ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್

Ramayana Movie: ಇಂದಿರಾ ಕೃಷ್ಣ ಅವರು ರಾಮಾಯಣ ಚಿತ್ರದಲ್ಲಿ ಕೌಸಲ್ಯಾ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ 86 ಕ್ಯಾಮೆರಾಗಳು ಮತ್ತು ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಇಂದಿರಾ ಅವರು, ವಿಎಫ್ಎಕ್ಸ್ಗಾಗಿ ತಮ್ಮ ದೇಹದ ಅಳತೆ ತೆಗೆದುಕೊಳ್ಳಲಾಗಿದ್ದ ವಿಷಯವನ್ನು ತಿಳಿಸಿದ್ದಾರೆ.  

ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
ರಾಮಾಯಣ

Updated on: Jul 10, 2025 | 7:34 AM

ದಿನಗಳು ಕಳೆದಂತೆ ಸಿನಿಮಾ ನಿರ್ಮಾಣದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಆಧುನಿಕ ಕ್ಯಾಮೆರಾಗಳ ಬಳಕೆ ಮೂಲಕ ಎಲ್ಲರನ್ನೂ ಬೆರಗು ಗೊಳಿಸಲಾಗುತ್ತಿದೆ. ಈಗ ಮುಂಬರುವ ‘ರಾಮಾಯಣ’ (Ramayana Movie) ಅಂಥದ್ದೇ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ಅವರು ಶೂಟಿಂಗ್​ಗೆ ಬರೋಬ್ಬರಿ 86 ಕ್ಯಾಮೆರಾಗಳನ್ನು ಬಳಕೆ ಮಾಡಿದ್ದಾರೆ. ಜೊತೆಗೆ ವಿಎಫ್​ಎಕ್ಸ್ ಮಶಿನ್​ಗಳನ್ನು ಕೂಡ ಇಟ್ಟಿದ್ದರು ಎಂದು ವರದಿ ಆಗಿದೆ.

ಇಂದಿರಾ ಕೃಷ್ಣ ಅವರು ‘ರಾಮಯಣ’ ಸಿನಿಮಾದಲ್ಲಿ ಕೌಸಲ್ಯಾ ಪಾತ್ರ ಮಾಡಿದ್ದಾರೆ. ರಾಮನ ತಾಯಿಯ ಪಾತ್ರ ಇದಾಗಿದ್ದು, ಅವರಿಗೆ ಈ ವಿಚಾರದಲ್ಲಿ ಖುಷಿ ಇದೆ. ಅವರು ಸಿನಿಮಾದ ಆಧುನಿಕತೆ ಬಗ್ಗೆ ಮಾತನಾಡಿದ್ದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಅವರ ದೂರದೃಷ್ಟಿಯನ್ನು ಇಂದಿರಾ ಕೃಷ್ಣ ಅವರು ಹೊಗಳಿದ್ದಾರೆ.

‘ನಾನು ಬಾಡಿ ಅಳತೆ ನೀಡಲು ತೆರಳಿದ್ದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಇಂಟರ್​​ಸ್ಟೆಲ್ಲರ್’ ಸಿನಿಮಾದಲ್ಲಿ ಬಳಕೆ ಆದ ವಿಎಫ್​​ಎಕ್ಸ್ ಮಶಿನ್ ಇಲ್ಲಿಯೂ ಇರುತ್ತದೆ ಎಂದು ನಿರ್ದೇಶಕರು ಹೇಳಿದರು. ಅಲ್ಲದೆ, 86 ಕಡೆಗಳಲ್ಲಿ ಕ್ಯಾಮೆರಾಗಳನ್ನು ಇಡಲಾಗಿತ್ತು. ಒಮ್ಮೆಲೇ ಆ ಎಲ್ಲಾ ಕ್ಯಾಮೆರಾಗಳು ನನ್ನನ್ನು ಸೆರೆ ಹಿಡಿದವು. ಇದರಿಂದ ನಾನು ಶಾಕ್ ಆದೆ ಎಂದಿದ್ದಾರೆ’ ಅವರು.

ಇದನ್ನೂ ಓದಿ
ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
‘ನಾನು ಗೌರಿಯನ್ನು ಮದುವೆಯಾಗಿ ಆಗಿದೆ..’; ಶಾಕಿಂಗ್ ಅಪ್​ಡೇಟ್ ಕೊಟ್ಟ ಆಮಿರ್
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

‘ನನ್ನ ಬಾಡಿಯ ಅಳತೆಯನ್ನು ತೆಗೆದುಕೊಂಡಿದ್ದು ಅವರು ಕಾಸ್ಟ್ಯೂಮ್ ಡಿಸೈನ್​ಗೆ ಮಾತ್ರ ಆಗಿರಲಿಲ್ಲ. ವಿಎಫ್​ಎಕ್ಸ್ ಉದ್ದೇಶದಿಂದಲೂ ಆಗಿತ್ತು. ನನಗೆ ಇದನ್ನು ಕೇಳಿ ಶಾಕ್ ಆಯಿತು. ಕೌಸಲ್ಯ ಹೇಗೆ ಕೂರಬೇಕು, ಹೇಗೆ ನಿಲ್ಲಬೇಕು ಎಂಬುದನ್ನು ಮೊದಲೇ ಪ್ಲ್ಯಾನ್ ಮಾಡಿರಲಾಗುತ್ತದೆ. ಇಲ್ಲಿ ಡ್ರಾಮಾ ಡೈಲಾಗ್​ಗೆ ಅವಕಾಶ ಇಲ್ಲ’ ಎಂದಿದ್ದಾರೆ ಅವರು.

ಇಂದಿರಾ ಕೃಷ್ಣನ್ ಅವರು ಈ ಮೊದಲು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಅವರ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈಗ ಅವರಿಗೆ ‘ರಾಮಾಯಣ’ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು, ಖುಷಿಯಾಗಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಫಸ್ಟ್​ ಲುಕ್ ಪವರ್; ನಿರ್ಮಾಣ ಸಂಸ್ಥೆಗೆ ಸಾವಿರ ಕೋಟಿ ಲಾಭ

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಅರುಣ್ ಗೋವಿಲ್ ದಶರಥನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2026ರ ದೀಪಾವಳಿಗೆ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Thu, 10 July 25