AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ-ಶೋಭೀತಾ ಬಗ್ಗೆ ಭವಿಷ್ಯ ನುಡಿದು ಇಕ್ಕಟ್ಟಿಗೆ ಸಿಲುಕಿದ ಸೆಲೆಬ್ರಿಟಿ ಜ್ಯೋತಿಷಿ

ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಬಗ್ಗೆ ಭವಿಷ್ಯ ನುಡಿದ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿದ್ದು, ಹೈಕೋರ್ಟ್​ ಸಹ ವೇಣು ಸ್ವಾಮಿ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ನಾಗ ಚೈತನ್ಯ-ಶೋಭೀತಾ ಬಗ್ಗೆ ಭವಿಷ್ಯ ನುಡಿದು ಇಕ್ಕಟ್ಟಿಗೆ ಸಿಲುಕಿದ ಸೆಲೆಬ್ರಿಟಿ ಜ್ಯೋತಿಷಿ
ಮಂಜುನಾಥ ಸಿ.
|

Updated on: Nov 01, 2024 | 1:10 PM

Share

ತೆಲುಗು ಚಿತ್ರರಂಗದ ನಟ, ನಟಿಯರು ರಾಜಕಾರಣಿಗಳ ಬಗ್ಗೆ ಜ್ಯೋತಿಷ್ಯ ನುಡಿದು ಅದನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳುತ್ತಿದ್ದ ಟಾಲಿವುಡ್​ನ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಈಗ ತಮ್ಮ ಜ್ಯೋತಿಷ್ಯದಿಂದಲೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಹಿಂದೆ ನಾಗ ಚೈತನ್ಯ ಹಾಗೂ ಸಮಂತಾ ಬಗ್ಗೆ ವೇಣು ಸ್ವಾಮಿ ಜ್ಯೋತಿಷ್ಯ ನುಡಿದಿದ್ದರು. ಈ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎಂದು ವೇಣುಸ್ವಾಮಿ ಹೇಳಿದ್ದರು. ಅದರಂತೆ ಇಬ್ಬರೂ ವಿಚ್ಛೇದನ ಪಡೆದರು. ಆ ನಂತರ ವೇಣುಸ್ವಾಮಿಗೆ ಬೇಡಿಕೆ ಹೆಚ್ಚಾಯ್ತು, ವೇಣು ಸ್ವಾಮಿ ಸಹ ಬೇರೆ ಬೇರೆ ಟಾಲಿವುಡ್ ನಟ-ನಟಿಯರ ಬಗ್ಗೆ ತಮಗೆ ತೋಚಿದಂತೆ ಭವಿಷ್ಯ ನುಡಿಯಲು ಆರಂಭಿಸಿದರು. ಇದೀಗ ತಮ್ಮ ಭವಿಷ್ಯ ನುಡಿಯಿಂದಲೇ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ವೇಣು ಸ್ವಾಮಿ, ಶೋಭಿತಾ ಹಾಗೂ ನಾಗ ಚೈತನ್ಯ ಬಗ್ಗೆ ಭವಿಷ್ಯ ನುಡಿದಿದ್ದು ಇವರೂ ಸಹ ಆದಷ್ಟು ಬೇಗ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದಿದ್ದರು. ಅಲ್ಲದೆ, ಶೋಭಿತಾರಿಂದ ಅಕ್ಕಿನೇನಿ ಕುಟುಂಬ ಸಮಸ್ಯೆ, ಅವಮಾನ ಎದುರಿಸಲಿದೆ ಎಂಬಿತ್ಯಾದಿ ‘ಭವಿಷ್ಯ’ ನುಡಿದಿದ್ದರು. ಅದು ಭಾರಿ ವಿವಾದ ಎಬ್ಬಿಸಿತ್ತು. ಜ್ಯೋಜಿಷ್ಯ ನುಡಿದ ವೇಣು ಸ್ವಾಮಿ ವಿರುದ್ಧ ದೂರುಗಳು ಸಹ ದಾಖಲಾಗಿದ್ದವು.

ಇದನ್ನೂ ಓದಿ:ಶೋಭಿತಾ-ನಾಗ ಚೈತನ್ಯ ವಿವಾಹಪೂರ್ವ ಶಾಸ್ತಗಳು ಶುರು

ಫಿಲಂ ಜರ್ನಲಿಸ್ಟ್ ಅಸೋಸಿಯೇಷನ್ ಸಹ ವೇಣು ಸ್ವಾಮಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಮಹಿಳಾ ಆಯೋಗವು ವೇಣು ಸ್ವಾಮಿ ವಿಚಾರಣೆಗೆ ಮುಂದಾಗಿತ್ತು, ವೇಣು ಸ್ವಾಮಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅದರ ವಿರುದ್ಧ ವೇಣುಸ್ವಾಮಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ವೇಣು ಸ್ವಾಮಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವೇಣುಸ್ವಾಮಿ ಕೋರಿಕೆಯನ್ನು ತಳ್ಳಿ ಹಾಕಿದ್ದು, ಇನ್ನು ಒಂದು ವಾರದ ಒಳಗಾಗಿ ವೇಣುಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಬೇಕೆಂದು ಆ ಬಳಿಕದ ಪ್ರಕ್ರಿಯೆಯನ್ನು ಮುಂದುವರೆಸಬೇಕೆಂದು ಸೂಚಿಸಿದೆ.

ವೇಣು ಸ್ವಾಮಿ ತೆಲುಗು ಚಿತ್ರರಂಗದ ಸೆಲೆಬ್ರಿಟಿ ಜ್ಯೋತಿಷಿ ಆಗಿದ್ದಾರೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸಹ ಈ ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದ ಬಳಿಕವೇ ಸ್ಟಾರ್ ಆಗಿದ್ದು, ತೆಲುಗು ಚಿತ್ರರಂಗದ ಹಲವು ನಟಿ ಹಾಗೂ ನಟರು ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪ್ರಭಾಸ್, ರಾಮ್ ಚರಣ್, ಜೂ ಎನ್​ಟಿಆರ್ ಹಲವರ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಈ ಹಿಂದೆ ಆಂಧ್ರ ಚುನಾವಣೆ ಸಂದರ್ಭದಲ್ಲಿ ವೈಎಸ್​ಆರ್​ಸಿಪಿ ಪಕ್ಷ ಭಾರಿ ಬಹುಮತ ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು ವೇಣುಸ್ವಾಮಿ ಆದರೆ ವೈಎಸ್​ಆರ್​ಸಿಪಿ ಪಕ್ಷ ಅತ್ಯಂತ ಹೀನಾಯವಾಗಿ ಸೋತಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ