‘ಯಶೋದಾ’ ಚಿತ್ರದ ಮೊದಲನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 12, 2022 | 3:53 PM

ಸಮಂತಾ ನಟನೆಯ ‘ಯಶೋದಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರ ಮೊದಲನೆಯ ದಿನವೇ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಭಾರತ ಮತ್ತು ವಿದೇಶದಲ್ಲಿ ಸಿನಿಮಾ ಉತ್ತಮ ಕಮಾಯಿ ಮಾಡಿದೆ.

‘ಯಶೋದಾ ಚಿತ್ರದ ಮೊದಲನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?
ಸಮಂತಾ
Follow us on

ಸಮಂತಾ(samantha) ರುತ್​ ಪ್ರಭು ಅವರ ‘ಯಶೋದಾ‘ (yashoda) ಸಿನಿಮಾ ಶುಕ್ರವಾರ(ನವೆಂಬರ್ 11) ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ಚಿತ್ರ ಮೊದಲನೇ ದಿನವೇ ಅಂದಾಜು 3.5 ಕೋಟಿ ರೂಪಾಯಿ ಗಳಿಸಿದೆ. ‘ಪೊನ್ನಿಯಿನ್ ಸೆಲ್ವನ್​-1’ ಮತ್ತು ‘ಕಾಂತಾರ’ ರೀತಿ ‘ಯಶೋದಾ’ ಸಿನಿಮಾ ಮುಂದಿನ ದಿನಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾರ್ವೆಲ್ ಸ್ಟುಡಿಯೋಸ್​ನ ‘ಬ್ಲ್ಯಾಕ್​ ಪ್ಯಾಂಥರ್: ವಕಾಂಡ ಫಾರೆವರ್’​ ಸಿನಿಮಾ ಕೂಡ ರಿಲೀಸ್ ಆಗಿದ್ದು, ಭರ್ಜರಿ ಸ್ಪರ್ಧೆ ಉಂಟಾಗಿದೆ.

ಇನ್ನು ಈ ಚಿತ್ರಕ್ಕೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದ ಸಮಂತಾ ಅವರು ಟ್ವಿಟರ್​ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ‘ಈ ಬಾರಿ ಎಂದಿಗಿಂತಲೂ ಹೆಚ್ಚು ನಾನು ನಿಮ್ಮ ಬೆಂಬಲಕ್ಕಾಗಿ ಪ್ರಾರ್ಥಿಸುತ್ತೇನೆ, ಬಿಡುಗಡೆಯ ಸಂದರ್ಭದಲ್ಲಿ ನೀವು ನನ್ನ ಮತ್ತು ಯಶೋದಾ ಚಿತ್ರದ ಮೇಲೆ ತೋರಿದ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ನೀವು ನನ್ನ ಕುಟುಂಬ, ಈ ಸಿನಿಮಾವನ್ನು ನೋಡಿ ಆನಂದಿಸುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ’; ಸಮಂತಾ ನಟನೆಯ ‘ಯಶೋದಾ’ ನೋಡಿ ಮೆಚ್ಚಿಕೊಂಡ ಫ್ಯಾನ್ಸ್

ಸಮಂತಾ ಅವರ ಅನಾರೋಗ್ಯದ ಮಧ್ಯೆಯು ‘ಯಶೋದಾ’ ಸಿನಿಮಾ ರಿಲೀಸ್​ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಯಶೋದಾ’ ಸಿನಿಮಾವನ್ನು ಹರಿ ಶಂಕರ್​ ಮತ್ತು ಹರೀಶ್ ಇಬ್ಬರೂ ಸೇರಿ ನಿರ್ದೇಶನ ಮಾಡಿದ್ದು, ಶಿವಲೆಂಕ ಕೃಷ್ಣ ಪ್ರಸಾದ್​ ಬಂಡವಾಳ ಹೂಡಿದ್ದಾರೆ. ಉನ್ನಿ ಮುಕುಂದನ್​, ವರಲಕ್ಷ್ಮಿ ಶರತ್​ಕುಮಾರ್​, ರಾವ್​ ರಮೇಶ್​ ಮತ್ತು ಮುರಳಿ ಶರ್ಮಾ ಅವರು ನಟಿಸಿದ್ದು, ಮಣಿ ಶರ್ಮಾ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ