AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಸಿಎಲ್ 2026: ವೇಳಾಪಟ್ಟಿ ಬಿಡುಗಡೆ, ಸುದೀಪ್ ಆಡುತ್ತಾರಾ?

CCL 2026: ಭಾರತದ ಬೇರೆ ಬೇರೆ ಚಿತ್ರರಂಗದವರೆಲ್ಲ ಸೇರಿ ಕ್ರಿಕೆಟ್ ಆಡುವ ಜೊತೆಗೆ ಪ್ರೇಕ್ಷಕರಿಗೆ ಮನೊರಂಜನೆ ಕೊಡುವುದೇ ಸಿಸಿಎಲ್. ಕರ್ನಾಟಕದಿಂದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಸಿಸಿಎಲ್​​ನಲ್ಲಿ ಭಾಗವಹಿಸುತ್ತಾ ಬಂದಿದ್ದು, ಈ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದಾರೆ. ನಮ್ಮ ತಂಡಕ್ಕೆ ಕ್ರೇಜ್ ಜಾಸ್ತಿನೇ ಇರುತ್ತೆ. ಕೆಲವು ಸೀಸನ್​​ಗಳನ್ನು ಗೆದ್ದು ಚಾಂಪಯನ್ ಸಹ ಆಗಿದ್ದಾರೆ. ಇದೀಗ ಸಿಸಿಎಲ್​​ನ 12ನೇ ಸೀಸನ್ ಪ್ರಾರಂಭ ಆಗುತ್ತಿದ್ದು, ಶೆಡ್ಯೂಲ್ ಬಿಡುಗಡೆ ಆಗಿದೆ.

ಸಿಸಿಎಲ್ 2026: ವೇಳಾಪಟ್ಟಿ ಬಿಡುಗಡೆ, ಸುದೀಪ್ ಆಡುತ್ತಾರಾ?
Kichcha Sudeep
ಮಂಜುನಾಥ ಸಿ.
|

Updated on:Jan 10, 2026 | 9:23 PM

Share

ಭಾರತದಲ್ಲಿ ಕ್ರಿಕೆಟ್ (Cricket) ಮತ್ತು ಸಿನಿಮಾ ಅತಿ ದೊಡ್ಡ ಎಂಟರ್ಟೈನರ್​​ಗಳು. ಅತಿ ದೊಡ್ಡ ಉದ್ಯಮಗಳೂ ಸಹ ಹೌದು. ಕ್ರಿಕೆಟ್ಟಿಗರು ಸಿನಿಮಾ ರಂಗದವರನ್ನು ಮದುವೆ ಆಗುವುದು, ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಸಿನಿಮಾ ರಂಗದವರು ತಮ್ಮ ಸಿನಿಮಾ ಪ್ರಚಾರಕ್ಕೆ ಕ್ರಿಕೆಟ್ಟಿಗರನ್ನು ಅವಲಂಬಿಸುವುದು ಸಾಮಾನ್ಯ. ಸಿನಿಮಾದವರೇ ಕ್ರಿಕೆಟ್ಟಿಗರಾಗಿಬಿಟ್ಟರೆ? ಇದೇ ಆಲೋಚನೆಯಿಂದ ಹುಟ್ಟಿದ್ದೆ ಸಿಸಿಎಲ್. ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಭಾರತದಲ್ಲಿ ನಡೆಯುವ ಪ್ರಮುಖ ಕ್ರಿಕೆಟ್ ಲೀಗ್​​ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, 11 ಸೀಸನ್ ಮುಗಿಸಿ ಇದೀಗ 12ನೇ ಸೀಸನ್​​ಗೆ ಕಾಲಿಟ್ಟಿದೆ.

ಭಾರತದ ಬೇರೆ ಬೇರೆ ಚಿತ್ರರಂಗದವರೆಲ್ಲ ಸೇರಿ ಕ್ರಿಕೆಟ್ ಆಡುವ ಜೊತೆಗೆ ಪ್ರೇಕ್ಷಕರಿಗೆ ಮನೊರಂಜನೆ ಕೊಡುವುದೇ ಸಿಸಿಎಲ್. ಕರ್ನಾಟಕದಿಂದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಸಿಸಿಎಲ್​​ನಲ್ಲಿ ಭಾಗವಹಿಸುತ್ತಾ ಬಂದಿದ್ದು, ಈ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಿದ್ದಾರೆ. ನಮ್ಮ ತಂಡಕ್ಕೆ ಕ್ರೇಜ್ ಜಾಸ್ತಿನೇ ಇರುತ್ತೆ. ಕೆಲವು ಸೀಸನ್​​ಗಳನ್ನು ಗೆದ್ದು ಚಾಂಪಯನ್ ಸಹ ಆಗಿದ್ದಾರೆ. ಇದೀಗ ಸಿಸಿಎಲ್​​ನ 12ನೇ ಸೀಸನ್ ಪ್ರಾರಂಭ ಆಗುತ್ತಿದ್ದು, ಶೆಡ್ಯೂಲ್ ಬಿಡುಗಡೆ ಆಗಿದೆ.

ಈ ಬಾರಿ ಸಹ 8 ತಂಡಗಳು ಸಿಸಿಎಲ್ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ಕಿಂಗ್ಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್, ತೆಲುಗು ವಾರಿಯರ್ಸ್, ಭೋಜ್‌ಪುರಿ ಡಬ್ಬಂಗ್ಸ್, ಪಂಜಾಬ್ ಡಿ ಶೇರ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಕ್ರಿಕೆಟ್ ಆಡಿ ರಂಜಿಸಲಿದ್ದಾರೆ. ಕಳೆದ ವರ್ಷ ಪಂಜಾಬ್ ಡಿ ಶೇರ್ ತಂಡ ಚಾಂಪಿಯನ್ ಆಗಿತ್ತು. ಕರ್ನಾಟಕದಲ್ಲಿ ಸುದೀಪ್, ಡಾರ್ಲಿಂಗ್ ಕೃಷ್ಣ, ಗಣೇಶ್, ಜೆಕೆ, ಪೆಟ್ರೊಲ್ ಪ್ರಸನ್ನ ಇನ್ನೂ ಕೆಲವು ಅದ್ಭುತ ಆಟಗಾರರಿದ್ದಾರೆ.

ಇದನ್ನೂ ಓದಿ: ‘ಅಲೆಗಳ ವಿರುದ್ಧ ಹೋಗಲು ಸಮಯ ಬೇಕು’; ‘ಟಾಕ್ಸಿಕ್’ ಟೀಸರ್​ಗೆ ಸುದೀಪ್ ವಿಶ್

2026ರ ಸಿಸಿಎಲ್ 16 ಜನವರಿಯಿಂದ ಪ್ರಾರಂಭ ಆಗಲಿದ್ದು ಫೆಬ್ರವರಿ 1ಕ್ಕೆ ಮುಕ್ತಾಯ ಆಗಲಿದೆ. ಮೊದಲ ಪಂದ್ಯ ಕರ್ನಾಟಕ ಬಿಲ್ಡೋಜರ್ಸ್ ಮತ್ತು ಪಂಜಾಬ್ ನಡುವೆ ಇರಲಿದೆ. ವೈಜಾಗ್, ಮಥುರ ಮತ್ತು ಹೈದರಾಬಾದ್​​​ನಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡಗಳಿಗೆ ಆರಂಭಿಕ ಹಂತದಲ್ಲಿ ತಲಾ ಮೂರು ಪಂದ್ಯಗಳು ಇರಲಿವೆ. ಫೆಬ್ರವರಿ 1ರಂದು ಫೈನಲ್ ನಡೆಯಲಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ಈಗಾಗಲೇ ತಯಾರಿ ಆರಂಭ ಮಾಡಿದೆ. ಆದರೆ ತಂಡದ ಪ್ರಮುಖ ಆಟಗಾರ ಆಗಿರುವ ಸುದೀಪ್ ಅವರು ಇನ್ನೂ ತಂಡವನ್ನು ಸೇರಿಕೊಂಡಂತಿಲ್ಲ. ಅಲ್ಲದೆ ಮುಂದಿನ ವಾರ ಬಿಗ್​​ಬಾಸ್ ಫಿನಾಲೆ ಬೇರೆ ಇದೆ. ಆದರೆ 16ರಿಂದಲೇ ಮ್ಯಾಚ್​​ಗಳು ಪ್ರಾರಂಭ ಆಗುತ್ತಿವೆ. ಸುದೀಪ್ ಅವರು ಭಾಗವಹಿಸುತ್ತಾರೊ ಇಲ್ಲವೋ ಎಂಬ ಅನುಮಾನ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Sat, 10 January 26