ಬೋನಿ ಕಪೂರ್ (Boney Kapoor) ಅವರು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಫೇಮಸ್ ಆಗಿದ್ದಾರೆ. ಕೇವಲ ಹಿಂದಿ ಮಾತ್ರವಲ್ಲದೆ ದಕ್ಷಿಣದಲ್ಲೂ ಅವರ ಸಿನಿಮಾಗಳನ್ನು ನಿರ್ಮಾಣ ಮಾಡಿ ಲಾಭ ಕಂಡಿದ್ದಾರೆ. ಈಗ ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾಗೆ ಬೋನಿ ಬಂಡವಾಳ ಹೂಡಿದ್ದಾರೆ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರದ ಪ್ರಚಾರದ ವೇಳೆ ಅವರು ಬೋನಿ ಕಪೂರ್ ಹಾಗೂ ಸಲ್ಮಾನ್ ಖಾನ್ ಫ್ರೆಂಡ್ಶಿಪ್ ಬಗ್ಗೆ ಮಾತನಾಡಿದ್ದಾರೆ.
ಅರ್ಜುನ್ ಕಪೂರ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾವುದೂ ಸರಿ ಇಲ್ಲ. ಇದಕ್ಕೆ ಕಾರಣ ಹಲವು. ಸಲ್ಮಾನ್ ಹಾಗೂ ಅರ್ಜುನ್ ಕಪೂರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆ ಸಂದರ್ಭದಲ್ಲಿ ಅರ್ಜುನ್ ಕಪೂರ್ ಅವರು ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜೊತೆ ಡೇಟ್ ಮಾಡಿದ್ದರು. ಇದು ಸಲ್ಲು ಕೋಪಕ್ಕೆ ಕಾರಣ ಆಯಿತು. ಆ ಬಳಿಕ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಅವರ ಮಾಜಿ ಪತ್ನಿ ಮಲೈಕಾ ಅರೋರಾ ಜೊತೆ ಡೇಟಿಂಗ್ ಆರಂಭಿಸಿದರು. ಇದು ಕೂಡ ಸಲ್ಲು ಹಾಗೂ ಅರ್ಜುನ್ ಸಂಬಂಧ ಹದಗೆಡಿಸಿದೆ. ಆದರೆ, ಮೊದಲು ಈ ರೀತಿ ಇರಲಿಲ್ಲ.
‘ನಾನು ಮೋನಾ ಕಪೂರ್ ಅವರಿಂದ (ಬೋನಿ ಮೊದಲ ಪತ್ನಿ) ದೂರ ಆಗಿರಬಹುದು. ಆದರೆ, ಅರ್ಜುನ್ ಕಪೂರ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಅರ್ಜುನ್ ನಟ ಆಗುತ್ತಾನೆ ಎಂದುಕೊಂಡಿರಲಿಲ್ಲ. ಒಂದು ದಿನ ಸಲ್ಮಾನ್ ಖಾನ್ ನನ್ನ ಕರೆದು ಆ ಬಗ್ಗೆ ಹೇಳಿದರು. ಬೋನಿ ಅವರೇ ಅರ್ಜುನ್ ನಟ ಆಗುತ್ತಾನೆ. ಅವನಲ್ಲಿ ಆ ಕಲೆ ಇದೆ. ಅವನು ನಟನಾಗಲು ಇಷ್ಟಪಡುತ್ತಿದ್ದಾನೆ ಎಂದು ಸಲ್ಮಾನ್ ಖಾನ್ ಹೇಳಿದ್ದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡರು ಬೋನಿ.
‘ಅರ್ಜುನ್ ಕಪೂರ್ ದೇಹದ ತೂಕ ಇಳಿಸಿಕೊಂಡರು. ಇದರ ಕ್ರೆಡಿಟ್ನ ಸಲ್ಮಾನ್ ಖಾನ್ಗೆ ನೀಡಬೇಕು. ಅವರ ಮಧ್ಯೆ ಇಂದು ಯಾವುದೂ ಸರಿ ಇಲ್ಲದೆ ಇರಬಹುದು. ಆದರೆ, ಅರ್ಜುನ್ ವಿಚಾರದಲ್ಲಿ ಸಲ್ಮಾನ್ ಖಾನ್ ತಮ್ಮ ಕೈಲಾದ್ದನ್ನು ನೀಡಿದ್ದಾರೆ. ಅರ್ಜುನ್ ಬೆಳವಣಿಗೆಗೆ ಸಲ್ಮಾನ್ ಪ್ರಭಾವ ಇದೆ’ ಎಂದಿದ್ದಾರೆ ಬೋನಿ ಕಪೂರ್.
ಅರ್ಜುನ್ ಕಪೂರ್ ಹಾಗೂ ಬೋನಿ ಮಧ್ಯೆ ಆದ ಕಿರಿಕ್ನಿಂದ ತಮ್ಮ ಸಂಬಂಧಕ್ಕೆ ತೊಂದರೆ ಆಯಿತೇ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಬೋನಿ ಕಪೂರ್ ಉತ್ತರಿಸಿದ್ದಾರೆ. ‘ಅವರಿಬ್ಬರ ಮಧ್ಯೆ ಆದ ಕಿರಿಕ್ನಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಸಲ್ಮಾನ್ ಎಂದರೆ ನನಗೆ ಈಗಲೂ ಇಷ್ಟ. ಅವರಂಥ ದೊಡ್ಡ ಹೃದಯ ಇರುವ ವ್ಯಕ್ತಿಗಳು ಕೆಲವೇ ಮಂದಿ. ನಾವು ಯಾವಾಗಲೂ ಭೇಟಿ ಆಗಬೇಕಾದರೂ ಪ್ರೀತಿಯಿಂದ ಸೇರುತ್ತೇವೆ’ ಎಂದಿದ್ದಾರೆ ಬೋನಿ ಕಪೂರ್.
ಇದನ್ನೂ ಓದಿ: ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ
ಅರ್ಜುನ್ ಕಪೂರ್ ಹಾಗೂ ಅರ್ಪಿತಾ ಖಾನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2005ರಲ್ಲಿ ಇವರು ಬೇರೆ ಆದರು. ಸದ್ಯ ಅರ್ಪಿತಾ ಅವರು ಆಯುಷ್ ಶರ್ಮಾನ ಮದುವೆ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ