
ಬಾಲಿವುಡ್ನಲ್ಲಿ (Bollywood) ಈಗ ಸದ್ದು ಮಾಡುತ್ತಿರುವ ಸ್ಟಾರ್ ನಟರೆಂದರೆ ರಣ್ಬೀರ್ ಕಪೂರ್ ಮತ್ತು ಶಾರುಖ್ ಖಾನ್ ಮಾತ್ರ ಎನ್ನಬಹುದು. ಅದರಲ್ಲೂ ರಣ್ಬೀರ್ ಕಪೂರ್ ಅಂತೂ ಒಂದರ ಹಿಂದೊಂದು ಭಾರಿ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ, ಭಿನ್ನ ಪ್ರದೇಶದ ನಿರ್ದೇಶಕರೊಟ್ಟಿಗೆ ಕೊಲ್ಯಾಬರೇಷನ್ ಮೂಲಕ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ರಣ್ಬೀರ್ ಕಪೂರ್ಗಿಂತಲೂ ಹೆಚ್ಚು ಯಶಸ್ವಿ ಆಗಿದ್ದ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದ ರಣ್ವೀರ್ ಸಿಂಗ್ ಇತ್ತೀಚೆಗೆ ಬಹುತೇಕ ಕಣ್ಮರೆಯೇ ಆಗಿಬಿಟ್ಟಿದ್ದಾರೆ. ಅವರ ಸಿನಿಮಾಗಳ ಸದ್ದು, ಸುದ್ದಿ ಎರಡೂ ಇಲ್ಲದಂತಾಗಿದೆ.
ರಣ್ವೀರ್ ಸಿಂಗ್ ಅನ್ನು ರಣ್ಬೀರ್ ಕಪೂರ್ ಅವರ ಪಕ್ಕಾ ಪ್ರತಿಸ್ಪರ್ಧಿ ಎಂದೇ ಬಿಂಬಿಸಲಾಗಿತ್ತು. ರಣ್ವೀರ್ ಸಹ ತಮ್ಮ ನಟನೆ, ಎನರ್ಜಿಯಿಂದ ಕೆಲವಾರು ಸಿನಿಮಾಗಳನ್ನು ಗೆಲ್ಲಿಸಿದ್ದರು ಸಹ. ಆದರೆ ಇತ್ತೀಚೆಗೆ ಯಾಕೋ ತೀರಾ ಮಂಕಾಗಿಬಿಟ್ಟಂತಿದ್ದಾರೆ. ರಣ್ವೀರ್ ಸಿಂಗ್, ಸಿನಿಮಾಗಳಲ್ಲಿ ಅಲ್ಲದಿದ್ದರೂ ಯಾವುದಾದರೂ ಫ್ಯಾಷನ್ ಶೋಗಳಲ್ಲಿ, ಯಾವುದಾದರೂ ಪಾರ್ಟಿಗಳಲ್ಲಿ ಆದರೂ ಕಾಣಿಸಿಕೊಂಡು ಚರ್ಚೆಯಲ್ಲಿರುತ್ತಿದ್ದರು. ಆದರೆ ಕಳೆದ ಹಲವು ತಿಂಗಳಿಲ್ಲ ಆಸಾಮಿ ಮತ್ತೆಯೇ ಇಲ್ಲ.
ರಣ್ವೀರ್ ಸಿಂಗ್ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಆ ಸಿನಿಮಾದ ಯಶಸ್ಸು ಆಲಿಯಾ-ರಣ್ವೀರ್ ಮತ್ತು ಕರಣ್ ಜೋಹರ್ ಮೂವರಿಗೂ ಸಮಾನ ಹಂಚಿಕೆ ಆಯ್ತು. ಬಳಿಕ 2024 ರಲ್ಲಿ ಅಜಯ್ ದೇವಗನ್ ನಾಯಕರಾಗಿದ್ದ ‘ಸಿಂಘಂ ಅಗೇನ್’ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ರಣ್ವೀರ್ ಸಿಂಗ್ ಕಾಣಿಸಿಕೊಂಡರು. ಆ ಪಾತ್ರ ಹೆಚ್ಚೇನೂ ಸದ್ದಾಗಲಿಲ್ಲ. ಅದು ರಣ್ವೀರ್ ಸಿಂಗ್ ಸಿನಿಮಾ ಸಹ ಅಲ್ಲ ಬಿಡಿ, ಅದು ಅಜಯ್ ದೇವಗನ್ ಸಿನಿಮಾ.
ಇದನ್ನೂ ಓದಿ:ತಂದೆಯಾದ ಖುಷಿಯಲ್ಲಿ ಹೊಸ ಕಾರು ಖರೀದಿಸಿದ ರಣ್ವೀರ್ ಸಿಂಗ್, ಬೆಲೆ ಎಷ್ಟು ಕೋಟಿ?
ಅತ್ತಕಡೆ, ರಣ್ಬೀರ್ ಕಪೂರ್, ದಕ್ಷಿಣದ ಸಿನಿಮಾಗಳ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿ ಭರ್ಜರಿ ಹಿಟ್ ನೀಡುತ್ತಿದ್ದರೆ. ಇತ್ತ ರಣ್ವೀರ್ ಸಿಂಗ್ ದಕ್ಷಿಣದ ನಿರ್ದೇಶಕರ ಜೊತೆ ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ. ರಣ್ವೀರ್ ಸಿಂಗ್, ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾನಲ್ಲಿ ನಟಿಸಬೇಕಿತ್ತು ಆದರೆ ಕತೆ ಕೇಳಿದ ಬಳಿಕ ಸಿನಿಮಾನಲ್ಲಿ ನಟಿಸಲು ನಿರಾಕರಿಸಿದರು. ಅದಾದ ಬಳಿಕ ಮಲಯಾಳಂನ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಅವರ ನಿರ್ದೇಶನದಲ್ಲಿ ‘ಶಕ್ತಿಮಾನ್’ ಸಿನಿಮಾನಲ್ಲಿ ನಟಿಸಬೇಕಿತ್ತು. ಆದರೆ ಆ ಸಿನಿಮಾದಿಂದಲೂ ಅವರು ಹೊರನಡೆದರು.
ಈಗ ರಣ್ವೀರ್ ಸಿಂಗ್ ‘ಧುರಂಧರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಚಿತ್ರೀಕರಣವಾಗುತ್ತಿದೆ. ಸಿನಿಮಾ ಭರ್ಜರಿ ಆಕ್ಷನ್ ಸಿನಿಮಾ ಆಗಿದ್ದು, ರಣ್ವೀರ್ ಭರ್ಜರಿ ಕಮ್ ಬ್ಯಾಕ್ ಮಾಡಲು ತಯಾರಾಗುತ್ತಿದ್ದಾರೆ. ಈ ಸಿನಿಮಾ ಮೇಲೆ ರಣ್ವೀರ್ ಸಿಂಗ್ಗೆ ಭಾರಿ ನಿರೀಕ್ಷೆ ಇದ್ದು, ಈ ಸಿನಿಮಾ ಅವರಿಗೆ ಪುನರ್ಜೀವನ ನೀಡುವ ವಿಶ್ವಾಸ ಅವರಿಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ