‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಬಿಗ್ ಅಪ್​ಡೇಟ್

ಬಾಲಿವುಡ್‌ನ ಜನಪ್ರಿಯ ಸಿನಿಮಾ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಸೀಕ್ವೆಲ್ ಶೀಘ್ರದಲ್ಲೇ ಬರಲಿದೆ. ಈ ಕುರಿತು ನಿರ್ದೇಶಕಿ ಜೋಯಾ ಅಖ್ತರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಹೃತಿಕ್, ಫರ್ಹಾನ್ ಹಾಗೂ ಅಭಯ್ ಕಾಂಬಿನೇಷನ್ ಮತ್ತೆ ತೆರೆಮೇಲೆ ಬರಲಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಕಾತರ ಗಣನೀಯವಾಗಿ ಹೆಚ್ಚಾಗಿದೆ.

‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಬಿಗ್ ಅಪ್​ಡೇಟ್
ಜಿಂದಗಿ ನಾ ಮಿಲೇಗಿ ದೋಬಾರ

Updated on: Aug 18, 2026 | 10:28 AM

ಮುಖ್ಯಾಂಶಗಳು

  • ಸೀಕ್ವೆಲ್ ಸುದ್ದಿ ಖಚಿತಪಡಿಸಿದ ನಿರ್ದೇಶಕಿ ಜೋಯಾ ಅಖ್ತರ್
  • ಜಾಹೀರಾತು ನೋಡಿ ಸೀಕ್ವೆಲ್ ಟ್ರೇಲರ್ ಅಂದುಕೊಂಡಿದ್ದ ಅಭಿಮಾನಿಗಳು
  • ಬಾಕ್ಸ್ ಆಫೀಸ್‌ನಲ್ಲಿ 153 ಕೋಟಿ ಗಳಿಸಿದ್ದ ಸೂಪರ್ ಹಿಟ್ ಸಿನಿಮಾ

ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಒಂದಾಗಿದೆ. ಈ ಸೂಪರ್ ಹಿಟ್ ಚಿತ್ರ ತೆರೆಕಂಡು 15 ವರ್ಷಗಳು ಕಳೆದಿವೆ. ಈಗ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಬರಲಿದೆ. ಈ ಕುರಿತು ಸ್ವತಃ ನಿರ್ದೇಶಕಿ ಜೋಯಾ ಅಖ್ತರ್ ಖಚಿತಪಡಿಸಿದ್ದಾರೆ. ಈ ಸುದ್ದಿ ಕೇಳಿ ಅರ್ಜುನ್, ಕಬೀರ್ ಹಾಗೂ ಇಮ್ರಾನ್ ಪಾತ್ರ ನೋಡಲು ಅಭಿಮಾನಿಗಳು ತೀವ್ರ ಕಾತರಗೊಂಡಿದ್ದಾರೆ.

ಹಿಂದಿ ಚಿತ್ರರಂಗದ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್ ಅವರು ಮಾನ್ಸೂನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ದಿ ಹಾಲಿವುಡ್ ರಿಪೋರ್ಟರ್’ ಜೊತೆ ಮಾತನಾಡುತ್ತಾ ಅವರು ‘ಜಿಂದಗಿ ನಾ ಮಿಲೇಗಿ ದೊಬಾರಾ ಸೀಕ್ವೆಲ್ ಕೆಲಸ ನಡೆಯುತ್ತಿದೆ. ಕಥೆ ಸರಿಯಾದ ಹಾದಿಗೆ ಬಂದರೆ ಖಂಡಿತ ಸಿನಿಮಾ ಬರಲಿದೆ. ಹಳೆಯ ಪಾತ್ರಗಳನ್ನು ಮತ್ತೆ ತೆರೆಮೇಲೆ ತರುವುದು ಅದ್ಭುತ ಅನುಭವವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಹೃತಿಕ್ ರೋಶನ್, ಅಭಯ್ ಡಿಯೋಲ್ ಹಾಗೂ ಫರ್ಹಾನ್ ಅಖ್ತರ್ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು. 2025ರ ಈ ಜಾಹೀರಾತು ಪ್ರವಾಸೋದ್ಯಮಕ್ಕೆ ಸಂಬಂಧಿಸಿತ್ತು. ಇದನ್ನು ನೋಡಿ ಅಭಿಮಾನಿಗಳು ಸೀಕ್ವೆಲ್ ಟ್ರೇಲರ್ ಎಂದೇ ಭಾವಿಸಿದ್ದರು. ನಂತರ ಅದು ಕೇವಲ ಜಾಹೀರಾತು ಎಂದು ತಿಳಿದು ಹಲವರು ನಿರಾಶೆಗೊಂಡಿದ್ದರು. ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ ಜೋಯಾ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ సినిಮಾಗಳ ಮೇಲಿನ ವಿಮರ್ಶೆಗಳ ಬಗ್ಗೆಯೂ ಜೋಯಾ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀಮಂತರ ಕಥೆಗಳನ್ನು ಮಾತ್ರ ಮಾಡುತ್ತಾರೆಂಬ ಟೀಕೆಗೆ ಅವರು ತಲೆಕೆಡಿಸಿಕೊಂಡಿಲ್ಲ. ‘ಗಲ್ಲಿ ಬಾಯ್’ ನಂತಹ ವಿಭಿನ್ನ ಚಿತ್ರಗಳನ್ನೂ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮಿಷ್ಟದ ಕಥೆ ಹೇಳುವ ಹಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಪ್ರೇಕ್ಷಕರು ಇಷ್ಟಪಟ್ಟು ನೋಡಿದರೆ ಸಾಕು ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ಈ ಗ್ರಾಮದಲ್ಲಿ ಕತ್ರಿನಾ ಕೈಫ್​ನ ಪೂಜಿಸಲಾಗುತ್ತದೆ; ದಂಪತಿಗಳಿಗೆ ನಟಿಯೇ ದೇವರು

2011ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸ್ಪೇನ್ ಹಾಗೂ ಭಾರತದಲ್ಲಿ ಚಿತ್ರೀಕರಣಗೊಂಡಿತ್ತು. 45 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 153 ಕೋಟಿ ಗಳಿಸಿತ್ತು. ಕತ್ರಿನಾ ಕೈಫ್ ಹಾಗೂ ಕಲ್ಕಿ ಕೊಚ್ಲಿನ್ ಮುಖ್ಯ ಪಾತ್ರದಲ್ಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us