AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್ ಜೊತೆಗೂ ನಟಿಸಿದ್ದ ಬಾಲಿವುಡ್ ಹಿರಿಯ ನಟ ಪಂಜಜ್ ನಿಧನ

Pankaj Dheer: ವಿಷ್ಣುವರ್ಧನ್ ಜೊತೆಗೆ ಎರಡು ಸಿನಿಮಾ, ಅನಂತ್​​​ನಾಗ್ ಜೊತೆಗೆ ಒಂದು ಸಿನಿಮಾ ಸೇರಿದಂತೆ ಹಿಂದಿಯ ಹಲವಾರು ಬಲು ಜನಪ್ರಿಯ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪಂಕಜ್ ಧೀರ್ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪಂಕಜ್ ಅವರ ಪುತ್ರನೂ ಸಹ ನಟ. ಅವರು ಕನ್ನಡದಲ್ಲಿಯೂ ನಟಿಸಿದ್ದಾರೆ.

ವಿಷ್ಣುವರ್ಧನ್ ಜೊತೆಗೂ ನಟಿಸಿದ್ದ ಬಾಲಿವುಡ್ ಹಿರಿಯ ನಟ ಪಂಜಜ್ ನಿಧನ
Pankaj Dheer
ಮಂಜುನಾಥ ಸಿ.
|

Updated on: Oct 15, 2025 | 3:01 PM

Share

ಭಾರತದ ಬಲು ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ನಟ ಪಂಕಜ್ ಧೀರ್ ಇಂದು (ಅಕ್ಟೋಬರ್ 15) ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪಂಕಜ್ ಧೀರ್ ಅವರು ಹಲವು ವರ್ಷಗಳಿಂದಲೂ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದರು. ಇತ್ತೀಚೆಗಷ್ಟೆ ಕ್ಯಾನ್ಸರ್ ಗಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ನಿಧನ ಹೊಂದಿದ್ದಾರೆ.

ಪಂಕಜ್ ಅವರು ಹಿಂದಿಯ ಹಲವಾರು ಜನಪ್ರಿಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾಗಳಲ್ಲಿಯೂ ಸಹ ಪಂಜಕ್ ನಟಿಸಿದ್ದಾರೆ. ವಿಷ್ಣುವರ್ಧನ್ ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾನಲ್ಲಿ ಪಂಕಜ್ ಧೀರ್ ಅವರು ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ 2005 ರಲ್ಲಿ ಬಿಡುಗಡೆ ಆದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಸಹ ಡಿಸಿಪಿ ಸಮರ್ಜೀತ್ ಸಿಂಗ್ ಪಾತ್ರದಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ‘ಬರ’ ಸಿನಿಮಾನಲ್ಲಿಯೂ ಪಂಕಜ್ ನಟಿಸಿದ್ದಾರೆ. ‘ಬರ’ ಸಿನಿಮಾಎಂಎಸ್ ಸತ್ಯು ನಿರ್ದೇಶಿಸಿದ್ದರು. ಅನಂತ್ ನಾಗ್ ನಾಯಕ.

ಇದನ್ನೂ ಓದಿ:ಬಾಲಿವುಡ್​ ಸ್ಟಾರ್ ಜೊತೆ ಸಿನಿಮಾ, ಏಜೆಂಟ್ ಮಿರ್ಚಿ ಆದ ಶ್ರೀಲೀಲಾ

ಪಂಕಜ್ ಧೀರ್ ಅವರು ಬಿಆರ್ ಚೋಪ್ರಾ ನಿರ್ದೇಶನದ ‘ಮಹಾಭಾರತ’ ಧಾರಾವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಅವರಿಗೆ ಭಾರಿ ದೊಡ್ಡ ಜನಪ್ರಿಯತೆ ತಂದಿತ್ತು. ಅದಾದ ಬಳಿಕ ಅಷ್ಟೇ ಜನಪ್ರಿಯವಾದ ‘ಚಂದ್ರಕಾಂತ’ ಧಾರಾವಾಹಿಯಲ್ಲಿಯೂ ಸಹ ಪಂಕಜ್ ಧೀರ್ ನಟಿಸಿದ್ದರು. ‘ಸಸುರಾಲ್ ಸಿಮರ್ ಕಾ’, ‘ರಿಶ್ತೆ’, ‘ಕಾನೂನ್’, ‘ದೇವೋಂಕಾ ದೇವ್ ಮಹಾದೇವ್’ ಇನ್ನೂ ಹಲವಾರು ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ.

ಪಂಕಜ್ ಧೀರ್ ಅವರು ಹಿಂದಿಯ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಾರುಖ್ ಖಾನ್ ನಟನೆಯ ‘ಬಾದ್​​ಶಾ’, ಸಲ್ಮಾನ್ ಖಾನ್ ಜೊತೆಗೆ ‘ಸನಮ್ ಬೇವಫಾ’, ‘ಜಾಗೃತಿ’, ಸಂಜಯ್ ದತ್ ಜೊತೆಗೆ ‘ಸಡಕ್’, ಅಕ್ಷಯ್ ಜೊತೆಗೆ ‘ಇಕ್ಕೆ ಪೆ ಇಕ್ಕಾ’ ಇನ್ನೂ ಹಲವಾರು ಸೂಪರ್ ಸ್ಟಾರ್​​ಗಳ ಜೊತೆಗೆ ಹಲವಾರು ಸಿನಿಮಾಗಳಲ್ಲಿ ಪಂಕಜ್ ಧೀರ್ ನಟಿಸಿದ್ದಾರೆ. 2024 ರಲ್ಲಿ ಪ್ರಸಾರ ಆರಂಭಿಸಿದ್ದ ‘ಧ್ರುವ ತಾರ’ ಪಂಕಜ್ ನಟಿಸಿದ್ದ ಕೊನೆಯ ಧಾರಾವಾಹಿ.

ಪಂಕಜ್ ಧೀರ್ ಅವರ ಪುತ್ರ ನಿಕಿತಿನ್ ಧೀರ್ ಸಹ ನಟರಾಗಿದ್ದು ಹಿಂದಿ, ತೆಲುಗು, ಕನ್ನಡದ ಕೆಲ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದಲ್ಲಿ ನಿಕಿತಿನ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ