Samantha: ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ ಮೊದಲ ಬಾರಿ ಮುಖ ತೋರಿಸಿದ ನಟಿ ಸಮಂತಾ
Samantha Ruth Prabhu: ಇಷ್ಟು ದಿನಗಳ ಕಾಲ ಸಮಂತಾ ಮುಖ ತೋರಿಸದೇ ಇರಲು ಏನೋ ಬಲವಾದ ಕಾರಣ ಇದೆ ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ ಈಗ ಅಭಿಮಾನಿಗಳ ಆತಂಕ ದೂರ ಆಗಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಾಣುತ್ತಿದ್ದಾರೆ. ಒಂದೆಡೆ ಅವರ ವೃತ್ತಿಜೀವನ ಸೂಪರ್ ಆಗಿ ಸಾಗುತ್ತಿದೆ. ಆದರೆ ವೈಯಕ್ತಿಕ ಬದುಕು ಸ್ವಲ್ಪ ತೊಂದರೆಗೆ ಸಿಲುಕಿದೆ. ದಾಂಪತ್ಯಕ್ಕೆ ಅಂತ್ಯ ಹಾಡಿ ಅವರು ಡಿವೋರ್ಸ್ ಪಡೆದಿದ್ದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು. ಆ ಬೇಸರ ಇನ್ನೇನು ಮರೆಯಬೇಕು ಎಂಬಷ್ಟರಲ್ಲಿ ಸಮಂತಾ ಅವರ ಆರೋಗ್ಯ ಸಮಸ್ಯೆ (Samantha Health Problem) ಬಗ್ಗೆ ಸುದ್ದಿ ಕೇಳಿಬಂತು. ಅವರಿಗೆ ಅನಾರೋಗ್ಯ ಕಾಡಲು ಶುರುವಾದ ಬಳಿಕ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಸಾರ್ವಜನಿಕವಾಗಿ ಅವರು ಮುಖ ತೋರಿಸಿರಲಿಲ್ಲ. ಬಹಳ ದಿನಗಳ ನಂತರ ಅವರೀಗ ಫೋಟೋ (Samantha New Photo) ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಖುಷಿ ಆಗಿದ್ದಾರೆ.
ಸಮಂತಾ ಅವರಿಗೆ Myositis ಹೆಸರಿನ ಅಪರೂಪದ ಕಾಯಿಲೆ ಇದೆ. ಈ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯು ಸೆಳೆತ ಶುರುವಾಗುತ್ತದೆ. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. 30-60ರ ವಯಸ್ಸಿನವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಸಮಂತಾ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಷಯ ಕೆಲವೇ ದಿನಗಳ ಹಿಂದೆ ತಿಳಿದುಬಂತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದರು.
‘ಯಶೋದಾ ಚಿತ್ರದ ಟ್ರೇಲರ್ಗೆ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು. ನಿಮ್ಮ ಪ್ರೀತಿ ನನಗೆ ಸವಾಲುಗಳನ್ನು ಎದುರಿಸಲು ಶಕ್ತಿ ನೀಡಿದೆ. ಕೆಲ ತಿಂಗಳ ಹಿಂದೆ ನನ್ನಲ್ಲಿ Myositis ಹೆಸರಿನ ಸಮಸ್ಯೆ ಇರುವುದು ಪತ್ತೆ ಆಯಿತು. ಇದು ಕಡಿಮೆ ಆದ ನಂತರದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುತ್ತಿದೆ’ ಎಂದು ಸಮಂತಾ ಇತ್ತೀಚೆಗೆ ಅಪ್ಡೇಟ್ ನೀಡಿದ್ದರು.
ಈಗ ಸಮಂತಾ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಅವರು ಅಭಿಮಾನಿಗಳಿಗಾಗಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಸಮಂತಾ ಮುಖ ತೋರಿಸದೇ ಇರಲು ಏನೋ ಬಲವಾದ ಕಾರಣ ಇದೆ ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ ಈಗ ಅಭಿಮಾನಿಗಳ ಆತಂಕ ದೂರ ಆಗಿದೆ.
Like my good friend @rajndk Raj says , no matter what the day is like, and how shitty things are, his motto is to Shower Shave Show up !! I borrowed it for a day ♥️ For #yashodathemovie promotions .. see you on the 11th pic.twitter.com/9u6bZK3cd2
— Samantha (@Samanthaprabhu2) November 7, 2022
ಸಮಂತಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ನಟಿಸಿರುವ ‘ಯಶೋದ’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಸಿನಿಮಾ ನವೆಂಬರ್ 11ರಂದು ತೆರೆಕಾಣಲಿದೆ. ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದ ಕೆಲಸಗಳಲ್ಲೂ ಸಮಂತಾ ತೊಡಗಿಕೊಂಡಿದ್ದಾರೆ. ಇದಲ್ಲದೇ, ವಿಜಯ್ ದೇವರಕೊಂಡ ಜೊತೆ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.