Article 370 Movie: ಗಲ್ಫ್​ ರಾಷ್ಟ್ರಗಳಲ್ಲಿ ಭಾರತದ ‘ಆರ್ಟಿಕಲ್​ 370’ ಸಿನಿಮಾ ಬ್ಯಾನ್​

|

Updated on: Feb 26, 2024 | 10:59 PM

ಭಾರತದಲ್ಲಿ ‘ಆರ್ಟಿಕಲ್​ 370’ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಗಲ್ಫ್​ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್​ ಮಾಡಲಾಗಿದೆ. ಇದರಿಂದಾಗಿ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಚಿತ್ರದ ಕಲೆಕ್ಷನ್​ ಕುಗ್ಗಲಿದೆ.​ ಈ ಸಿನಿಮಾವನ್ನು ಬ್ಯಾನ್​ ಮಾಡಿದ್ದಕ್ಕೆ ಸೂಕ್ತ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ಯಾಮಿ ಗೌತಮ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Article 370 Movie: ಗಲ್ಫ್​ ರಾಷ್ಟ್ರಗಳಲ್ಲಿ ಭಾರತದ ‘ಆರ್ಟಿಕಲ್​ 370’ ಸಿನಿಮಾ ಬ್ಯಾನ್​
ಪ್ರಿಯಾಮಣಿ, ಯಾಮಿ ಗೌತಮ್​
Follow us on

ಕಾಶ್ಮೀರದಲ್ಲಿ ಆರ್ಟಿಕಲ್​ 370 (Article 370) ರದ್ದು ಮಾಡಿದ ಘಟನೆಯನ್ನು ಆಧರಿಸಿ ಸಿನಿಮಾ ಮೂಡಿಬಂದಿದೆ. ‘ಆರ್ಟಿಕಲ್​ 370’ ಚಿತ್ರಕ್ಕೆ ಆದಿತ್ಯ ಸುಹಾಸ್​ ನಿರ್ದೇಶನ ಮಾಡಿದ್ದಾರೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗುತ್ತಿದೆ. ವಿದೇಶದಲ್ಲೂ ಒಳ್ಳೆಯ ಕಮಾಯಿ ಆಗುತ್ತಿದೆ. ಆದರೆ ಗಲ್ಫ್​ ರಾಷ್ಟ್ರಗಳಲ್ಲಿ (Gulf Countries) ಈ ಸಿನಿಮಾವನ್ನು ನಿಷೇಧಿಸಲಾಗಿದೆ. ಇದರಿಂದ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ. ‘ಆರ್ಟಿಕಲ್​ 370’ ಸಿನಿಮಾದಲ್ಲಿ ಯಾಮಿ ಗೌತಮ್​ (Yami Gautam) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಿಯಾಮಣಿ ಕೂಡ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕ್​ ವಿರೋಧಿ ಅಂಶಗಳು ‘ಆರ್ಟಿಕಲ್​ 370’ ಸಿನಿಮಾದಲ್ಲಿ ಇದೆ. ಅದೇ ಕಾರಣಕ್ಕಾಗಿ ಗಲ್ಫ್​ ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್​ ಮಾಡಿರಬಹುದು. ಆದರೆ ಅಲ್ಲಿನ ಸೆನ್ಸಾರ್​ ಮಂಡಳಿಯವರು ಈ ಚಿತ್ರವನ್ನು ನಿಷೇಧಿಸಿದ್ದಕ್ಕೆ ಸೂಕ್ತ ಕಾರಣ ನೀಡಿಲ್ಲ. ಇತ್ತೀಚೆಗೆ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ ನಟನೆಯ ‘ಫೈಟರ್​’ ಸಿನಿಮಾವನ್ನು ಕೂಡ ಅಲ್ಲಿ ಬ್ಯಾನ್​ ಮಾಡಲಾಗಿತ್ತು.

ಸಾಮಾನ್ಯವಾಗಿ ಗಲ್ಫ್​ ರಾಷ್ಟ್ರಗಳಲ್ಲಿ ಭಾರತದ ಸಿನಿಮಾಗಳಿಗೆ ಬೇಡಿಕೆ ಇರುತ್ತದೆ. ಹಿಂದಿ ಸಿನಿಮಾಗಳನ್ನು ಅಲ್ಲಿನ ಜನರು ನೋಡಿ ಎಂಜಾಯ್​ ಮಾಡುತ್ತಾರೆ. ಅದರಿಂದ ಬಾಲಿವುಡ್​ ಬಾಕ್ಸ್​ ಆಫೀಸ್​ಗೆ ಉತ್ತಮ ಕಮಾಯಿ ಆಗುತ್ತದೆ. ಈ ರೀತಿ ಬ್ಯಾನ್​ ಮಾಡಿದರೆ ಸಿನಿಮಾದ ಗಳಿಕೆಗೆ ಹೊಡೆತ ಬೀಳುತ್ತದೆ. ಸದ್ಯ ‘ಆರ್ಟಿಕಲ್​ 370’ ಸಿನಿಮಾಗೆ ಹಾಗೆಯೇ ಆಗಿದೆ. ಭಾರತದಲ್ಲಿ ಈ ಸಿನಿಮಾ ಮೂರು ದಿನಕ್ಕೆ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಇದನ್ನೂ ಓದಿ: ‘ಆರ್ಟಿಕಲ್ 370’ ಸಿನಿಮಾದಲ್ಲಿ ಮಿಂಚಿದ ನಟಿ ಯಾಮಿ ಗೌತಮ್

‘ಆರ್ಟಿಕಲ್​ 370’ ಸಿನಿಮಾದ ಬಿಡುಗಡೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈ ಚಿತ್ರದ ಬಗ್ಗೆ ಮಾತನಾಡಿದ್ದರು. ‘ಈ ವಾರ ಆರ್ಟಿಕಲ್​ 370 ರದ್ದು ಕುರಿತು ಸಿನಿಮಾ ಬರುತ್ತಿದೆ ಎಂದು ಕೇಳಿದ್ದೇನೆ. ಇಡೀ ದೇಶದಲ್ಲಿ ನಿಮ್ಮ ಜೈಕಾರ ಆಗಲಿದೆ ಅಂತ ನನಗೆ ಅನಿಸುತ್ತದೆ. ಸಿನಿಮಾ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಜನರಿಗೆ ಸೂಕ್ತ ಮಾಹಿತಿ ನೀಡಲು ಉಪಯೋಗ ಆಗುತ್ತದೆ’ ಎಂದು ನರೇಂದ್ರ ಮೋದಿ ಹೇಳಿದ್ದರು. ಈ ಚಿತ್ರವನ್ನೇ ಗಲ್ಫ್​ ರಾಷ್ಟ್ರಗಳಲ್ಲಿ ಬ್ಯಾನ್​ ಮಾಡಿರುವುದು ಅಚ್ಚರಿ ಮೂಡಿಸಿದೆ.

‘ಆರ್ಟಿಕಲ್​ 370’ ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತು:

ಬಾಕ್ಸ್​ ಆಫೀಸ್​ ಬಗ್ಗೆ ಮಾಹಿತಿ:

ಫೆ.23ರಂದು ‘ಆರ್ಟಿಕಲ್​ 370’ ಚಿತ್ರ ಬಿಡುಗಡೆ ಆಯಿತು. ಮೊದಲ ದಿನ ಈ ಸಿನಿಮಾಗೆ 6.12 ಕೋಟಿ ರೂಪಾಯಿ ಕಮಾಯಿ ಆಯಿತು. 2ನೇ ದಿನವಾದ ಫೆಬ್ರವರಿ 24ರಂದು 9.08 ಕೋಟಿ ರೂಪಾಯಿ ಕಲೆಕ್ಷನ್​ ಆಯ್ತು. 3ನೇ ದಿನ (ಫೆ.25) ಈ ಚಿತ್ರವು 10.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸೋಮವಾರ (ಫೆ.26) ಸಹ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ವಿದೇಶದ ಗಳಿಕೆಯೂ ಸೇರಿದರೆ ಮೂರು ದಿನಕ್ಕೆ 34.71 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.