‘ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ’; ಸಮಂತಾ ನಟನೆಯ ‘ಯಶೋದಾ’ ನೋಡಿ ಮೆಚ್ಚಿಕೊಂಡ ಫ್ಯಾನ್ಸ್

Yashoda Movie Twitter Review: ಕೈಗೆ ಡ್ರಿಪ್ ಹಾಕಿಕೊಂಡು ಅವರು ‘ಯಶೋದಾ’ ಕೆಲಸ ಪೂರ್ಣಗೊಳಿಸಿದ ಫೋಟೋ ವೈರಲ್ ಆಗಿತ್ತು. ಅವರು ಈ ಪರಿ ಶ್ರಮ ಹಾಕಿರುವುದು ಫಲ ನೀಡಿದೆ.

‘ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ’; ಸಮಂತಾ ನಟನೆಯ ‘ಯಶೋದಾ’ ನೋಡಿ ಮೆಚ್ಚಿಕೊಂಡ ಫ್ಯಾನ್ಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 11, 2022 | 2:36 PM

ಸಮಂತಾ (Samantha) ಅವರು ಯಶೋದ (Yashoda Movie) ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಈ ಚಿತ್ರದಲ್ಲಿ ಅವರು ಬಾಡಿಗೆ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇಂದು (ನವೆಂಬರ್ 11) ರಿಲೀಸ್ ಆಗಿದೆ. ಈ ಚಿತ್ರ ನೋಡಿದ ಎಲ್ಲರೂ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಸಿನಿಮಾ ಸಖತ್ ಥ್ರಿಲ್ಲಿಂಗ್ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವರು ಇದೊಂದು ಉತ್ತಮ ಚಿತ್ರ ಎಂದು ತೀರ್ಪು ನೀಡಿದ್ದಾರೆ.

ಸಮಂತಾ ಅವರು ಸದ್ಯ ಅನಾರೋಗ್ಯದಿಂದ ಬಳುತ್ತಿದ್ದಾರೆ. ವಿಚಿತ್ರ ಕಾಯಿಲೆ ಅವರಿಗೆ ಅಂಟಿದ್ದು, ಇದರಿಂದ ಅವರಿಗೆ ಸ್ನಾಯುಗಳಲ್ಲಿ ನೋವು ಶುರುವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಆದರೆ, ಇದಕ್ಕೆ ಚಿಕಿತ್ಸೆ ಸಿಗದೆ ಇದ್ದರೆ ತೊಂದರೆ ಆಗೋದು ಖಚಿತ ಎಂದು ವೈದ್ಯರು ಹೇಳಿದ್ದರು. ಇದರ ಮಧ್ಯೆಯೇ ಸಮಂತಾ ಅವರು ‘ಯಶೋದಾ’ ಡಬ್ಬಿಂಗ್ ಮಾಡಿದ್ದರು. ಕೈಗೆ ಡ್ರಿಪ್ ಹಾಕಿಕೊಂಡು ಅವರು ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿದ ಫೋಟೋ ವೈರಲ್ ಆಗಿತ್ತು. ಅವರು ಈ ಪರಿ ಶ್ರಮ ಹಾಕಿರುವುದು ಫಲ ನೀಡಿದೆ.

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

‘ಯಶೋದಾ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಮೊದಲಾರ್ಧ ನೋಡಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧ ಭಾವನಾತ್ಮಕವಾಗಿದೆ. ಒಂದು ಉತ್ತಮ ಸಿನಿಮಾ. ಬಿಜಿಎಂ ಉತ್ತಮವಾಗಿದೆ’ ಎಂದು ಸಮಂತಾ ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ‘ಒಂದು ಒಳ್ಳೆಯ ಸಿನಿಮಾ. ಇದು ಒಟಿಟಿ ಸಿನಿಮಾ ಅಲ್ಲ. ಚಿತ್ರಮಂದಿರದಲ್ಲೂ ಈ ಸಿನಿಮಾನ ಕಣ್ತುಂಬಿಕೊಳ್ಳಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಕೆಲವರಿಗೆ ಈ ಚಿತ್ರ ತುಂಬಾನೇ ಇಷ್ಟವಾಗಿದೆ. ‘ಬಹಳ ಸಮಯದ ನಂತರ ಒಂದೊಳ್ಳೆಯ ಚಿತ್ರ ನೋಡಿದೆ. ಆನಂದ ಭಾಷ್ಪ ಬರುತ್ತಿದೆ. ಸಮಂತಾ ನಿಮ್ಮ ಪರ್ಫಾರ್ಮೆನ್ಸ್ ಅದ್ಭುತವಾಗಿದೆ. ನಾನು ನಿಮ್ಮ ಜತೆ ಇದ್ದೇವೆ. ಒಂದು ಬ್ಲಾಕ್​ಬಸ್ಟರ್ ಸಿನಿಮಾ ನೀಡಿದ ನಿಮಗೆ ಧನ್ಯವಾದ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.

ಇದನ್ನೂ ಓದಿ: Samantha: ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಮೊದಲ ಬಾರಿ ಮುಖ ತೋರಿಸಿದ ನಟಿ ಸಮಂತಾ

ಸಮಂತಾ ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಮರೆದಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿದೆ. ಕೆಲವರು ಚಿತ್ರದ ಕಥೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಾರೆ ಸಮಂತಾ ಈ ಚಿತ್ರದ ಮೂಲಕ ಒಂದು ದೊಡ್ಡ ಗೆಲುವು ಕಾಣುವ ಸೂಚನೆ ಸಿಕ್ಕಿದೆ. ಇತ್ತೀಚೆಗೆ ಸಂದರ್ಶನ ನೀಡುತ್ತಾ ಸಮಂತಾ ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.