ಬಾಲಿವುಡ್ ಅಭಿಮಾನಿಗಳು ಸದ್ಯ ನಟ ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ಅವರ ಕಲ್ಯಾಣದ ಗುಂಗಿನಲ್ಲಿದ್ದಾರೆ. ಆದರೆ ಸದ್ಯದಲ್ಲೇ ಬಾಲಿವುಡ್ ಮತ್ತೊಂದು ಅದ್ದೂರಿ ಮದುವೆಗೆ ಸಜ್ಜಾಗುತ್ತಿದೆ. ಈಗಾಗಲೇ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ, ಆ ತಾರಾ ಜೋಡಿ ಮಾತ್ರ ಈ ಕುರಿತು ತುಟಿಕ್-ಪಿಟಿಕ್ ಎಂದಿಲ್ಲ. ಹೌದು, ಕೆಲಕಾಲದಿಂದ ಜೊತೆಯಾಗಿ ಸುತ್ತಾಡುತ್ತಾ, ಇದೀಗ ದಾಂಪತ್ಯಕ್ಕೆ ಕಾಲಿರಿಸಲು ಸಿದ್ಧತೆ ನಡೆಸಿರುವುದು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಜೋಡಿ. ಸದ್ಯ ಎಲ್ಲೆಡೆ ಇವರದ್ದೇ ಮಾತು. ಇದೀಗ ಬಾಲಿವುಡ್ ಗಾಸಿಪ್ ಅಂಗಳದಿಂದ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. ಅದೇನೆಂದರೆ, ಕತ್ರಿನಾ ಮದುವೆಯ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆಯೇ ಎಂಬುದು. ಇದಕ್ಕೆ ಗಾಸಿಪ್ ಪ್ರಿಯರು ತಮ್ಮ ತಮ್ಮ ವಾದ ಹೂಡಿ, ಸಮರ್ಥನೆಯನ್ನೂ ಮಾಡುತ್ತಿದ್ದಾರೆ. ಅಷ್ಟಕ್ಕೂ, ಏನಿದು ಸಮಾಚಾರ? ಮುಂದೆ ಓದಿ.
ಸದ್ಯ ಕೇಳಿಬರುತ್ತಿರುವ ಗುಸು ಗುಸು ಪ್ರಕಾರ, ಕತ್ರಿನಾ ಕೈಫ್ ತಮ್ಮ ಹೆಸರನ್ನು ಮದುವೆಯ ನಂತರ- ಕತ್ರಿನಾ ಕೈಫ್ ಕೌಶಲ್ ಎಂದು ಬದಲಾಯಿಸಬಹುದು. ಒಂದು ವೇಳೆ ಅವರು ಹೀಗೆ ಹೆಸರು ಬದಲಾಯಿಸಿದ್ದೇ ಆದರೆ, ಅವರ ಮುಂಬರುವ ಬಹುನಿರೀಕ್ಷಿತ ‘ಟೈಗರ್ 3’ ಚಿತ್ರದಲ್ಲೂ ಅದೇ ಹೆಸರು ಕಾಣಿಸಿಕೊಳ್ಳಲಿದೆ ಎನ್ನುತ್ತಿದ್ದಾರೆ ಗಾಸಿಪ್ ಮಂದಿ. ಕತ್ರಿನಾ ಆಪ್ತವಲಯದ ಪ್ರಕಾರ, ಒಂದು ತಮಾಷೆಯ ಸುದ್ದಿಯೂ ಕೇಳಿ ಬರುತ್ತಿದೆ. ಅದೇನೆಂದರೆ, ಕತ್ರಿನಾ ಕೈಫ್ ‘ಕೆಕೆ’ ಎಂದು ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ಅವರು ಕತ್ರಿನಾ ಕೈಫ್ ಕೌಶಲ್ ಎಂದು ಹೆಸರು ಬದಲಾಯಿಸಿಕೊಂಡರೆ, ಅವರ ಹೆಸರು ‘ಕೆಕೆಕೆ’ ಆಗಲಿದೆ ಎಂದು ಅವರ ಸ್ನೇಹಿತರು ತಮಾಷೆ ಮಾಡುತ್ತಿದ್ದಾರಂತೆ!
ಬಾಲಿವುಡ್ನಲ್ಲಿ ಮದುವೆಯ ನಂತರ ಹೆಸರು ಬದಲಾಯಿಸುವುದು ಹೊಸ ವಿಚಾರವೇನಲ್ಲೂ ಅಲ್ಲ. ಕರೀನಾ ಕಪೂರ್ ಮದುವೆಯ ನಂತರ ಕಾಣಿಸಿಕೊಂಡಿದ್ದ ‘ತಲಾಶ್’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಅದಾಗ್ಯೂ ಹೆಸರು ಬದಲಾಯಿಸಿಕೊಳ್ಳುವುದು ಸಂಪೂರ್ಣ ಕತ್ರಿನಾ ಅವರ ಆಯ್ಕೆ. ಅವರು ಇಷ್ಟಪಟ್ಟರೆ ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೇ ಅವರ ಹಳೆಯ ಹೆಸರಿನೊಂದಿಗೆ ಮುಂದುವರೆಯಲಿದ್ದಾರೆ ಎನ್ನುತ್ತಾರೆ ಬಾಲಿವುಡ್ ಮಂದಿ.
ಇದನ್ನೂ ಓದಿ:
Mohanlal: ‘ಮರಕ್ಕರ್’ ಚಿತ್ರದ ನೂತನ ಟೀಸರ್ ರಿಲೀಸ್; ಅದ್ದೂರಿ ದೃಶ್ಯ ವೈಭವಕ್ಕೆ ಮಾರುಹೋದ ಅಭಿಮಾನಿಗಳು
ಕತ್ರಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು; ಇದನ್ನು ಪಾಲಿಸಲೇಬೇಕು
Published On - 9:59 am, Thu, 25 November 21