ಕ್ಯಾನ್ಸರ್ ಪೀಡಿತ ಬಾಲಿವುಡ್ ನಟಿಗೆ ಮಗನ ಮದುವೆ ಚಿಂತೆ
ಸಿಖಂದರ್ ಖೇರ್ ಬುಧವಾರ (ಜೂ.2) ರಾತ್ರಿ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರು ಅಮ್ಮನ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದಾರೆ.
ಬಾಲಿವುಡ್ ನಟ ಅನುಪಮ್ ಖೇರ್ ಅವರ ಪತ್ನಿ, ನಟಿ ಕಿರಣ್ ಖೇರ್ ರಕ್ತದ ಕ್ಯಾನ್ಸರ್ನಿಂದ ಬಳುತ್ತಿದ್ದಾರೆ. ಈ ವಿಚಾರವನ್ನು ಅನುಪಮ್ ಖೇರ್ ಇತ್ತೀಚೆಗೆ ಹೇಳಿಕೊಂಡಿದ್ದರು. ಈಗ ಅವರ ಮಗ ಸಿಖಂದರ್ ಖೇರ್ ಇನ್ಸ್ಟಾಗ್ರಾಂ ಲೈವ್ನಲ್ಲಿ ಬಂದಿದ್ದು, ಅದರಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಮಗನಿಗೆ ಮದುವೆ ಆಗುವಂತೆ ಮನವಿ ಮಾಡಿದ್ದಾರೆ.
ಸಿಖಂದರ್ ಖೇರ್ ಬುಧವಾರ (ಜೂ.2) ರಾತ್ರಿ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರು ಅಮ್ಮನ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದಾರೆ. ನನ್ನ ಅಮ್ಮ ಆರೋಗ್ಯವಾಗಿದ್ದಾರೆ. ನಿಮ್ಮ ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ. ಈ ವಿಡಿಯೋದಲ್ಲಿ ಕಿರಣ್ ಸಾಕಷ್ಟು ಖುಷಿಯಾಗಿದ್ದರು.
ನಿಮ್ಮ ಹಾರೈಕೆಗೆ ಧನ್ಯವಾದಗಳು. ನನ್ನ ತಾಯಿ ಇಲ್ಲಿದ್ದಾರೆ. ನಿಮ್ಮ ಹಾರೈಕೆಯಿಂದ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಸಿಖಂದರ್. ಈ ವಿಡಿಯೋದಲ್ಲಿ ಅನುಪಮ್ ಖೇರ್ ಕೂಡ ಇದ್ದಾರೆ. ಇನ್ನು, ಈ ವಿಡಿಯೋದಲ್ಲಿ ಮಾತನಾಡಿರುವ ಕಿರಣ್, ನಿನಗೆ ಸದ್ಯದಲ್ಲೇ 41 ವರ್ಷ ಆಗಲಿದೆ. ಹೀಗಾಗಿ, ಬೇಗ ಮದುವೆ ಆಗು ಎಂದು ಮನವಿ ಮಾಡಿಕೊಂಡಿದ್ದಾರೆ.
View this post on Instagram
ಕಿರಣ್ ಮೃತಪಟ್ಟಿದ್ದರು ಎನ್ನುವ ವದಂತಿ ಇತ್ತೀಚೆಗೆ ಹರಿದಾಡಿತ್ತು. ‘ಕಿರಣ್ ಆರೋಗ್ಯ ಬಗ್ಗೆ ವದಂತಿ ಹರಿದಾಡುತ್ತಿದೆ. ಅದೆಲ್ಲವೂ ಸುಳ್ಳು. ಅವರು ಕ್ಷೇಮವಾಗಿದ್ದಾರೆ. ಇಂದು ಮಧ್ಯಾಹ್ನ ಅವರು ಕೊವಿಡ್ಗೆ 2ನೇ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ನೆಗೆಟಿವ್ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸೇಫ್ ಆಗಿರಿ’ ಎಂದು ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
ಇದನ್ನೂ ಓದಿ:
Kirron Kher: ಅನುಪಮ್ ಖೇರ್ ಪತ್ನಿ, ಖ್ಯಾತ ನಟಿ ಕಿರಣ್ ಖೇರ್ ನಿಧನದ ವದಂತಿಗೆ ಬ್ರೇಕ್