ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ‘ಮೈದಾನ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಇದು ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಆಧರಿಸಿದೆ. ಸೈಯದ್ ಅವರ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಬೋನಿ ಕಪೂರ್ ಅವರು ಬ್ಯುಸಿ ಇದ್ದಾರೆ. ಈ ವೇಳೆ ಅವರು ಜಾನ್ವಿ ಕಪೂರ್ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಬಗ್ಗೆ ಮಾತನಾಡಿದ್ದಾರೆ.
ಜೂಮ್ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ಮಾತನಾಡಿದ್ದಾರೆ. ‘ನನಗೆ ಶಿಖರ್ ಅಂದರೆ ಪ್ರೀತಿ. ಜಾನ್ವಿ ಅವನ ಜೊತೆ ಕಾಣಿಸಿಕೊಳ್ಳದೇ ಇರುವಾಗಲೂ ನನಗೆ ಅವರ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅವರು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಅವರು ಯಾವಾಗಲೂ ಓಡಿ ಬರುತ್ತಾರೆ. ಅವರು ನನ್ನೊಂದಿಗೆ, ಜಾನ್ವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಜಾನ್ವಿ ಕಪೂರ್ ಅವರು ಶಿಖರ್ ಜೊತೆಗಿನ ಸಂಬಂಧವನ್ನು ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಅವರು ಆಗಾಗ ಡಿನ್ನರ್ ಡೇಟ್ಗೆ ತೆರಳುತ್ತಾ ಇರುತ್ತಾರೆ. ಇವರು ಒಟ್ಟಾಗಿ ಪಾರ್ಟಿ ಮಾಡುತ್ತಾರೆ. ವಿದೇಶಕ್ಕೂ ಒಟ್ಟಾಗಿ ತೆರಳಿದ್ದೂ ಇದೆ. ಇತ್ತೀಚೆಗೆ ಜಾನ್ವಿ ಕಪೂರ್ ಅವರು ತಿರುಪತಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಜಾನ್ವಿ ಕಪೂರ್ ಜೊತೆ ಶಿಖರ್ ಕೂಡ ಇದ್ದಾರೆ. ಕೇವಲ ಜಾನ್ವಿಗೆ ಮಾತ್ರವಲ್ಲದೆ ಅವರ ತಂದೆ ಬೋನಿ ಕಪೂರ್ಗೂ ಶಿಖರ್ ಸಖತ್ ಇಷ್ಟ ಆಗಿದ್ದಾರೆ.
ಇದನ್ನೂ ಓದಿ: ಮಂಡಿ ಮೂಲಕ ತಿರುಮಲದ ಮೆಟ್ಟಿಲೇರಿದ ಜಾನ್ವಿ ಕಪೂರ್; ಇಲ್ಲಿದೆ ವಿಡಿಯೋ
ಜಾನ್ವಿ ಕಪೂರ್, ಶಿಖರ್ ಹಾಗೂ ಓರಿ ಕಳೆದ ವರ್ಷ ಏಪ್ರಿಲ್ 27ರಂದು ತಿರುಪತಿಗೆ ಭೇಟಿ ನೀಡಿದ್ದರು. ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂವರ ಫೋಟೋ ಹಾಗೂ ವಿಡಿಯೋ ವೈರಲ್ ಆಗಿ ಸದ್ದು ಮಾಡಿತ್ತು.
ಶಿಖರ್ ಪಹಾರಿಯಾ ಅವರು ಮಹಾರಾಷ್ಟ್ರ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಅವರ ಮೊಮ್ಮೊಗ. ಶಿಖರ್ ಹಾಗೂ ಜಾನ್ವಿ ಅವರು ಪ್ರೀತಿಯಲ್ಲಿ ಇದ್ದರು. ನಂತರ ಬ್ರೇಕಪ್ ಆಯಿತು. ನಂತರ ಇಬ್ಬರೂ ಪ್ಯಾಚಪ್ ಮಾಡಿಕೊಂಡರು. ಈಗ ಇಬ್ಬರೂ ಮತ್ತೆ ಡೇಟಿಂಗ್ ಆರಂಭಿಸಿದ್ದಾರೆ. ಬೋನಿ ಕಪೂರ್ ಜೊತೆಗೂ ಶಿಖರ್ ಆಗಾಗ ಕಾಣಿಸಿಕೊಳ್ಳುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ