7 ಕೋಟಿ ರೂಪಾಯಿಗೆ ಕುಸಿಯಿತು ‘ಜವಾನ್​’ ಸಿನಿಮಾದ ಕಲೆಕ್ಷನ್​; ವೀಕೆಂಡ್​ನಲ್ಲಿ ಕಾದಿದೆ ಅಚ್ಚರಿ

ಶಾರುಖ್​ ಖಾನ್​ ಪತ್ನಿ ಗೌರಿ ಖಾನ್​ ಅವರು ‘ಜವಾನ್​’ ಸಿನಿಮಾದ ನಿರ್ಮಾಪಕಿ. ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆದಿದೆ. ಭಾರತದ ಮಾರುಕಟ್ಟೆಯಲ್ಲಿ 16 ದಿನಕ್ಕೆ ‘ಜವಾನ್​’ ಟೋಟಲ್​ ಕಲೆಕ್ಷನ್​ 532 ಕೋಟಿ ರೂಪಾಯಿ ಆಗಿದೆ.

7 ಕೋಟಿ ರೂಪಾಯಿಗೆ ಕುಸಿಯಿತು ‘ಜವಾನ್​’ ಸಿನಿಮಾದ ಕಲೆಕ್ಷನ್​; ವೀಕೆಂಡ್​ನಲ್ಲಿ ಕಾದಿದೆ ಅಚ್ಚರಿ
ಶಾರುಖ್​​ ಖಾನ್​
Follow us
|

Updated on: Sep 23, 2023 | 10:00 AM

ಬಾಕ್ಸ್ ಆಫೀಸ್​ನಲ್ಲಿ ಯಾವುದೇ ಸಿನಿಮಾ ಸತತ 16 ದಿನಗಳ ಕಾಲ ಅಬ್ಬರಿಸುವುದು ಎಂದರೆ ಸಣ್ಣ ವಿಚಾರ ಅಲ್ಲ. ಶಾರುಖ್​ ಖಾನ್​ (Shah Rukh Khan) ನಟನೆಯ ‘ಜವಾನ್​’ ಸಿನಿಮಾ ಅಂತಹ ಸಾಧನೆ ಮಾಡಿದೆ. ಬಿಡುಗಡೆಯಾಗಿ 16 ದಿನ ಕಳೆದರೂ ಕೂಡ ಈ ಸಿನಿಮಾದ ಹವಾ ನಿಂತಿಲ್ಲ. 16ನೇ ದಿನ ಕೂಡ ಈ ಸಿನಿಮಾ 7 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಎಷ್ಟೋ ಸಿನಿಮಾಗಳು ಮೊದಲ ದಿನ ಕೂಡ ಇಷ್ಟ ಕಲೆಕ್ಷನ್​ ಮಾಡಲಾಗದೇ ಒದ್ದಾಡಿದ ಉದಾಹರಣೆ ಇದೆ. ಹೀಗಿರುವಾಗ ಶಾರುಖ್​ ಖಾನ್​ ಅಭಿನಯದ ‘ಜವಾನ್​’ ಸಿನಿಮಾ (Jawan Movie) ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಮಾಯಿ ಮಾಡಿ ಮುನ್ನುಗ್ಗುತ್ತಿದೆ. ಮೂರನೇ ವೀಕೆಂಡ್​ನಲ್ಲಿ ಈ ಸಿನಿಮಾ ಮತ್ತೆ ಮ್ಯಾಜಿಕ್​ ಮಾಡುವ ನಿರೀಕ್ಷೆ ಇದೆ. ಇಂದು (ಸೆ.23) ಮತ್ತು ಭಾನುವಾರ (ಸೆ.24) ಈ ಚಿತ್ರ ಕಲೆಕ್ಷನ್​ನಲ್ಲಿ (Jawan Box Office Collection) ಏರಿಗೆ ಆಗುವ ಸಾಧ್ಯತೆ ದಟ್ಟವಾಗಿದೆ.

ನಿರ್ದೇಶಕ ಅಟ್ಲಿ ಅವರು ‘ಜವಾನ್​’ ಸಿನಿಮಾವನ್ನು ಸಖತ್​ ಮಾಸ್​ ಆಗಿ ಕಟ್ಟಿಕೊಟ್ಟಿದ್ದಾರೆ. ಬಹುತಾರಾಗಣ ಇರುವುದು ಕೂಡ ಈ ಸಿನಿಮಾದ ಪ್ಲಸ್​ ಪಾಯಿಂಟ್​. ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಲೆಹರ್​ ಖಾನ್​, ವಿಜಯ್​ ಸೇತುಪತಿ, ಸುನಿಲ್​ ಗ್ರೋವರ್​, ದೀಪಿಕಾ ಪಡುಕೋಣೆ ಮುಂತಾದವರು ಶಾರುಖ್​ ಖಾನ್​ ಜೊತೆ ತೆರೆಹಂಚಿಕೊಂಡಿದ್ದಾರೆ. ಎಲ್ಲರ ಪಾತ್ರಕ್ಕೂ ಸೂಕ್ತ ಮನ್ನಣೆ ಸಿಕ್ಕಿದೆ. ಆ ಮೂಲಕ ಸಿನಿಮಾದ ಮೆರುಗು ಹೆಚ್ಚಿದೆ.

ಇದನ್ನೂ ಓದಿ: ಶಾರುಖ್​ ಖಾನ್​ಗೆ ಮುತ್ತಿಗೆ ಹಾಕಿ ಕಿಸ್​ ಮಾಡಿದ ಮಹಿಳಾ ಅಭಿಮಾನಿಗಳ ವಿಡಿಯೋ ವೈರಲ್​; ಇದು ದೌರ್ಜನ್ಯ ಎಂದ ನೆಟ್ಟಿಗರು

ಶಾರುಖ್​ ಖಾನ್​ ಪತ್ನಿ ಗೌರಿ ಖಾನ್​ ಅವರು ‘ಜವಾನ್​’ ಸಿನಿಮಾದ ನಿರ್ಮಾಪಕಿ. ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆದಿದೆ. ಭಾರತದ ಮಾರುಕಟ್ಟೆಯಲ್ಲಿ 16 ದಿನಕ್ಕೆ ‘ಜವಾನ್​’ ಟೋಟಲ್​ ಕಲೆಕ್ಷನ್​ 532 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ 967 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಆಗಿದೆ. ಶೀಘ್ರದಲ್ಲೇ ಸಾವಿರ ಕೋಟಿ ರೂಪಾಯಿ ಕ್ಲಬ್​ಗೆ ಈ ಸಿನಿಮಾ ಸೇರ್ಪಡೆ ಆಗಿದೆ. ಗೌರಿ ಖಾನ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ವಿಶ್ವ ಬಾಕ್ಸ್​ ಆಫೀಸ್​ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಕಳೆದ ಕೆಲವು ವರ್ಷಗಳಿಂದ ಶಾರುಖ್​ ಖಾನ್​ ಅವರು ಸಾಲು ಸಾಲು ಸೋಲು ಕಾಣುತ್ತಿದ್ದರು. ಆದರೆ 2023ರ ವರ್ಷದಲ್ಲಿ ಅವರ ಲಕ್​ ಬದಲಾಗಿದೆ. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳು ಧೂಳೆಬ್ಬಿಸಿವೆ. ಈ ವರ್ಷದ ಅಂತ್ಯದಲ್ಲಿ ‘ಡಂಕಿ’ ಸಿನಿಮಾ ಕೂಡ ಬಿಡುಗಡೆ ಆಗಲಿದ್ದು, ಅದು ಸೂಪರ್​ ಹಿಟ್​ ಆದರೆ ಶಾರುಖ್​ ಖಾನ್​ ಪಾಲಿಗೆ ಹ್ಯಾಟ್ರಿಕ್​ ಗೆಲವು ಸಿಕ್ಕಂತೆ ಆಗಲಿದೆ. ಹಾಗೆ ಆಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ‘ಡಂಕಿ’ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಜೋರಾಗಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್