AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್ ಮಾಡಿದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

Dulquer Salmaan: ಪೋಷಕ ಪಾತ್ರ ರೀತಿಯ ನಾಯಕ ಪಾತ್ರಗಳಿಗಷ್ಟೆ ದಕ್ಷಿಣದ ನಾಯಕ ನಟರನ್ನು ಬಾಲಿವುಡ್​ಗೆ ಕರೆಸಿಕೊಳ್ಳಲಾಗುತ್ತಿತ್ತು. ದಕ್ಷಿಣದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಹ ಇದೇ ರೀತಿಯ ಪಾತ್ರಗಳಿಗಾಗಿ ಈ ಹಿಂದೆ ಬಾಲಿವುಡ್​ಗೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಆದ ಅವಮಾನದ ಬಗ್ಗೆ ಇದೀಗ ಸ್ವತಃ ದುಲ್ಕರ್ ಸಲ್ಮಾನ್ ಮಾತನಾಡಿದ್ದಾರೆ. ತಮಗೆ ಆಗಿದ್ದ ಅವಮಾನದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಬಾಲಿವುಡ್ ಮಾಡಿದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು
Dulquer Salman
ಮಂಜುನಾಥ ಸಿ.
|

Updated on: Dec 02, 2025 | 3:44 PM

Share

ದಕ್ಷಿಣ ಭಾರತದ ನಟ-ನಟಿಯರು ದಶಕಗಳಿಂದಲೂ ಬಾಲಿವುಡ್ (Bollywood) ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಆದರೆ ತೀರ ಇತ್ತೀಚೆಗಷ್ಟೆ ದಕ್ಷಿಣದ ನಟರಿಗೆ ಬಾಲಿವುಡ್​​ನಲ್ಲಿ ಕನಿಷ್ಟ ಗೌರವ ಲಭ್ಯವಾಗುತ್ತಿವೆ. ಕೆಲವೇ ವರ್ಷಗಳ ಹಿಂದೆ ಸಹ ಬಾಲಿವುಡ್​​ನವರು ದಕ್ಷಿಣದ ನಟರನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದರು. ಯಾವುದೋ ಪೋಷಕ ಪಾತ್ರ ರೀತಿಯ ನಾಯಕ ಪಾತ್ರಗಳಿಗಷ್ಟೆ ದಕ್ಷಿಣದ ನಾಯಕ ನಟರನ್ನು ಬಾಲಿವುಡ್​ಗೆ ಕರೆಸಿಕೊಳ್ಳಲಾಗುತ್ತಿತ್ತು. ದಕ್ಷಿಣದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಹ ಇದೇ ರೀತಿಯ ಪಾತ್ರಗಳಿಗಾಗಿ ಈ ಹಿಂದೆ ಬಾಲಿವುಡ್​ಗೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಆದ ಅವಮಾನದ ಬಗ್ಗೆ ಇದೀಗ ಸ್ವತಃ ದುಲ್ಕರ್ ಸಲ್ಮಾನ್ ಮಾತನಾಡಿದ್ದಾರೆ.

ದುಲ್ಕರ್ ಸಲ್ಮಾನ್ ಅವರು ಇತ್ತೀಚೆಗಷ್ಟೆ ಹಾಲಿವುಡ್ ರಿಪೋರ್ಟರ್​​ ಯೂಟ್ಯೂಬ್​​ನ ಚಾನೆಲ್ಲಿನ ರೌಂಡ್​​ಟೇಬಲ್​​ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲಿವುಡ್​ ತಮಗೆ ಮಾಡಿದ ಅವಮಾನ, ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಮಾತನಾಡಿದ್ದಾರೆ. ದುಲ್ಕರ್ ಸಲ್ಮಾನ್ ಹೇಳಿರುವಂತೆ ‘ಬಾಲಿವುಡ್​​ನಲ್ಲಿ ತಾವು ಸೂಪರ್ ಸ್ಟಾರ್ ಎಂದು ತೋರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಿಮ್ಮನ್ನು ಯಾರೂ ಕೇರ್ ಸಹ ಮಾಡುವುದಿಲ್ಲ’ ಎಂದಿದ್ದಾರೆ. ಮಾತ್ರವಲ್ಲದೇ ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ.

ಇದನ್ನೂ ಓದಿ:ಕಾರು ವಿವಾದದ ಬೆನ್ನಲ್ಲೆ ಮತ್ತೊಂದು ಹೊಸ ಕಾರು ಖರೀದಿಸಿದ ದುಲ್ಕರ್ ಸಲ್ಮಾನ್

‘ನೀವು ಸರಳವಾಗಿ ನಡೆದುಕೊಂಡರೆ ನಿಮಗೆ ಗೌರವ ಸಿಗುವುದಿಲ್ಲ. ನೀವು ಇಬ್ಬರು ಸಹಾಯಕರೊಟ್ಟಿಗೆ ಬಂದರೆ ನಿಮ್ಮನ್ನು ಸೆಟ್​​ನಲ್ಲಿ ಮೂಲೆಗುಂಪು ಮಾಡಲಾಗುತ್ತದೆ. ಕೂರಲೂ ಕುರ್ಚಿ ಸಹ ನೀಡುವುದಿಲ್ಲ. ನನಗೆ ಒಂದು ಸಿನಿಮಾದ ಶೂಟಿಂಗ್ ಮಾಡುವಾಗ ಮಾನಿಟರ್ ಹಿಂದೆ ಜಾಗವೇ ಕೊಡುತ್ತಿರಲಿಲ್ಲ. ಅದೇ ನೀವು ಹತ್ತಾರು ಸಹಾಯಕರನ್ನು ಕರೆದುಕೊಂಡು, ಭಾರಿ ದೊಡ್ಡ ಗಾಡಿಯಲ್ಲಿ ಸೆಟ್​​ಗೆ ಬಂದಿರೆದಂರೆ ನಿಮ್ಮನ್ನು ಹೀರೋ ರೀತಿ ನಡೆಸಿಕೊಳ್ಳಲಾಗುತ್ತದೆ. ಬಾಲಿವುಡ್​​ನಲ್ಲಿ ಸರಳವಾಗಿದ್ದರೆ ಗೌರವ ಸಿಗುವುದಿಲ್ಲ. ಬಲವಂತವಾಗಿ ಸ್ಟಾರ್​ ಗಿರಿ ತೋರಿಸಬೇಕಾಗುತ್ತದೆ’ ಎಂದಿದ್ದಾರೆ ದುಲ್ಕರ್ ಸಲ್ಮಾನ್.

ಅಂದಹಾಗೆ ದುಲ್ಕರ್ ಸಲ್ಮಾನ್ ಹೇಳಿದ್ದಕ್ಕೆ ಇನ್ನೊಬ್ಬರು ಸಾಕ್ಷಿ ಸಹ ಇದ್ದಾರೆ. ರಾಣಾ ದಗ್ಗುಬಾಟಿ ಅವರು ದುಲ್ಕರ್ ಸಲ್ಮಾನ್, ಬಾಲಿವುಡ್​ ಸಿನಿಮಾನಲ್ಲಿ ನಟಿಸುವಾಗ ಎಷ್ಟು ಅವಮಾನ ಎದುರಿಸಿದ್ದರು ಎಂಬುದನ್ನು ಕಣ್ಣಾರೆ ನೋಡಿದ್ದಾಗಿ ಹೇಳಿದ್ದ ರಾಣಾ ದಗ್ಗುಬಾಟಿ ಅದನ್ನು ಹಿಂದೊಮ್ಮೆ ವಿವರಿಸಿದ್ದರು ಸಹ ಅದು ವಿವಾದವೂ ಆಗಿತ್ತು.

ದುಲ್ಕರ್ ಸಲ್ಮಾನ್ ಈ ವರೆಗೆ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇರ್ಫಾನ್ ಖಾನ್ ಜೊತೆಗೆ ‘ಕ್ಯಾರವ್ಯಾನ್’, ಸೋನಂ ಕಪೂರ್ ನಾಯಕಿಯಾಗಿದ್ದ ‘ದಿ ಜೋಯಾ ಫ್ಯಾಕ್ಟರ್’ ಮತ್ತು ಥ್ರಿಲ್ಲರ್ ಕತೆಯುಳ್ಳ ‘ಚುಪ್’. ಈ ಮೂರು ಬಾಲಿವುಡ್ ಸಿನಿಮಾಗಳಲ್ಲಿ ದುಲ್ಕರ್ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದವರಾದರೂ ಸಹ ತಮಿಳು, ತೆಲುಗು ಚಿತ್ರರಂಗಗಳಲ್ಲಿಯೂ ದೊಡ್ಡ ಹಿಟ್ ಸಿನಿಮಾಗಳನ್ನು ದುಲ್ಕರ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?