ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್​; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್​

| Updated By: ಮದನ್​ ಕುಮಾರ್​

Updated on: Dec 20, 2021 | 9:03 AM

Devi Sri Prasad: ‘ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿಶ್ರೀ ಪ್ರಸಾದ್​ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್​ ದೂರು ನೀಡಿದ್ದಾರೆ.

ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್​; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್​
ದೇವಿಶ್ರೀ ಪ್ರಸಾದ್
Follow us on

ಅಲ್ಲು ಅರ್ಜುನ್​ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ (Pushpa Movie) ಸಿನಿಮಾ ಗೆಲ್ಲಲು ಹಾಡುಗಳು ಕೂಡ ಪ್ರಮುಖ ಕಾರಣ. ಸಂಗೀತ ನಿರ್ದೇಶನ ದೇವಿಶ್ರೀ ಪ್ರಸಾದ್​ (Devi Sri Prasad) ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಲ್ಲ ಹಾಡುಗಳು ಜನಮನ ಗೆದ್ದಿವೆ. ಅದರಲ್ಲೂ ಸಮಂತಾ (Samantha) ನಟಿಸಿರುವ ‘ಹು ಅಂತಿಯಾ ಮಾವ ಊಹೂ ಅಂತಿಯಾ ಮಾವ..’ ಹಾಡು ಹೆಚ್ಚು ಫೇಮಸ್​ ಆಗಿದೆ. ಇದರಿಂದ ದೇವಿಶ್ರೀ ಪ್ರಸಾದ್​ ಅವರ ಡಿಮ್ಯಾಂಡ್​ ಹೆಚ್ಚಿದೆ. ಅದರ ಜತೆಗೆ ಅವರು ವಿವಾದವನ್ನೂ ಮಾಡಿಕೊಂಡಿದ್ದಾರೆ. ಭಕ್ತಿಗೀತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ದೇವಿಶ್ರೀ ಪ್ರಸಾದ್​ ವಿರುದ್ಧ ದೂರು ದಾಖಲಾಗಿದೆ. ಹಿಂದುಗಳಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿದೆ.

‘ಪುಷ್ಪ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ದೇವಿಶ್ರೀ ಪ್ರಸಾದ್​ ಭಾಗವಹಿಸಿದ್ದರು. ಆ ವೇಳೆ ಅವರು ತಮ್ಮ ಸಿನಿಮಾಗಳ ಐಟಂ ಹಾಡುಗಳ ಕುರಿತು ಮಾತನಾಡಿದರು. ‘ಜನರ ಪಾಲಿಗೆ ಅವು ಐಟಂ ಸಾಂಗ್​ ಆಗಿರಬಹುದು. ಆದರೆ ನನಗೆ ಅವು ಭಕ್ತಿಗೀತೆಗಳಿದ್ದಂತೆ. ಅದೇ ರಾಗದಲ್ಲಿ ದೇವರ ಹಾಡುಗಳನ್ನು ಹೇಳಬಹುದು’ ಎಂದು ಅವರು ಹೇಳಿಕೆ ನೀಡಿದ್ದಾರೆ. ಆ ವೇದಿಕೆಯಲ್ಲಿ ‘ಉ ಅಂಟಾವಾ ಮಾವ ಉಊ ಅಂಟಾವಾ ಮಾವ..’ ಹಾಡಿನ ಸಾಹಿತ್ಯಕ್ಕೆ ಬದಲಾಗಿ ಅವರು ದೇವರ ಕುರಿತಾದ ಸಾಲುಗಳನ್ನು ಹಾಡಿದ್ದಾರೆ. ಅದನ್ನು ಕೇಳಿ ಅಲ್ಲಿದ್ದ ಅನೇಕರು ನಕ್ಕು ಎಂಜಾಯ್​ ಮಾಡಿದ್ದಾರೆ. ಆದರೆ ಕೆಲವರು ದೇವಿಶ್ರೀ ಪ್ರದಾದ್​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ತೆಲಂಗಾಣದ ಗೋಷಮಹಲ್​ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್​ ಅವರು ದೇವಿಶ್ರೀ ಪ್ರಸಾದ್​ ವಿರುದ್ಧ ದೂರು ದಾಖಲಿಸಿದ್ದಾರೆ. ‘ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿಶ್ರೀ ಪ್ರಸಾದ್​ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರು ನೀಡಿದ್ದಾರೆ. ‘ಉ ಅಂಟಾವಾ ಮಾವ ಉಊ ಅಂಟವಾ ಮಾವ..’ ಹಾಡು ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಕೆಲವರ ವಿರೋಧಕ್ಕೆ ಕಾರಣ ಆಗಿತ್ತು. ಈ ಗೀತೆಯಲ್ಲಿ ಗಂಡಸರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ವಿವಾದ ಏನೇ ಇದ್ದರೂ ಈ ಹಾಡಿಗೆ ಭರ್ಜರಿ ಜನಸ್ಪಂದನೆ ವ್ಯಕ್ತವಾಗಿದೆ. ಅದಕ್ಕೆ ನಟಿ ಸಮಂತಾ ಅವರು ಫುಲ್​ ಖುಷ್​ ಆಗಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದ್ದರು. ಈ ಹಾಡಿಗೆ ಜನರು ಚಿತ್ರಮಂದಿರದಲ್ಲಿ ಕುಣಿಯುತ್ತಿರುವ ಅನೇಕ ವಿಡಿಯೋಗಳನ್ನು ಹಂಚಿಕೊಂಡು ‘ಇದೆಂಥ ಹುಚ್ಚಾಟ’ ಎಂದು ಕ್ಯಾಪ್ಷನ್​ ನೀಡಿದ್ದರು.

ಇದನ್ನೂ ಓದಿ:

‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು?

‘ಕೆಜಿಎಫ್​’ ವರ್ಸಸ್​ ‘ಪುಷ್ಪ’; ಮೊದಲ ದಿನ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಗಳು ಗಳಿಸಿದ್ದೆಷ್ಟು?