ನಟ ಶಾರುಖ್ ಖಾನ್ (Shah Rukh Khan) ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ‘ಡಂಕಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಸಾಕಷ್ಟು ಕುತೂಹಲ ಮೂಡಿತ್ತು. ಈಗ ಶಾರುಖ್ ಖಾನ್ ನಟನೆಯ ‘ಪಠಾಣ್’ ಹಾಗೂ ‘ಜವಾನ್’ (Jawan Movie) ಸಿನಿಮಾ ಹಿಟ್ ಆದ ಬಳಿಕ ‘ಡಂಕಿ’ ಚಿತ್ರದ ಬಗ್ಗೆ ಇರುವ ನಿರೀಕ್ಷೆ ದ್ವಿಗುಣವಾಗಿದೆ. ಈ ಚಿತ್ರದಲ್ಲಿ ಏನೆಲ್ಲ ಇರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಭಿಮಾನಿಗಳಿಂದ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ತಮ್ಮದೇ ಸ್ಟೈಲ್ನಲ್ಲಿ ಶಾರುಖ್ ಉತ್ತರ ನೀಡಿದ್ದಾರೆ.
ಶಾರುಖ್ ಖಾನ್ ಅಭಿಮಾನಿ ಬಳಗ ದೊಡ್ಡದಿದೆ. ಸಮಯ ಸಿಕ್ಕಾಗ ಅವರು ಟ್ವಿಟರ್ನಲ್ಲಿ #AskSRK ಸೆಷನ್ ನಡೆಸುತ್ತಾರೆ. ಅಭಿಮಾನಿಗಳು ತಮ್ಮಿಷ್ಟದ ಪ್ರಶ್ನೆ ಮುಂದಿಡಬಹುದು. ಇದಕ್ಕೆ ಶಾರುಖ್ ಖಾನ್ ಉತ್ತರಿಸುವ ಪ್ರಯತ್ನ ಮಾಡುತ್ತಾರೆ. ಅವರಿಗೆ ಹಲವು ರೀತಿಯ ಪ್ರಶ್ನೆಗಳು ಎದುರಾಗುತ್ತವೆ. ಆ ಪೈಕಿ ‘ಡಂಕಿ’ ಸಿನಿಮಾ ಬಗ್ಗೆಯೂ ಪ್ರಶ್ನೆ ಕೇಳಲಾಗಿದೆ.
‘ಮಾಸ್, ಕ್ಲಾಸ್ ಎಲ್ಲಾ ಆಯ್ತು. ಡಂಕಿ ಸಿನಿಮಾದಲ್ಲಿ ಅಂಥದ್ದೇನಿರಲಿದೆ’ ಎಂದು ಅಭಿಮಾನಿಯೋರ್ವ ಕೇಳಿದ್ದಾನೆ. ಇದಕ್ಕೆ ಶಾರುಖ್ ಖಾನ್ ಅವರ ಉತ್ತರ ಸಖತ್ ಫನ್ನಿ ಆಗಿತ್ತು. ‘ಡಂಕಿ ಚಿತ್ರದಲ್ಲಿ ರಾಜ್ಕುಮಾರ್ ಹಿರಾನಿ ಇದ್ದಾರೆ. ಮತ್ತಿನ್ನೇನು ಬೇಕು’ ಎಂದು ಶಾರುಖ್ ಕೇಳಿದ್ದಾರೆ.
ಶಾರುಖ್ ಖಾನ್ ಅವರ ಈ ಉತ್ತರವನ್ನು ಅನೇಕರು ಒಪ್ಪಿಕೊಂಡಿದ್ದಾರೆ. ರಾಜ್ಕುಮಾರ್ ಹಿರಾನಿ ಅವರು ತಮ್ಮ ವೃತ್ತಿ ಜೀವನದಲ್ಲಿ ಆಗೊಂದು ಈಗೊಂದು ಸಿನಿಮಾ ಮಾಡುತ್ತಾರೆ. ಪ್ರತಿ ಚಿತ್ರಕ್ಕೆ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರ್ಫೆಕ್ಟ್ ಸ್ಕ್ರಿಪ್ಟ್ ರೆಡಿ ಮಾಡಿ ಅಖಾಡಕ್ಕೆ ಇಳಿಯುತ್ತಾರೆ. ಅವರು ಸಿನಿಮಾ ಮಾಡಿದರೆ ಯಶಸ್ಸು ಖಚಿತ ಅನ್ನೋದು ಹಲವರ ಅಭಿಪ್ರಾಯ. ಇದು ಸಾಬೀತಾಗಿದೆ ಕೂಡ. ‘ಡಂಕಿ’ ಸಿನಿಮಾದಲ್ಲಿ ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಇರಲಿದೆ ಎಂದು ಈ ಮೊದಲು ರಾಜ್ಕುಮಾರ್ ಹಿರಾನಿ ತಿಳಿಸಿದ್ದರು.
Dunki mein Raju Hirani hai!!! Aur kya chahiye??!! https://t.co/Kiz0eb4FKh
— Shah Rukh Khan (@iamsrk) September 22, 2023
ಇದನ್ನೂ ಓದಿ: ಶಾರುಖ್ ಖಾನ್ ಬಳಿ ಇರುವ ಐಶಾರಾಮಿ ಕಾರುಗಳು ಯಾವುವು? ಇಲ್ಲಿದೆ ಮಾಹಿತಿ
ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಗಡಿ ತಲುಪವ ಸಮೀಪದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 am, Sat, 23 September 23