?

‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ

Published On - 4:05 pm, Tue, 29 March 22