ಪರಿಣೀತಿ ಚೋಪ್ರಾ ಮದುವೆಗೆ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಬರಲ್ವಾ? ಮೂಡಿದೆ ಅನುಮಾನ

ಪರಿಣೀತಿ ಚೋಪ್ರಾ-ರಾಘವ್​ ಚಡ್ಡಾ ಅವರ ವಿವಾಹಪೂರ್ವ ಕಾರ್ಯಗಳು ಈಗಾಗಲೇ ಆರಂಭ ಆಗಿವೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಭಾಗಿ ಆಗಿದ್ದಾರೆ. ಆದರೆ ಪ್ರಿಯಾಂಕಾ ಚೋಪ್ರಾ ಬರುವ ಸೂಚನೆ ಸಿಕ್ಕಿಲ್ಲ. ತಂಗಿಯ ಮದುವೆಗೆ ಅವರು ಚಕ್ಕರ್​ ಹಾಕುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಕಾರಣವೂ ಇದೆ.

ಪರಿಣೀತಿ ಚೋಪ್ರಾ ಮದುವೆಗೆ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಬರಲ್ವಾ? ಮೂಡಿದೆ ಅನುಮಾನ
ಪ್ರಿಯಾಂಕಾ ಚೋಪ್ರಾ, ಪರಿಣೀತಿ ಚೋಪ್ರಾ, ರಾಘವ್​ ಚಡ್ಡಾ
Follow us
|

Updated on: Sep 22, 2023 | 8:21 PM

ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ (Parineeti Chopra) ಅವರು ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಮ್​ ಆದ್ಮಿ ಪಕ್ಷದ ನಾಯಕ ರಾಘವ್​ ಚಡ್ಡಾ ಜೊತೆ ಅವರ ಮದುವೆ ನಡೆಯಲಿದೆ. ಸೆಪ್ಟೆಂಬರ್​ 23 ಮತ್ತು 24ರಂದು ವಿವಾಹ ಸಮಾರಂಭ ಜರುಗಲಿದೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಪರಿಣೀತಿ ಚೋಪ್ರಾ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಹತ್ತಿರದ ಸಂಬಂಧಿಗಳು. ಹಾಗಾಗಿ ಪರಿಣೀತಿ ಮದುವೆಗೆ ಪ್ರಿಯಾಂಕಾ ಬರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಪ್ರಿಯಾಂಕಾ ಚೋಪ್ರಾ ಅವರು ಚಕ್ಕರ್​ ಹಾಕುವ ಸಾಧ್ಯತೆ ಇದೆ. ಆ ಕುರಿತು ಈಗ ಫ್ಯಾನ್ಸ್​ ವಲಯದಲ್ಲಿ ಚರ್ಚೆ ಶುರುವಾಗಿದೆ. ಇತ್ತ, ಉದಯಪುರದಲ್ಲಿ ಪರಿಣೀತಿ ಚೋಪ್ರಾ-ರಾಘವ್​ ಚಡ್ಡಾ (Parineeti Chopra Wedding) ಮದುವೆಗೆ ಎಲ್ಲ ತಯಾರಿ ನಡೆದಿದೆ.

ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಗಾಯಕ ನಿಕ್​ ಜೋನಸ್​ ಜೊತೆ ಮದುವೆ ಆದ ಬಳಿಕ ಅವರು ಬಾಲಿವುಡ್​ ಜೊತೆ ಹೆಚ್ಚು ನಂಟು ಹೊಂದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಭಾರತಕ್ಕೆ ಬರುತ್ತಾರೆ. ಹಿಂದಿ ಸಿನಿಮಾಗಳನ್ನು ಕೂಡ ಅವರೀಗ ಒಪ್ಪಿಕೊಳ್ಳುತ್ತಿಲ್ಲ. ತಂಗಿ ಮದುವೆಗೆ ಪ್ರಿಯಾಂಕಾ ಚೋಪ್ರಾ ಬರುತ್ತಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ಕೂಡ ಇದೆ. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ಬಿಟ್ಟುಬರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ವಿವಾಹ: ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

ಈಗಾಗಲೇ ಪರಿಣೀತಿ ಚೋಪ್ರಾ ಅವರ ವಿವಾಹಪೂರ್ವ ಕಾರ್ಯಗಳು ಆರಂಭ ಆಗಿವೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಭಾಗಿ ಆಗಿದ್ದಾರೆ. ಒಂದು ವೇಳೆ ಪ್ರಿಯಾಂಕಾ ಚೋಪ್ರಾ ಬರುವುದಾಗಿದ್ದರೆ ಇಷ್ಟು ಹೊತ್ತಿಗಾಗಲೇ ಅವರು ಇಂಡಿಯಾದಲ್ಲಿ ಲ್ಯಾಂಡ್​ ಆಗಿರಬೇಕಿತ್ತು. ಮದುವೆಗೆ ಬರಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದಲೇ ಅವರು ಎಂಗೇಜ್​ಮೆಂಟ್​ಗೆ ಬಂದು ಹೋಗಿದ್ದರು. ಈಗ ಅಮೆರಿಕದಿಂದಲೇ ಸಹೋದರಿಗೆ ಅಭಿನಂದನೆ ಮತ್ತು ಶುಭ ಹಾರೈಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕುಟುಂಬದವರಿಂದಲೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್​ನಲ್ಲಿ ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆ; ಇಲ್ಲಿದೆ ವಿವರ

ಪರಿಣೀತಿ ಚೋಪ್ರಾ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್​ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್