‘ನಂದ ಗೋಕುಲ’: ನಡೆದೇ ಬಿಡ್ತು ವಲ್ಲಭ-ಅಮೂಲ್ಯ ಮದುವೆ; ತಲೆತಿರುಗಿ ಬಿದ್ದ ನಂದ
ನಂದ ಗೋಕುಲ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಶತ್ರುಗಳಾಗಿದ್ದ ಅಮೂಲ್ಯ ಮತ್ತು ವಲ್ಲಭ ಈಗ ಪತಿ-ಪತ್ನಿಯರಾಗಿದ್ದಾರೆ. ಸಿದ್ದು ಮೋಸದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಅಮೂಲ್ಯಳನ್ನು ವಲ್ಲಭನ ತಾಯಿ ಮನೆಗೆ ಕರೆತಂದು ಮದುವೆ ಮಾಡಿಸಿದ್ದಾರೆ. ಈ ಮದುವೆಯಿಂದ ನಂದ ಮತ್ತು ಅಮೂಲ್ಯರ ಕುಟುಂಬಕ್ಕೆ ತೀವ್ರ ಆಘಾತವಾಗಿದೆ.

‘ನಂದ ಗೋಕುಲ’ ಧಾರಾವಾಹಿಯಲ್ಲಿ ನಂದನ ಮನೆಗೂ ಹಾಗೂ ಆತನ ಸಹೋದರನ ಮನೆ ಮಧ್ಯೆ ದೊಡ್ಡ ಅಂತರ ಬೆಳೆದಿತ್ತು. ಈ ಅಂತರ ದೂರ ಆಗುವ ಸಮಯ ಬಂದೇ ಬಿಟ್ಟಿದೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕೆ ಕಾರಣ ಆಗಿದ್ದು, ಅಮೂಲ್ಯ ಮದುವೆ ಮುರಿದು ಬಿದ್ದಿದ್ದು. ಆ ಸಂದರ್ಭದಲ್ಲಿ ನಂದ ತನ್ನ ಸಹೋದರರ ಪರವಾಗಿ ಮಾತನಾಡಿದ್ದ. ಆತ್ಮಹತ್ಯೆಗೆ ಹೊರಟವನ ಬದುಕಿಸಿದ್ದಾಗ. ಹೀಗಿರುವಾಗಲೇ ವಲ್ಲಭ ಹಾಗೂ ಅಮೂಲ್ಯ ವಿವಾಹ ನಡೆದಿದೆ.
‘ನಂದ ಗೋಕುಲ’ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ಸಿದ್ಧು ಪರಸ್ಪರ ಪ್ರೀತಿಸುತ್ತಾ ಇದ್ದರು. ಆದರೆ, ಸಿದ್ದು ಕೇವಲ ಹಣದ ಆಸೆಗೆ ಪ್ರೀತಿ ಮಾಡಿದ್ದ. ಆ ವಿಚಾರ ರಿವೀಲ್ ಆಗಿದೆ. ಅಷ್ಟೇ ಅಲ್ಲ, ಆಕೆಗೆ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದು ಓಡಿಸಿಕೊಂಡು ಹೋಗಿದ್ದ. ಹೀಗೆ ಓಡಿಸಿಕೊಂಡು ಹೋಗುವಾಗ ಆಕೆ ಬಳಿ ಚಿನ್ನ ತರುವಂತೆ ಹೇಳಿದ್ದ.
ಈ ಚಿನ್ನವನ್ನು ಅಮೂಲ್ಯ ಬಳಿಯಿಂದ ಕಸಿದುಕೊಂಡು ಸಿದ್ಧು ಪರಾರಿಯಾಗಿದ್ದಾನೆ. ಈ ವೇಳೆ ದಿಕ್ಕು ತೋಚದೆ ಆಕೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಈ ಸಮಯಕ್ಕೆ ಸರಿಯಾಗಿ ಚಿನ್ನು ಅವಳನ್ನು ಕಾಪಾಡಿದ್ದಾಳೆ. ಆಗ ವಲ್ಲಭ ಹಾಗೂ ಅವನ ತಾಯಿ ಸಿಕ್ಕಿದ್ದಾಳೆ. ಈ ವೇಳೆ ವಲ್ಲಭನ ತಾಯಿ ದೊಡ್ಡ ನಿರ್ಧಾರ ತೆಗೆದುಕೊಂಡಳು. ವಲ್ಲಭ ಹಾಗೂ ಅಮೂಲ್ಯನನ್ನು ಮದುವೆ ಮಾಡಲು ನಿರ್ಧರಿಸಿದಳು.
ಈ ಮದುವೆ ಯಶಸ್ವಿಯಾಗಿ ಆಗಿದೆ. ಅಮೂಲ್ಯ ಹಾಗೂ ವಲ್ಲಭ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದವರು. ಈಗ ಇವರು ಒಂದಾಗುತ್ತಾರೆ ಎಂದಾಗ ಒಂದಷ್ಟು ಫನ್ ನಿರೀಕ್ಷಿಸಬಹುದು. ಅದಕ್ಕೂ ಮೊದಲು ಮನೆಯವರನ್ನು ಎದುರಿಸಬೇಕಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇದನ್ನೂ ಓದಿ: ‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್
ಅಮೂಲ್ಯ ಹಾಗೂ ವಲ್ಲಭ ಮದುವೆ ಆಗಿ ಮನೆಗೆ ಬಂದಿದ್ದಾರೆ. ಇದನ್ನು ನೋಡಿ ನಂದ ತಲೆತಿರುಗಿ ಬಿದ್ದಿದ್ದಾನೆ. ಅಮೂಲ್ಯಾ ಮನೆಯವರಿಗೂ ಇದು ಶಾಕಿಂಗ್ ಎನಿಸಿದೆ. ಮಗಳನ್ನು ಕೊಲ್ಲಲು ಮುಂದಾದವರು ಈಗ ಅಮೂಲ್ಯ-ವಲ್ಲಭನ ಮದುವೆ ನೋಡಿ ಮತ್ತಷ್ಟು ಕೋಪಗೊಳ್ಳುವ ಸಾಧ್ಯತೆ ಇದೆ. ದೊಡ್ಡ ಟ್ವಿಸ್ಟ್ನಿಂದ ಧಾರಾವಾಹಿ ಕಥೆ ಬೇರೆ ದಿಕ್ಕಲ್ಲಿ ಸಾಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







