ನಿರ್ದೇಶಕ ಅಟ್ಲಿ (Atlee) ಅವರು ಈಗ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ. ಬಾಲಿವುಡ್ನಲ್ಲೂ ಅವರು ಬಹುಬೇಡಿಕೆಯ ನಿರ್ದೇಶಕನಾಗಿದ್ದಾರೆ. ಶಾರುಖ್ ಖಾನ್ ಜೊತೆ ಸೇರಿ ‘ಜವಾನ್’ ಸಿನಿಮಾ ಮಾಡಿದ ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿತು. ಈಗ ಅಟ್ಲಿ ಜೊತೆ ಸಿನಿಮಾ ಮಾಡಲು ಹಿಂದಿ ಚಿತ್ರರಂಗದ ಅನೇಕ ಸ್ಟಾರ್ ಹೀರೋಗಳು ಕಾದಿದ್ದಾರೆ. ಅಚ್ಚರಿ ಏನೆಂದರೆ, ನಟ ಸಲ್ಮಾನ್ ಖಾನ್ (Salman Khan) ಕೂಡ ಅಟ್ಲಿ ಜೊತೆ ಕೈ ಜೋಡಿಸಲು ಉತ್ಸಾಹ ತೋರಿಸಿದ್ದಾರೆ. ಈ ಬಗ್ಗೆ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ. ಆ ಪ್ರಕಾರ, ‘ದಬಂಗ್’ (Dabangg) ಕಥೆಯ ಎಳೆಯನ್ನು ಇಟ್ಟುಕೊಂಡು ಬೇರೆ ಸಿನಿಮಾ ಮಾಡಲು ಅಟ್ಲಿ ಮತ್ತು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ಖಾನ್ ಅವರ ವೃತ್ತಿ ಜೀವನದಲ್ಲಿ ‘ದಬಂಗ್’ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಆ ಚಿತ್ರಕ್ಕೆ ಒಂದು ಸ್ಪಿನ್-ಆಫ್ ಸಿನಿಮಾ ಮಾಡಬೇಕು ಎಂದು ಆಲೋಚಿಸಲಾಗುತ್ತಿದೆ. ಆ ಕಾರಣದಿಂದ ನಿರ್ದೇಶಕ ಅಟ್ಲಿ ಅವರು ಸಲ್ಮಾನ್ ಖಾನ್ ಅವರ ಮನೆಗೆ ಎರಡು-ಮೂರು ಬಾರಿ ಭೇಟಿ ನೀಡಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಆದಷ್ಟು ಬೇಗ ಈ ಬೆಳವಣಿಗೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡ್ತಾರಾ ಅಟ್ಲಿ? ‘ಜವಾನ್’ ನಿರ್ದೇಶಕನಿಗೆ ಡಿಮ್ಯಾಂಡ್
ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ‘ದಬಂಗ್’ ಚಿತ್ರದ ಸ್ಪಿನ್-ಆಫ್ ಬಗ್ಗೆ ಚರ್ಚೆ ಮಾಡಲು ಸಲ್ಮಾನ್ ಖಾನ್ ಮತ್ತು ಅಟ್ಲಿ ಅವರು ಒಂದೆಡೆ ಸೇರಿದ್ದಾರೆ ಎಂಬ ಸುದ್ದಿ ಇದೆಯಾದರೂ ಅಟ್ಲಿ ಅವರು ಈ ಸಿನಿಮಾವನ್ನು ನಿರ್ದೇಶಿಸುವ ಚಾನ್ಸ್ ಕಡಿಮೆ ಇದೆ. ಬದಲಿಗೆ ಅವರು ಸ್ಕ್ರಿಪ್ಟ್ ಬರೆದುಕೊಡಲಿದ್ದಾರೆ. ಅದರ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಲಿದ್ದಾರೆ ಹಾಗೂ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಲಿದ್ದಾರೆ ಎಂದು ಸುದ್ದಿ ಹರಡಿದೆ.
ಇದನ್ನೂ ಓದಿ: ಅಟ್ಲಿ ಮತ್ತು ಪ್ರಿಯಾ ದಂಪತಿ ಫೋಟೋಗಳು ವೈರಲ್; ಆದರೆ ಕಮೆಂಟ್ ಮಾಡುವಂತಿಲ್ಲ
‘ಅರ್ಬಾಜ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ದಬಂಗ್ ಚಿತ್ರದ ಸ್ಪಿನ್-ಆಫ್ಗಾಗಿ ದಕ್ಷಿಣ ಭಾರತದ ನಿರ್ದೇಶಕರನ್ನು ಕರೆತರಬೇಕು ಎಂದುಕೊಂಡಿದ್ದಾರೆ. ಇದನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ನಿರ್ಮಾಣ ಮಾಡಬೇಕು ಎಂಬುದು ಅವರ ಉದ್ದೇಶ. ಈ ವಿಚಾರದ ಬಗ್ಗೆ ಅಟ್ಲಿ ಅವರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿ ಇದೆ’ ಎಂದು ಮೂಲಗಳು ಹೇಳಿರುವುದಾಗಿ ‘ಬಾಲಿವುಡ್ ಹಂಗಾಮಾ’ ವರದಿ ಪ್ರಕಟಿಸಿದೆ. ಸಲ್ಮಾನ್ ಖಾನ್ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ. ಅಟ್ಲಿ ಜೊತೆ ಕೈ ಜೋಡಿಸಿದ ಬಳಿಕ ಆ ಗೆಲುವು ಸಿಗುತ್ತಾ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.