AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ ಜೊತೆ ಸಿನಿಮಾ ಮಾಡ್ತಾರಾ ಅಟ್ಲಿ? ‘ಜವಾನ್​’ ನಿರ್ದೇಶಕನಿಗೆ ಡಿಮ್ಯಾಂಡ್​

ಮಾಸ್​ ಸಿನಿಮಾಗಳನ್ನು ಮಾಡುವಲ್ಲಿ ಅಟ್ಲಿ ಫೇಮಸ್​ ಆಗಿದ್ದಾರೆ. ಈ ವರ್ಷ ತೆರೆಕಂಡ ‘ಜವಾನ್​’ ಸಿನಿಮಾ ಮೂಲಕ ಅವರ ಕಸುಬುದಾರಿಕೆ ಏನು ಎಂಬುದು ಬಾಲಿವುಡ್​ ಮಂದಿಗೂ ಗೊತ್ತಾಯಿತು. ಅವರ ಜೊತೆ ಸಿನಿಮಾ ಮಾಡಲು ಅನೇಕ ಸ್ಟಾರ್​ ಹೀರೋಗಳು ಆಸಕ್ತಿ ತೋರಿಸುತ್ತಿದ್ದಾರೆ.

ಅಲ್ಲು ಅರ್ಜುನ್​ ಜೊತೆ ಸಿನಿಮಾ ಮಾಡ್ತಾರಾ ಅಟ್ಲಿ? ‘ಜವಾನ್​’ ನಿರ್ದೇಶಕನಿಗೆ ಡಿಮ್ಯಾಂಡ್​
ಅಟ್ಲಿ, ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on:Dec 25, 2023 | 6:15 PM

Share

ನಿರ್ದೇಶಕ ಅಟ್ಲಿ (Atlee) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ಮೊದಲು ಕೇವಲ ಕಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಅವರು ‘ಜವಾನ್​’ (Jawan) ಸಿನಿಮಾದಿಂದ ಬಾಲಿವುಡ್​ನಲ್ಲೂ ತಮ್ಮ ಛಾಪು ಮೂಡಿಸಿದರು. ಈಗ ಅವರ ಹೊಸ ಪ್ರಾಜೆಕ್ಟ್​ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಅಟ್ಲಿ ಅವರು ಅಲ್ಲು ಅರ್ಜುನ್​ (Allu Arjun) ಜೊತೆ ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಪುಷ್ಪ 2’ ರಿಲೀಸ್​ ಆದ ಬಳಿಕ ಅಲ್ಲು ಅರ್ಜುನ್​ ಅವರು ಅಟ್ಲಿ ಜೊತೆ ಕೈ ಜೋಡಿಸುತ್ತಾರೆ ಎಂಬ ಗಾಸಿಪ್​ ಹಬ್ಬಿದೆ.

ಮಾಸ್​ ಸಿನಿಮಾಗಳನ್ನು ಮಾಡುವಲ್ಲಿ ಅಟ್ಲಿ ಫೇಮಸ್​ ಆಗಿದ್ದಾರೆ. ಈ ವರ್ಷ ತೆರೆಕಂಡ ‘ಜವಾನ್​’ ಸಿನಿಮಾ ಮೂಲಕ ಅವರ ಕಸುಬುದಾರಿಕೆ ಏನು ಎಂಬುದು ಬಾಲಿವುಡ್​ ಮಂದಿಗೂ ಗೊತ್ತಾಯಿತು. ಅವರ ಜೊತೆ ಸಿನಿಮಾ ಮಾಡಲು ಅನೇಕ ಸ್ಟಾರ್​ ಹೀರೋಗಳು ಕಾದಿದ್ದಾರೆ. ಅಲ್ಲು ಅರ್ಜುನ್​ ಸಹ ಅಟ್ಲಿ ಜೊತೆ ಸಿನಿಮಾ ಮಾಡಲು ಉತ್ಸಾಹ ಹೊಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಇದನ್ನೂ ಓದಿ: ‘ದೃಶ್ಯಗಳನ್ನು ಕದಿಯಲಾಗಿದೆ’ ಎಂದವರಿಗೆ ಸರಿಯಾಗಿ ತಿರುಗೇಟು ನೀಡಿದ ನಿರ್ದೇಶಕ ಅಟ್ಲಿ

ಅಲ್ಲು ಅರ್ಜುನ್​ ಅವರು ‘ಪುಷ್ಪ’ ಹಿಟ್​ ಆದ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆದರು. ಈಗ ಅವರ ಸಂಪೂರ್ಣ ಗಮನ ‘ಪುಷ್ಪ 2’ ಸಿನಿಮಾದ ಮೇಲಿದೆ. 2024ರ ಆಗಸ್ಟ್​ 15ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಆ ನಂತರ ಅಲ್ಲು ಅರ್ಜುನ್​ ಕೈಗೆತ್ತಿಕೊಳ್ಳುವ ಪ್ರಾಜೆಕ್ಟ್​ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಇರಲಿದೆ. ಅದಕ್ಕೆ ಅಟ್ಲಿ ಆ್ಯಕ್ಷನ್​-ಕಟ್​ ಹೇಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಅಟ್ಲಿ ಮತ್ತು ಪ್ರಿಯಾ ದಂಪತಿ ಫೋಟೋಗಳು ವೈರಲ್​; ಆದರೆ ಕಮೆಂಟ್​ ಮಾಡುವಂತಿಲ್ಲ

ಅಭಿಮಾನಿಗಳು ಅಲ್ಲು ಅರ್ಜುನ್​ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರು ಸ್ಕ್ರಿಪ್ಟ್​ ಮತ್ತು ನಿರ್ದೇಶಕರ ಆಯ್ಕೆ ಮಾಡಿಕೊಳ್ಳಬೇಕಿದೆ. ‘ಪುಷ್ಪ’ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅಲ್ಲು ಅರ್ಜುನ್​ ಅವರ ಜವಾಬ್ದಾರಿ ಹೆಚ್ಚಾಗಿದೆ. ‘ಪುಷ್ಪ 2’ ನಂತರ ಅವರು ಯಾವ ಪ್ರಾಜೆಕ್ಟ್​ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ನಿರ್ದೇಶಕರಾದ ತ್ರಿವಿಕ್ರಂ ಶ್ರೀನಿವಾಸ್​ ಮತ್ತು ಸಂದೀಪ್​ ರೆಡ್ಡಿ ವಂಗಾ ಜೊತೆಯೂ ಅಲ್ಲು ಅರ್ಜುನ್​ ಸಿನಿಮಾ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:15 pm, Mon, 25 December 23

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ