
ಬಾಲಿವುಡ್ (Bollywood) ಪಾಲಿಗೆ 2025 ಬಹಳ ವಿಶೇಷವಾಗಿತ್ತು. ಅನೇಕ ಹಿಟ್ ಚಿತ್ರಗಳು ಬಂದವು. ಅನೇಕರು ವಿವಾಹ ಆದರು. ಇನ್ನೂ ಕೆಲವು ಕಹಿ ಘಟನೆಗಳು ನಡೆದಿವೆ ಎಂಬುದು ನಿಜ. ಅದೇ ರೀತಿ ಅನೇಕರ ನಟ-ನಟಿಯರು ಮಗುವಿಗೆ ಪಾಲಕರಾಗಿದ್ದಾರೆ. ಆ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ವರ್ಷ ತಂದೆ-ತಾಯಿ ಆದ ಸೆಲೆಬ್ರಿಟಿಗಳ ವಿವರ ಇಲ್ಲಿದೆ.
ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ನವೆಂಬರ್ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ. ಮಗು ಆಗಲಿ ಎಂದು ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಕೆ ಹೊತ್ತಿದ್ದರು. ಮಗು ಜನಿಸಿದ ನಂತರ ಈ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು.
2025ರ ಆರಂಭದಲ್ಲಿ, ನಟಿ ಆತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಮುದ್ದಾದ ಹೆಣ್ಣು ಮಗುವಿಗೆ ಪಾಲಕರಾದರು. ಅವರು ಮಾರ್ಚ್ 24ರಂದು ಹೆಣ್ಣು ಮಗುವಿನ ಆಗಮನದ ಬಗ್ಗೆ ತಿಇಸಿದರು. 2024ರ ನವೆಂಬರ್ ಅಲ್ಲಿ ಆತಿಯಾ ಪ್ರೆಗ್ನೆನ್ಸಿ ಬಗ್ಗೆ ಘೋಷಿಸಿದ್ದರು.
ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಅವರು ಅಕ್ಟೋಬರ್ 19ರಂದು ಮಗನನ್ನು ಸ್ವಾಗತಿಸಿದರು. ಎಲ್ಲರೂ ಅವರಿಗೆ ಅಭಿನಂದನೆಗಳ ಸುರಿಮಳೆಗೈದರು. ಅವರ ಪ್ರೀತಿಯ ಮಗನ ಹೆಸರು ‘ನೀರ್’. ಮಗನ ಆಗಮನದೊಂದಿಗೆ ತಮ್ಮ ಜೀವನವು ಪೂರ್ಣಗೊಂಡಿದೆ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದರು.
ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೆಲವು ವರ್ಷಗಳ ಹಿಂದೆ ವಿವಾಹವಾದರು. ಕಿಯಾರಾ ಜುಲೈ 15ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರು ಈ ಶುಭ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರು. ಕಿಯಾರಾ ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ.
ನವೆಂಬರ್ 15ರಂದು, ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು, ನಟ ರಾಜ್‌ಕುಮಾರ್ ರಾವ್ ಮತ್ತು ಅವರ ಪತ್ನಿ ನಟಿ ಪತ್ರಲೇಖಾ ತಮ್ಮ ಮಗಳ ಜನನವನ್ನು ಘೋಷಿಸಿದರು. ಅವರು ಈ ಶುಭ ಸುದ್ದಿಯನ್ನು ಹಂಚಿಕೊಂಡರು. ಅವರ ಹೊಸ ಬದುಕಿಗೆ ಎಲ್ಲರೂ ಶುಭ ಹಾರೈಸಿದರು.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ, ನಟ ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ಕೂಡ ಈ ವರ್ಷ ಪೋಷಕರಾದರು. ಅಕ್ಟೋಬರ್ 5ರಂದು ಶುರಾ ಮಗಳಿಗೆ ಜನ್ಮ ನೀಡಿದರು. ಮಗಳ ಹೆಸರನ್ನು ಸಿಪರಾ ಖಾನ್ ಎಂದು ಘೋಷಿಸಿದರು. ಅರ್ನಾಜ್ಗೆ ಈಗ 58 ವರ್ಷ ವಯಸ್ಸು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ