ಚಿತ್ರರಂಗ ಕಂಡ ದುಬಾರಿ ವಿಚ್ಛೇದನ; ಸ್ಟಾರ್ ಹೀರೋ ಪತ್ನಿಗೆ ಸಿಕ್ಕಿತ್ತು 380 ಕೋಟಿ ರೂಪಾಯಿ ಜೀವನಾಂಶ
ಬಾಲಿವುಡ್‌ನಲ್ಲಿ ಹಲವು ದುಬಾರಿ ವಿಚ್ಛೇದನಗಳು ನಡೆದಿವೆ. ಹೃತಿಕ್ ರೋಷನ್ ಸುಸ್ಸಾನೆ ಖಾನ್‌ಗೆ 380 ಕೋಟಿ ರೂಪಾಯಿ ಜೀವನಾಂಶ ನೀಡಿದ್ದು ಇದು ಇತಿಹಾಸದಲ್ಲೇ ಅತಿ ದೊಡ್ಡದು. ಕರೀಷ್ಮಾ ಕಪೂರ್ ಪತಿ 70 ಕೋಟಿ, ಆಮೀರ್ ಖಾನ್ 50 ಕೋಟಿ, ಮಲೈಕಾ ಅರೋರಾ ಪತಿ 10-15 ಕೋಟಿ ನೀಡಿದ್ದಾರೆ.

ಬಾಲಿವುಡ್‌ನಲ್ಲಿ ವಿವಾಹ ಹಾಗೂ ವಿಚ್ಛೇದನ ಎರಡೂ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ವಿವಾಹ ಆಗುವುದಕ್ಕೂ ಮೊದಲೂ ಡೇಟಿಂಗ್ ವಿಚಾರವು ಚರ್ಚೆಯಲ್ಲಿ ಇದ್ದರೆ, ವಿವಾಹದ ಬಳಿಕ ಕೆಲವೊಮ್ಮೆ ಡಿವೋರ್ಸ್ ಆಗುವ ಮೂಲಕ ಇವರು ಸುದ್ದಿ ಆಗುತ್ತಾರೆ. ಇತ್ತೀಚೆಗೆ ಧನಶ್ರೀ (Dhanashree) ಹಾಗೂ ಯಜುವೇಂದ್ರ ಚಾಹಲ್ ಬೇರೆ ಆದರು. ಚಾಹಲ್ ಅವರು ಬರೋಬ್ಬರಿ 4.75 ಕೋಟಿ ರೂಪಾಯಿ ಪರಿಹಾರ ಹಣ ನೀಡಿದ್ದಾರೆ. ಚಿತ್ರರಂಗದಲ್ಲಿ ಅನೇಕ ದುಬಾರಿ ವಿಚ್ಛೇದನಗಳು ನಡೆದಿವೆ. ಆ ಬಗ್ಗೆ ನೋಡೋಣ.
ಹೃತಿಕ್ ರೋಷನ್ ಹಾಗೂ ಸುಸ್ಸಾನೆ ಖಾನ್
ಹೃತಿಕ್ ರೋಷನ್ ಹಾಗೂ ಸುಸ್ಸಾನೆ ಖಾನ್ ಅವರು 2000ನೇ ಇಸ್ವಿಯಲ್ಲಿ ವಿವಾಹ ಆದರು. 14 ವರ್ಷಗಳ ಕಾಲ ಇವರು ಸಂಸಾರ ನಡೆಸಿದರು. 2014ರಲ್ಲಿ ಇವರು ಬೇರೆ ಆದರು. ವರದಿಗಳ ಪ್ರಕಾರ ಹೃತಿಕ್ ರೋಷನ್ ಅವರು ಬರೋಬ್ಬರಿ 380 ಕೋಟಿ ರೂಪಾಯಿ ಜೀವನಾಂಶವನ್ನು ಸುಸ್ಸಾನೆ ಅವರಿಗೆ ನೀಡಿದ್ದಾರೆ. ಇದು ಚಿತ್ರರಂಗದ ದುಬಾರಿ ವಿಚ್ಛೇದನ ಎನಿಸಿಕೊಂಡಿದೆ. ಈಗ ಹೃತಿಕ್ ಅವರು ಸಬಾ ಆಜಾದ್ ಜೊತೆ ಸುತ್ತಾಡುತ್ತಾ ಇದ್ದಾರೆ. ಇವರು ಇನ್ನೂ ವಿವಾಹ ಆಗಿಲ್ಲ.
ಕರೀಷ್ಮಾ ಹಾಗೂ ಸಂಜಯ್ ಕಪೂರ್
ಕರೀಷ್ಮಾ ಕಪೂರ್ ಹಾಗೂ ಸಂಜಯ್ ಕಪೂರ್ ಅವರು 2003ರಲ್ಲಿ ವಿವಾಹ ಆಗಿ 2016ರಲ್ಲಿ ಬೇರೆ ಆದರು. ಇಷ್ಟು ವರ್ಷಗಳ ಸಂಸಾರದಿಂದ ಕರೀಷ್ಮಾ ಅವರು ಜೀವನಾಂಶವಾಗಿ ಬರೋಬ್ಬರಿ 70 ಕೋಟಿ ರೂಪಾಯಿ ಪಡೆದಿದ್ದಾರೆ. ಜೊತೆಗೆ ದುಬಾರಿ ಮನೆಯನ್ನು ಕೂಡ ಪಡೆದುಕೊಂಡಿದ್ದರು. ಮಗುವನ್ನು ಯಾರು ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ಕಿತ್ತಾಟ ನಡೆದಿದ್ದರಿಂದ ಈ ಕೇಸ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಆಮಿರ್ ಖಾನ್ ಹಾಗೂ ರೀನಾ ದತ್ತ
ಆಮಿರ್ ಖಾನ್ ಹಾಗೂ ರೀನಾ ದತ್ತ 16 ವರ್ಷಗಳ ಕಾಲ ಒಟ್ಟಿಗೆ ಇದ್ದರು. 2002ರಲ್ಲಿ ಇವರು ಬೇರೆ ಆದರು. ಆಮಿರ್ ಖಾನ್ ಅವರು ಬರೋಬ್ಬರಿ 50 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಮಿರ್ ಆ ಬಳಿಕ ಕಿರಣ್ ರಾವ್ನ ವಿವಾಹ ಆಗಿ ವಿಚ್ಛೇದನ ಪಡೆದರು. ಈಗ ಗೌರಿ ಎಂಬ ಬೆಂಗಳೂರು ಮಹಿಳೆ ಜೊತೆ ಸುತ್ತಾಡುತ್ತಿದ್ದಾರೆ.
ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್
ಮಲೈಕಾ ಅರೋರಾ ಹಾಗೂ ಅರ್ಬಾಜ್ ಖಾನ್ ಅವರು 19 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿ 2017ರಲ್ಲಿ ಬೇರೆ ಆದರು. 10-15 ಕೋಟಿ ರೂಪಾಯಿ ಜೀವನಾಂಶ ಮಲೈಕಾಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವಿಚ್ಛೇದನದ ಬಳಿಕ ಸಾಕಷ್ಟು ತೊಂದರೆ ಎದುರಿಸಿದೆ ಎಂದು ಮಲೈಕಾ ಹೇಳಿದ್ದರು.
ಇದನ್ನೂ ಓದಿ: ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?
ಸೈಫ್ ಹಾಗೂ ಅಮೃತಾ
ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರು 2004ರಲ್ಲಿ ಬೇರೆ ಆದರು. ಸೈಫ್ ಅಲಿ ಖಾನ್ ಅವರು 5 ಕೋಟಿ ರೂಪಾಯಿ ಜೀವನಾಂಶ ಪಾವತಿಸಿದರು. ಇಷ್ಟೇ ಅಲ್ಲ, ಅವರ ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 1 ಲಕ್ಷ ರೂಪಾಯಿ ನೀಡೋದಾಗಿ ಒಪ್ಪಂದ ಮಾಡಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.