‘ಬ್ರಹ್ಮಾಸ್ತ್ರ 2’ ಸಿನಿಮಾಗೆ ‘ರಾಮಾಯಣ’ ನಿರ್ಮಾಪಕನ ಪಾಲುದಾರಿಕೆ? ನಡೆಯುತ್ತಿದೆ ಕೊನೆಯ ಹಂತದ ಮಾತುಕತೆ

Brahmastra 2 Movie: 'ಬ್ರಹ್ಮಾಸ್ತ್ರ 2' ಸಿನಿಮಾದ ನಿರ್ಮಾಣಕ್ಕಾಗಿ ನಿರ್ದೇಶಕ ಅಯಾನ್ ಮುಖರ್ಜಿ ಪ್ರಸಿದ್ಧ 'ರಾಮಾಯಣ' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಪ್ರೈಮ್ ಫೋಕಸ್ ಸಂಸ್ಥೆಯ ವಿಎಫ್‌ಎಕ್ಸ್ ತಂತ್ರಜ್ಞಾನವು ಈ ಬಿಗ್ ಬಜೆಟ್ ಸಿನಿಮಾಗೆ ದೊಡ್ಡ ಬಲ ತುಂಬುವ ನಿರೀಕ್ಷೆಯಿದೆ. 

ಬ್ರಹ್ಮಾಸ್ತ್ರ 2 ಸಿನಿಮಾಗೆ ‘ರಾಮಾಯಣ’ ನಿರ್ಮಾಪಕನ ಪಾಲುದಾರಿಕೆ? ನಡೆಯುತ್ತಿದೆ ಕೊನೆಯ ಹಂತದ ಮಾತುಕತೆ
ಬ್ರಹ್ಮಾಸ್ತ್ರ 2

Updated on: Aug 27, 2026 | 9:31 AM

ಮುಖ್ಯಾಂಶಗಳು

  • 'ಬ್ರಹ್ಮಾಸ್ತ್ರ 2' ಸಿನಿಮಾಗೆ ಸಿಕ್ತು ಬಿಗ್ ಸಪೋರ್ಟ್
  • 'ರಾಮಾಯಣ' ನಿರ್ಮಾಪಕರ ಜೊತೆ ಅಯಾನ್ ಮಾತುಕತೆ
  • ಜಿಯೋ ಸ್ಟುಡಿಯೋಸ್ ಔಟ್, ಪ್ರೈಮ್ ಫೋಕಸ್ ಇನ್ 

ಬಾಲಿವುಡ್‌ನ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ 2’ ಸಿನಿಮಾಗೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ನಿರ್ದೇಶಕ ಅಯಾನ್ ಮುಖರ್ಜಿ ಅವರು ತಮ್ಮ ಮುಂದಿನ ಭಾಗದ ನಿರ್ಮಾಣಕ್ಕಾಗಿ ಹೊಸ ಪಾಲುದಾರರ ಹುಡುಕಾಟದಲ್ಲಿದ್ದಾರೆ. ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಈ ಕುರಿತು ಪ್ರಮುಖ ಮಾತುಕತೆಗಳು ನಡೆಯುತ್ತಿವೆ. ಈ ಮೂಲಕ ಚಿತ್ರದ ಕೆಲಸಗಳಿಗೆ ಮತ್ತೆ ಚಾಲನೆ ಸಿಗುವ ಸೂಚನೆ ಸಿಕ್ಕಿದೆ.

ಅಯಾನ್ ಮುಖರ್ಜಿ ಅವರ ಸ್ಟಾರ್‌ಲೈಟ್ ಪಿಕ್ಚರ್ಸ್ ಸಂಸ್ಥೆಯು ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ಮಾಣದ ಹಕ್ಕುಗಳನ್ನು ಹೊಂದಿದೆ. ಪ್ರಸ್ತುತ ‘ಬ್ರಹ್ಮಾಸ್ತ್ರ 2’ ನಿರ್ಮಾಣಕ್ಕೆ ಸ್ಟುಡಿಯೋ ಪಾಲುದಾರರ ಅಗತ್ಯವಿದೆ. ಹೀಗಾಗಿ ಪ್ರೈಮ್ ಫೋಕಸ್ ಸಂಸ್ಥೆಯ ನಮಿತ್ ಮಲ್ಹೋತ್ರಾ ಅವರೊಂದಿಗೆ ಪ್ರೊಡಕ್ಷನ್ ಹೌಸ್ ಮಾತುಕತೆ ನಡೆಸುತ್ತಿದೆ. ಈ ಸಂಸ್ಥೆಯು ಈ ಹಿಂದೆ ಮೊದಲ ಭಾಗದ ನಿರ್ಮಾಣದಲ್ಲೂ ಭಾಗಿಯಾಗಿತ್ತು.

ವಿಎಫ್‌ಎಕ್ಸ್ = ತಂತ್ರಜ್ಞಾನದಲ್ಲಿ ಪ್ರೈಮ್ ಫೋಕಸ್ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಕೆಲಸಗಳ ಮೂಲಕ ಈ ಸಂಸ್ಥೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ. ‘ಬ್ರಹ್ಮಾಸ್ತ್ರ’ ಸಿನಿಮಾಗೆ ಭಾರಿ ಪ್ರಮಾಣದ ವಿಎಫ್‌ಎಕ್ಸ್ ಅಗತ್ಯವಿದೆ. ಹೀಗಾಗಿ ನಮಿತ್ ಮಲ್ಹೋತ್ರಾ ಅವರ ಸೇರ್ಪಡೆ ಸಿನಿಮಾಗೆ ದೊಡ್ಡ ಬಲ ತುಂಬಲಿದೆ.

ಈ ಮೊದಲು ಜಿಯೋ ಸ್ಟುಡಿಯೋಸ್ ಜೊತೆ ಮಾತುಕತೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆ ಒಪ್ಪಂದ ಮುರಿದುಬಿದ್ದಿದೆ. ಅದಕ್ಕೂ ಮುನ್ನ ಧರ್ಮ ಪ್ರೊಡಕ್ಷನ್ಸ್ ಮತ್ತು ಯಶ್ ರಾಜ್ ಫಿಲ್ಮ್ಸ್ ಜೊತೆಗಿನ ಚರ್ಚೆಯೂ ಫಲಪ್ರದವಾಗಿರಲಿಲ್ಲ. ಮೊದಲ ಭಾಗದಲ್ಲಿದ್ದ ಸ್ಟಾರ್ ಸ್ಟುಡಿಯೋಸ್ ಕೂಡ ಈಗ ಹೊಸ ಭಾಗದಿಂದ ಹೊರಗುಳಿದಿದೆ.

ಇದನ್ನೂ ಓದಿ: ‘ಬ್ರಹ್ಮಾಸ್ತ್ರ 2’ನಲ್ಲಿ ಇರುವುದಿಲ್ಲ ಆಲಿಯಾ ಭಟ್, ಮತ್ಯಾರು ನಾಯಕಿ?

ಪ್ರಸ್ತುತ ಪ್ರೈಮ್ ಫೋಕಸ್ ಜೊತೆಗಿನ ಮಾತುಕತೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಈ ಸಹಯೋಗದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ‘ಬ್ರಹ್ಮಾಸ್ತ್ರ 2’ ಮತ್ತಷ್ಟು ಅದ್ಧೂರಿಯಾಗಿ ಮೂಡಿಬರಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us