ಏಳು ಸಾವಿರ ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್; ಆಸ್ತಿ ಮೂಲಗಳು ಯಾವವು?

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಆಸ್ತಿಯ ಬಗ್ಗೆ ಈ ಲೇಖನ ತಿಳಿಸುತ್ತದೆ. ಅವರ ಚಲನಚಿತ್ರಗಳು, ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮತ್ತು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳ ಮೂಲಕ ಅವರು ಗಳಿಸಿದ ಸಂಪತ್ತನ್ನು ಗಳಿಸುತ್ತಾರೆ.

ಏಳು ಸಾವಿರ ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್; ಆಸ್ತಿ ಮೂಲಗಳು ಯಾವವು?
ಶಾರುಖ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 02, 2024 | 7:00 AM

ಬಾಲಿವುಡ್​ನ ಸೂಪರ್​ಸ್ಟಾರ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2) ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್​ನ ಸೂಪರ್​ಸ್ಟಾರ್​​ಗಳಲ್ಲಿ ಒಬ್ಬರಾಗಿರೋ ಅವರು ದೇಶದ ಶ್ರೀಮಂತ ನಟ. ವಿಶ್ವ ಮಟ್ಟದಲ್ಲಿ ಅವರು ಮೂರನೇ ಸ್ಥಾನದಲ್ಲಿ ಇದ್ದಾರೆ. ಶಾರುಖ್ ಖಾನ್ ಅವರು ಜೀರೋದಿಂದ ತಮ್ಮ ಜರ್ನಿ ಆರಂಭಿಸಿ ಈಗ ಸಾವಿರಾರು ಕೋಟಿ ರೂಪಾಯಿಯ ಒಡೆಯ ಆಗಿದ್ದಾರೆ ಎಂದರೆ ಅದು ನಿಜಕ್ಕೂ ಸಾಧನೆಯೇ ಸರಿ.

ಶಾರುಖ್ ಖಾನ್ ಅವರು 870 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಅಂದರೆ ಸುಮಾರು 7,300 ಕೋಟಿ ರೂಪಾಯಿ ಅವರ ಆಸ್ತಿ ಇದೆ.  ಶಾರುಖ್ ಖಾನ್ ಬಳಿಕ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಭಾರತದ ಶ್ರೀಮಂತ ಕಲಾವಿದರ ಪಟ್ಟಿಯಲ್ಲಿ ಇದ್ದಾರೆ. ಅವರ ಆಸ್ತಿ 4,600 ಕೋಟಿ ರೂಪಾಯಿ.

ಶಾರುಖ್ ಖಾನ್ ಅವರಿಗೆ 2023ರಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕವು. ಅವರು ಪ್ರತಿ ಸಿನಿಮಾದಿಂದ 150 ಕೋಟಿ ರೂಪಾಯಿಯಿಂದ 250 ಕೋಟಿ ರೂಪಾಯಿ ಸಿಗುತ್ತದೆ. ಕಳೆದ ವರ್ಷ ಅವರ ನಟನೆಯ ‘ಜವಾನ್’, ‘ಪಠಾಣ್’, ‘ಡಂಕಿ’ ಚಿತ್ರಗಳು ಗೆಲುವು ಕಂಡಿವೆ. ಇದು ಅವರ ಆಸ್ತಿಯನ್ನು ಹೆಚ್ಚಿಸಿದೆ.

ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಶಾರುಖ್ ಖಾನ್ ಹೊಂದಿದ್ದಾರೆ. ಅವರ ಆಸ್ತಿ ಹೆಚ್ಚಲು ಇದು ಕೂಡ ಒಂದು ಆದಾಯದ ಮೂಲ. ಶಾರುಖ್ ಖಾನ್ ಅವರು ಹಲವು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಐಪಿಎಲ್​ನಲ್ಲಿ ಶಾರುಖ್ ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಡೆತನ ಹೊಂದಿದ್ದಾರೆ. ಜೂಹಿ ಚಾವ್ಲಾ ಇದರ ಸಹ ಮಾಲಿಕತ್ವ ಪಡೆದಿದ್ದಾರೆ. ಈ ತಂಡ ನೂರಾರು ಕೋಟಿಯ ಮೌಲ್ಯ ಹೊಂದಿದೆ.  ಶಾರುಖ್ ಖಾನ್ ಅವರು ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಾರುಖ್ ಖಾನ್​ಗೆ ವೀಕೆಂಡ್​ನಲ್ಲಿ ಡಬಲ್ ಸೆಲೆಬ್ರೇಷನ್; ಬೆಳಕಿನಿಂದ ಅಲಂಕೃತಗೊಂಡ ಮನ್ನತ್

ಶಾರುಖ್ ಖಾನ್ ಅವರು ‘ಮನ್ನತ್’ ಹೆಸರಿನ ನಿವಾಸ ಹೊಂದಿದ್ದಾರೆ. ಈ ಮನೆ ಮುಂಬೈನ ದೃದಯ ಭಾಗದಲ್ಲಿ ಇದೆ. ಇದು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಶಾರುಖ್ ಖಾನ್ ಅವರು ಅತೀ ಕಷ್ಟದಲ್ಲಿ ಇದ್ದಾಗ ಖರೀದಿ ಮಾಡಿದ ಮನೆ ಇದು. ಈ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದಲ್ಲದೆ, ದುಬೈ, ಲಂಡನ್​ನಲ್ಲಿ ಶಾರುಖ್ ಖಾನ್ ಮನೆ ಹೊಂದಿದ್ದಾರೆ. ಅವರು ರಿಯಲ್​ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ