18ನೇ ವಯಸ್ಸಿಗೆ ಮದುವೆ, 19ನೇ ವಯಸ್ಸಿಗೆ ಆತ್ಮಹತ್ಯೆ; ನಟಿಯ ದುರಂತ ಅಂತ್ಯದ ಕಥೆ

Divya Bharathi: ದಿವ್ಯಾ ಭಾರತಿ ಬಾಲಿವುಡ್​ನ ದುರಂತ ನಟಿ. ಅತ್ಯಂತ ಕಡಿಮೆ ವಯಸ್ಸಿಗೆ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ದಿವ್ಯಾ ಭಾರತಿ ಅದೇ ಎಳೆಯ ವಯಸ್ಸಿನಲ್ಲಿ ಇಲ್ಲವಾಗಿಬಿಟ್ಟರು. ಅವರ ಸಾವು ಇಂದಿಗೂ ನಿಗೂಢ.

18ನೇ ವಯಸ್ಸಿಗೆ ಮದುವೆ, 19ನೇ ವಯಸ್ಸಿಗೆ ಆತ್ಮಹತ್ಯೆ; ನಟಿಯ ದುರಂತ ಅಂತ್ಯದ ಕಥೆ
Updated By: ಮಂಜುನಾಥ ಸಿ.

Updated on: Nov 10, 2024 | 3:34 PM

ನಟಿ ದಿವ್ಯಾ ಭಾರತಿ ನಿಧನರಾಗಿ ಹಲವು ವರ್ಷಗಳೇ ಕಳೆದಿವೆ. ದಿವ್ಯಾ ಭಾರತಿ 19ನೇ ವಯಸ್ಸಿನಲ್ಲಿ ನಿಧನರಾದರು. ನಟಿ ಸತ್ತು 30 ವರ್ಷ ಕಳೆದರೂ ಅವರ ಸಾವು ಇನ್ನೂ ನಿಗೂಢವಾಗಿದೆ. ಇಂದಿಗೂ ದಿವ್ಯಾ ಭಾರತಿ ಹಿತಾ ಸಾವಿನ ಬಗ್ಗೆ ಹಲವು ಸಂಗತಿಗಳು ಚರ್ಚೆ ಆಗುತ್ತಲೇ ಇರುತ್ತವೆ. ನಟ ಶಾರುಖ್ ಖಾನ್ ಕೂಡ ದಿವ್ಯಾ ಸಾವಿನ ಬಗ್ಗೆ ಮಾತನಾಡಿದ್ದರು. ಇದಲ್ಲದೇ ನಟಿಯ ಪಾತ್ರದ ಬಗ್ಗೆಯೂ ಅವರು ಹೇಳಿದ್ದರು.

ಹಳೆಯ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಈಬಗ್ಗೆ ಹೇಳಿಕೆ ನೀಡಿದ್ದರು. ‘ದಿವ್ಯಾ ಭಾರತಿ ನಟಿಯಾಗಿ ತುಂಬಾ ಸ್ಟ್ರಾಂಗ್ ಆಗಿದ್ದರು. ನಾನು ಗಂಭೀರವಾಗಿ ಇರುತ್ತಿದ್ದೆ. ದಿವ್ಯಾ ಯಾವಾಗಲೂ ಸಂತೋಷವಾಗಿರುತ್ತಿದ್ದರು’ ಎಂದಿದ್ದರು ಶಾರುಖ್ ಖಾನ್.

‘ಒಮ್ಮೆ ಹೋಟೆಲ್‌ನಿಂದ ಹೊರಬಂದ ನಂತರ ದಿವ್ಯಾರನ್ನು ನೋಡಿದೆ. ದಿವ್ಯಾ ನನ್ನತ್ತ ನೋಡಿ, ‘ನೀನು ಕೇವಲ ನಟನಲ್ಲ, ಒಂದು ಸಂಸ್ಥೆ’ ಎಂದಿದ್ದರು. ದಿವ್ಯಾ ಯಾಕೆ ಹಾಗೆ ಹೇಳಿದಳೋ ತಿಳಿಯಲಿಲ್ಲ. ಆದರೆ ನನಗೆ ಗೊತ್ತಾದಾಗ ಆ ಒಂದು ಮಾತಿನಲ್ಲಿ ಬಹಳಷ್ಟು ಅರ್ಥ ಅಡಗಿತ್ತು ಎಂದು ಅರಿವಾಯಿತು’ ಎಂದು ಶಾರುಖ್ ಖಾನ್ ಹೇಳಿದ್ದರು.

‘ನಾನು ದೆಹಲಿಯಲ್ಲಿದ್ದೆ. ನಾನು ಮಲಗಿದ್ದೆ. ಆಗ ದಿವ್ಯಾ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಂತು. ಅವರು ಬಾಲ್ಕನಿಯಿಂದ ಬಿದ್ದಿದ್ದರು. ಅವರ ನಿಧನದ ಸುದ್ದಿ ಕೇಳಿದ ನಂತರ, ನಾನು ಆಘಾತಕ್ಕೊಳಗಾಗಿದ್ದೆ. ನಾನು ಅವರೊಂದಿಗೆ ಇನ್ನಷ್ಟು ಚಿತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:ಮದುವೆ ನಂತರವೂ ಬೇರೆ ಸಂಬಂಧ ಇಟ್ಟುಕೊಂಡಿದ್ದ ಬಾಲಿವುಡ್‌ ನಟರು

ದಿವ್ಯಾ ಅವರ ಬಗ್ಗೆ ಹೇಳುವುದಾದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಬಾಲಿವುಡ್ ಮತ್ತು ಅಭಿಮಾನಿಗಳ ಹೃದಯವನ್ನು ಆಳಿದ ನಟಿ. ದಿವ್ಯಾ ಅವರ ಕೊನೆಯ ಸಿನಿಮಾ ‘ಕ್ಷತ್ರಿಯ’. ನಟಿಯ ಮರಣದ ನಂತರ ಅವರ ‘ರಂಗ್’, ‘ತೊಳಿ ಮುದ್ದು’ ಮತ್ತು ‘ಶತ್ರಂಜ್’ ಚಿತ್ರಗಳು ಬಿಡುಗಡೆಯಾದವು. ಇಂದಿಗೂ ದಿವ್ಯಾ ಯಾವುದೋ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ದಿವ್ಯಾ ಅವರು ಗ್ಲಾಮರ್ ಮೂಲಕ ಗಮನ ಸೆಳೆದರು. ಸಾಯುವುದಕ್ಕೂ ಒಂದು ವರ್ಷ ಮೊದಲು ಅಂದರೆ ತಮ್ಮ 18ನೇ ವಯಸ್ಸಿಗೆ ನಿರ್ಮಾಪಕ ಸಾಜಿಯಾ ನಾಡಿಯಾದ್ವಾಲಾ ಅವರನ್ನು ವಿವಾಹ ಆಗಿದ್ದರು. ಸಾವಿನ ಹಿಂದೆ ಇವರ ಬಗ್ಗೆ ಅನುಮಾನ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ