AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮಂಗಳೂರಿನವಳು’: ಹೇಗಿತ್ತು ನೋಡಿ ಐಶ್ವರ್ಯಾ ಹಳೆಯ ವಿಡಿಯೋ

ಐಶ್ವರ್ಯಾ ರೈ ಬಚ್ಚನ್ ಹುಟ್ಟುಹಬ್ಬ ಇಂದು, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮೂಲತಃ ಕರ್ನಾಟಕದವರು. ಅವರಿಗೆ ಕರ್ನಾಟದೊಂದಿಗೆ ವಿಶೇಷ ನಂಟಿದೆ. ಇದೀಗ ಐಶ್ವರ್ಯಾ ರೈ ಅವರು ಕನ್ನಡ ಮಾತನಾಡಿರುವ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

‘ನಾನು ಮಂಗಳೂರಿನವಳು’: ಹೇಗಿತ್ತು ನೋಡಿ ಐಶ್ವರ್ಯಾ ಹಳೆಯ ವಿಡಿಯೋ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 01, 2024 | 7:29 PM

Share

ಐಶ್ವರ್ಯಾ ರೈ ಅವರು ಮಂಗಳೂರಿನವರು. ಅವರಿಗೆ ಮಂಗಳೂರಿನ ಹಿನ್ನೆಲೆ ಇದೆ. ಆದರೆ, ಅವರು ಬೆಳೆದಿದ್ದು ಮುಂಬೈನಲ್ಲಿ. ಈ ಕಾರಣಕ್ಕೆ ಅವರಿಗೆ ಬಾಲಿವುಡ್ನ ನಂಟು ಬೆಳೆಯಿತು. ಐಶ್ವರ್ಯಾ ರೈ ಅವರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದರು. ಐಶ್ವರ್ಯಾ ರೈ ಅವರ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಇಂದು (ನವೆಂಬರ್ 1) ಐಶ್ವರ್ಯಾಗೆ ಜನ್ಮದಿನ. ಈ ಸಂದರ್ಭದಲ್ಲಿ ಅವರ ವಿಡಿಯೋ ವೈರಲ್ ಮಾಡುತ್ತಿದ್ದಾರೆ.

1994ರಲ್ಲಿ ಐಶ್ವರ್ಯಾ ರೈ ಅವರು ‘ಮಿಸ್ ವರ್ಲ್ಡ್’ ಆದರು. ಆ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಆದರೆ, ಅವರು ಸಿನಿಮಾ ಮಾಡಲು ತರಾತುರಿ ತೋರಲೇ ಇಲ್ಲ. 1997ರಲ್ಲಿ ಮಣಿರತ್ನಂ ನಿರ್ದೇಶನ ‘ಇರುವರ್’ ಹೆಸರಿನ ಸಿನಿಮಾ ಮಾಡಿದರು. ಅಂದರೆ, ಮಿಸ್ ವರ್ಲ್ಡ್ ಆಗಿ ಮೂರು ವರ್ಷಗಳ ಬಳಿಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಮಣಿರತ್ನಂ ಸಿನಿಮಾಗಳಲ್ಲಿ ನಟಿಯರ ಪಾತ್ರಕ್ಕೆ ಹೆಚ್ಚು ಆದ್ಯತೆ ಇರುತ್ತದೆ. ಅದೇ ರೀತಿ ‘ಇರುವರ್’ ಚಿತ್ರದಲ್ಲಿ ಐಶ್ವರ್ಯಾ ಮಿಂಚಿದ್ದರು.

ಈಗ ಐಶ್ವರ್ಯಾ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು, ‘ನಾನು ಮಂಗಳೂರಿನಳು, ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಶಾಲಾ-ಕಾಲೇಜು ಓದಿದ್ದು ಮುಂಬೈನಲ್ಲಿ. ಸಣ್ಣ ವಯಸ್ಸಿನಲ್ಲಿ ನನ್ನ ಕಣ್ಣಿನ ಬಣ್ಣದ ಕಾರಣಕ್ಕೆ, ಕೂದಲಿನ ಬಣ್ಣಕ್ಕೆ ಚಿಕ್ಕ ವಯಸ್ಸಿನಲ್ಲಿ ಅಟೆನ್ಷನ್ ಸಿಗುತ್ತಿತ್ತು’ ಎಂದು ಹೇಳಿರುವುದು ಇದೆ. ಅವರ ಅಭಿಮಾನಿಗಳು ಈ ವಿಡಿಯೋನ ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೆ?

ಐಶ್ವರ್ಯಾ ರೈ ಅವರು ಚಿತ್ರರಂಗದಲ್ಲಿ ವರ್ಷ ಕಳೆದಂತೆ ಸಖತ್ ಗ್ಲಾಮರಸ್ ಆಗುತ್ತಾ ಬಂದರು. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಐಶ್ವರ್ಯಾ ರೈ ಅವರು ಬೇರೆ ರೀತಿಯಲ್ಲೇ ಕಾಣಿಸುತ್ತಿದ್ದರು. ಈಗ ಅವರು ದಪ್ಪ ಆಗಿದ್ದಾರೆ. ಅವರಿಗೆ ಅನಾರೋಗ್ಯ ಇದ್ದು ಹೀಗಾಗಿ, ಅವರು ಇಷ್ಟು ದಪ್ಪ ಆಗಿದ್ದಾರೆ ಎನ್ನಲಾಗಿದೆ.

ಐಶ್ವರ್ಯಾ ರೈ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಜನಪ್ರಿಯತೆ ಇದೆ. ಪತಿ ಅಭಿಷೇಕ್ ಬಚ್ಚನ್ ಅವರ ಜೊತೆಗಿನ ವಿಚ್ಛೇದನದ ಕಾರಣಕ್ಕೆ ಅವರು ಸುದ್ದಿಯಲ್ಲಿ ಇದ್ದಾರೆ. ಇಬ್ಬರೂ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ