ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ವಿವಾಹ: ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

Parineeti-Raghav: ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ ಸೆಪ್ಟೆಂಬರ್ 23-24ರಂದು ನಡೆಯಲಿದೆ. ಈ ಇಬ್ಬರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಇಬ್ಬರಲ್ಲಿ ಯಾರು ಹೆಚ್ಚು ಶ್ರಿಮಂತರು?

ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ವಿವಾಹ: ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
ಪರಿಣೀತಿ-ರಾಘವ್
Follow us
ಮಂಜುನಾಥ ಸಿ.
|

Updated on: Sep 22, 2023 | 6:32 PM

ನಟಿ ಪರಿಣೀತಿ ಚೋಪ್ರಾ (Parineeti chopra) ಮತ್ತು ಸಂಸದ ರಾಘವ್ ಚಡ್ಡಾ (Raghav chadha) ವಿವಾಹವಾಗಲಿದ್ದಾರೆ. ಸೆಪ್ಟೆಂಬರ್ 23 ಮತ್ತು 24 ರಂದು ಇವರ ವಿವಾಹ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಇಬ್ಬರ ಕುಟುಂಬದ ಸದಸ್ಯರು ಈಗಾಗಲೇ ಉದಯಪುರ ತಲುಪಿದ್ದು ವಿವಾಹಪೂರ್ವ ಶಾಸ್ತ್ರಗಳು, ಮೆಹಂದಿ, ಸಂಗೀತ್ ಇನ್ನಿತರೆ ಕಾರ್ಯಕ್ರಮಗಳು ಜೋರಾಗಿ ನಡೆಯಲಿದೆ. ಇಬ್ಬರೂ ಸಹ ಜನಪ್ರಿಯ ವ್ಯಕ್ತಿಗಳಾಗಿದ್ದಾರೆ. ಆದರೆ ಇಬ್ಬರಲ್ಲಿ ಯಾರು ಶ್ರೀಮಂತರು, ಇವರಿಬ್ಬರ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ.

ರಾಘವ್ ಚಡ್ಡಾ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಜೊತೆಗೆ ಎಎಪಿ ಸಂಸದರೂ ಆಗಿದ್ದಾರೆ. ಕಳೆದ ಪಂಜಾಬ್ ಚುನಾವಣೆ ಸಮಯದಲ್ಲಿ ಅವರು ಸಲ್ಲಿಸಿದ ಅಫಿಡವಿಟ್​ನಲ್ಲಿ ತಮ್ಮ ವಿದ್ಯಾರ್ಹತೆ, ಆಸ್ತಿಗಳ ಬಗ್ಗೆ ದಾಖಲೆಯನ್ನು ರಾಘವ್ ಚಡ್ಡಾ ನೀಡಿದ್ದರು. ಅವರೇ ಸಲ್ಲಿಸಿರುವ ದಾಖಲೆಗಳ ಪ್ರಕಾರ ರಾಘವ್ ಚಡ್ಡಾರ ಒಟ್ಟಾರೆ ಆಸ್ತಿ ಮೌಲ್ಯ 40 ಲಕ್ಷ ರೂಪಾಯಿಗಳು.

ಅಫಿಡವಿಟ್ ಸಲ್ಲಿಸಿದ ಸಮಯದಲ್ಲಿ ಅವರ ಬಳಿ 30,000 ನಗದು ಹಣವನ್ನು ಹೊಂದಿದ್ದರು. ಬ್ಯಾಂಕ್​ನ ಉಳಿತಾಯ ಖಾತೆಯಲ್ಲಿ 9.50 ಲಕ್ಷ ಹಣ, ಟ್ಯಾಕ್ಸ್ ಸೇವಿಂಗ್ಸ್ ಹೂಡಿಕೆ, ಎಫ್​ಡಿಗಳಲ್ಲಿ ಐದು ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ನಂತರ ಮ್ಯೂಚ್ಯುಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿ 6.50 ಲಕ್ಷ ಹೂಡಿಕೆ ಮಾಡಿದ್ದಾರೆ. 53 ಸಾವಿರ ರೂಪಾಯಿಗಳ ಎಲ್​ಐಸಿ ವಿಮೆಯನ್ನು ಹೊಂದಿದ್ದಾರೆ. 2019ರ ಮಾಡೆಲ್​ನ ಒಂದು ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದಾರೆ. ಅದರ ಮೌಲ್ಯ 2020ರ ವೇಳೆಯಲ್ಲಿ 1.32 ಲಕ್ಷ ಮಾತ್ರವೇ ಇತ್ತು. 90 ಗ್ರಾಂ ಚಿನ್ನ ಹೊಂದಿದ್ದು ಅದರ ಮೌಲ್ಯ ಸುಮಾರು 5 ಲಕ್ಷ.

ಇದನ್ನೂ ಓದಿ:ಪರಿಣೀತಿ-ರಾಘವ್ ಚಡ್ಡಾ ಮಾತ್ರವಲ್ಲ; ಈ ಸೆಲೆಬ್ರಿಟಿಗಳು ಮದುವೆ ಆಗೋಕೆ ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ರು

ಅವರ ಒಡೆತನದ ರಾಘವ್ ಚಡ್ಡಾ ಆಂಡ್ ಅಸೋಸಿಯೇಟ್ಸ್​ನ ಬ್ಯಾಂಕ್ ಖಾತೆಯಲ್ಲಿ 9 ಲಕ್ಷ ಹಣವಿದೆ. ಎಫ್​ಡಿಗಳಿಂದ ಸುಮಾರು 47 ಸಾವಿರ ಬಡ್ಡಿ ಗಳಿಸಿದ್ದಾರೆ. ಎಲ್ಲವನ್ನೂ ಒಟ್ಟು ಮಾಡಿದರೆ 2020-21ರಲ್ಲಿ ರಾಘವ್ ಚಡ್ಡಾರ ಒಟ್ಟು ಆಸ್ತಿ ಮೌಲ್ಯ 36.99 ಲಕ್ಷ ಮಾತ್ರವೇ ಇತ್ತು. ಎರಡು ವರ್ಷದಲ್ಲಿ ರಾಘವ್ ಚಡ್ಡಾರ ಆಸ್ತಿ ಮೌಲ್ಯ ಸುಮಾರು 40 ಅಥವಾ 45 ಲಕ್ಷಕ್ಕೆ ಹೆಚ್ಚಿರಬೇಕು.

ರಾಘವ್ ಚಡ್ಡಾಗೆ ಹೋಲಿಸಿದರೆ ನಟಿ ಪರಿಣೀತಿ ಚೋಪ್ರಾ ಆಸ್ತಿ ಮೌಲ್ಯ ಬಹಳ ಹೆಚ್ಚಿದೆ. ಕೆಲವು ಬಾಲಿವುಡ್ ಮ್ಯಾಗಜೀನ್​ಗಳ ವರದಿಗಳ ಪ್ರಕಾರ, ಪರಿಣೀತಿಯ ಒಟ್ಟು ಆಸ್ತಿ ಮೌಲ್ಯ 60 ಕೋಟಿಗೂ ಹೆಚ್ಚು. ಪ್ರತಿ ಸಿನಿಮಾಕ್ಕೆ ಒಂದು ಕೋಟಿಗೂ ಹೆಚ್ಚು ಹಣವನ್ನು ಪರಿಣೀತಿ ಸಂಭಾವನೆಯಾಗಿ ಪಡೆಯುತ್ತಾರೆ. ಪರಿಣೀತಿಯ ಒಂದು ಸಿನಿಮಾದ ಸಂಭಾವನೆ, ರಾಘವ್ ಚಡ್ಡಾರ ಒಟ್ಟು ಆಸ್ತಿ ಮೌಲ್ಯಕ್ಕಿಂತಲೂ ದುಪ್ಪಟ್ಟು. ಇಬ್ಬರ ಪ್ರೀತಿಯ ನಡುವೆ ಹಣ ಅಡ್ಡಿಬರುವುದಿಲ್ಲ ಎಂಬ ಅಚಲ ನಂಬಿಕೆಯಲ್ಲಿ ಈ ಜೋಡಿ ವಿವಾಹವಾಗುತ್ತಿದೆ. ಈ ಇಬ್ಬರ ಮದುವೆಗೆ ಬಾಲಿವುಡ್ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿ ಶುಭ ಕೋರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ