ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್

2019ರಲ್ಲಿ ರಿಲೀಸ್ ಆದ ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಆಫರ್ ಮೊದಲು ಯಶ್​ಗೆ ಹೋಗಿತ್ತು. ಆಗಿನ್ನೂ ಅವರು ಬಾಲಿವುಡ್ ಸಿನಿಮಾ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು.

ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್
ಬಾಲಿವುಡ್ ಚಿತ್ರವನ್ನು ತಿರಸ್ಕರಿಸಿದ್ದ ದಕ್ಷಿಣದ ಹೀರೋಗಳು; ಬಹುತೇಕ ಚಿತ್ರಗಳು ಹಿಟ್
Edited By:

Updated on: Oct 14, 2024 | 7:37 AM

ದಕ್ಷಿಣ ಭಾರತದ ಹಲವು ನಟರು​ಗಳು ಬಾಲಿವುಡ್​ನಲ್ಲಿ ಈಗ ಹೆಸರು ಮಾಡಿದ್ದಾರೆ. ಅವರಿಗೆ ಪರಭಾಷೆಯಿಂದ, ಬಾಲಿವುಡ್​ನಿಂದ ಆಫರ್​ಗಳು ಬಂದರೆ ಅದನ್ನು ರಿಜೆಕ್ಟ್ ಮಾಡಿದ ಉದಾಹರಣೆ ಸಾಕಷ್ಟಿದೆ. ದಕ್ಷಿಣ ಭಾರತದ ಹೀರೋಗಳಾದ ಅಲ್ಲು ಅರ್ಜುನ್, ಯಶ್ ಸೇರಿದಂತೆ ಅನೇಕರು ಹಿಂದಿ ಆಫರ್​ಗಳನ್ನು ತಿರಸ್ಕರಿಸಿದ್ದರು. ಆ ಚಿತ್ರಗಳು ಯಶಸ್ಸು ಕಂಡವು ಮತ್ತು ರಿಜೆಕ್ಟ್ ಮಾಡಿದ ಹೀರೋಗಳಿಗೆ ಬೇಸರವನ್ನು ಉಂಟು ಮಾಡಿದವು. ಆ ಬಗ್ಗೆ ಇಲ್ಲಿದೆ ವಿವರ.

‘ಬಜರಂಗಿ ಭಾಯಿಜಾನ್’

‘ಬಜರಂಗಿ ಭಾಯಿಜಾನ್’ ಸಿನಿಮಾ 2015ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಹೀರೋ ಆಗಿ ನಟಿಸಿ ಗಮನ ಸೆಳೆದರು. ಮೂಲತಹವಾಗಿ ಈ ಚಿತ್ರದಲ್ಲಿ ನಟಿಸಬೇಕಾಗಿದ್ದು ಸಲ್ಮಾನ್ ಖಾನ್ ಅಲ್ಲ. ಅಲ್ಲು ಅರ್ಜುನ್ ಅವರು ಎನ್ನಲಾಗಿದೆ. ಅಲ್ಲು ಅರ್ಜುನ್ ಅವರಿಗೆ ಮೊದಲು ಈ ಆಫರ್ ಹೋಗಿತ್ತಂತೆ. ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರು ಈ ಆಫರ್​ನ ಅವರಿಗೆ ನೀಡಿದರು. ನಂತರ ಈ ಆಫರ್​ನ ಅವರು ರಿಜೆಕ್ಟ್ ಮಾಡಿದ್ದರು. ನಂತರ ಸಲ್ಮಾನ್ ಖಾನ್ ಅವರು ಮಾಡಿ ಗೆದ್ದರು.

‘ಅನಿಮಲ್’

‘ಅನಿಮಲ್’ ಚಿತ್ರವು ಕಳೆದ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳಲ್ಲಿ ಒಂದು. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರವನ್ನು ಜನರು ಹೆಚ್ಚು ಇಷ್ಟಪಟ್ಟರು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದ ಆಫರ್ ಮೊದಲು ಹೋಗಿದ್ದು ಮಹೇಶ್ ಬಾಬು ಅವರಿಗೆ ಎನ್ನಲಾಗಿದೆ.

‘ಲಾಲ್ ಕಪ್ತಾನ್’

2019ರಲ್ಲಿ ರಿಲೀಸ್ ಆದ ಸೈಫ್ ಅಲಿ ಖಾನ್ ನಟನೆಯ ‘ಲಾಲ್ ಕಪ್ತಾನ್’ ಸಿನಿಮಾ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಆಫರ್ ಮೊದಲು ಯಶ್​ಗೆ ಹೋಗಿತ್ತು. ಆಗಿನ್ನೂ ಅವರು ಬಾಲಿವುಡ್ ಸಿನಿಮಾ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು. ಈಗ ‘ರಾಮಾಯಣ’ ಚಿತ್ರವನ್ನು ಹಿಂದಿಯಲ್ಲಿ ಅವರು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕ ಕೂಡ ಹೌದು.

‘ಲಾಲ್ ಸಿಂಗ್ ಚಡ್ಡಾ’

ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ವಿಜಯ್ ಸೇತುಪತಿಗೆ ಆಫರ್ ನೀಡಲಾಗಿತ್ತು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು ನಂತರ ಈ ಆಫರ್ ನಾಗ ಚೈತನ್ಯ ಕೈ ಸೇರಿತ್ತು.

ಇದನ್ನೂ ಓದಿ: ಮುಂಬೈನಲ್ಲಿ ಯಶ್​, ರಾಧಿಕಾ ಪಂಡಿತ್ ಡಿನ್ನರ್: ಫೋಟೋ, ವಿಡಿಯೋಗೆ ಮುಗಿಬಿದ್ದ ಪಾಪರಾಜಿಗಳು

ಚಿಚೋರೆ

ನವೀನ್ ಪೊಲಿಶೆಟ್ಟಿ ಅವರು ‘ಚಿಚೋರೆ’ ಸಿನಿಮಾ ಮಾಡಬೇಕಿತ್ತು. ಆದದರೆ, ಸಿನಿಮಾದ ಆಫರ್ ಅವರ ಕೈಸೇರಿಲ್ಲ. ಅವರು ರಿಜೆಕ್ಟ್ ಮಾಡಿದ್ದರಿಂದ ಸುಶಾಂತ್ ಸಿಂಗ್ ಅವರು ನಟಿಸಿದ ಕೊನೆಯ ಸಿನಿಮಾ ಇದಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us