ಬೆಂಗಳೂರು, ಏಪ್ರಿಲ್ 04: ಮಗುವನ್ನು ಕಾನೂನುಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಈ ಕುರಿತಾಗಿ ಆದೇಶ ಹೊರಡಿಸಿದೆ. ಇಂದು ಅಥವಾ ನಾಳೆ ಜೈಲಿನಿಂದ ಸೋನು ಶ್ರೀನಿವಾಸ್ ಗೌಡ ಬಿಡುಗಡೆ ಸಾಧ್ಯತೆ ಇದೆ. ಕಾನೂನು ಬಾಹಿರ ಮಗು ದತ್ತು ಕೇಸ್ನಲ್ಲಿ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT) ಸೀಸನ್ ಸ್ಪರ್ಧಿ ಸೋನು ಗೌಡ ಇತ್ತೀಚೆಗೆ ಜೈಲು ಸೇರಿದ್ದರು.
4 ದಿನದ ಪೊಲೀಸ್ ಕಸ್ಟಡಿ ಬಳಿಕ ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಬಡ ಬಾಲಕಿಗೆ ಬದುಕು ಕೊಡುತ್ತೇನೆ ಅಂತ ಕಾನೂನು ಮೀರಿ ಹೆಜ್ಜೆ ಹಾಕಿದ ತಪ್ಪಿಗೆ, ಜೈಲು ಪಾಲಾಗಿದ್ದರು. ಏಪ್ರಿಲ್ 8ರ ತನಕ ಸೋನುಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಸೋನುಗೌಡ ಪರ ವಕೀಲರು ಜಾಮೀನು ಕೋರಿ ಕೋರ್ಟ್ ಮೊರೆ ಹೋದ ಹಿನ್ನೆಲೆ ಇಂದು ಜಾಮೀನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಮಗು ದತ್ತು ಪಡೆದ ಬಗ್ಗೆ ಸೋನು ರೀಲ್ಸ್ ಮಾಡ್ತಿದ್ದಂತೆ ಮಕ್ಕಳ ರಕ್ಷಣಾ ಸಮಿತಿ ಎಚ್ಚೆತ್ತುಗೊಂಡಿದ್ದು, ದತ್ತು ಪ್ರಕ್ರಿಯೇ ಹೇಗೆ ನಡೆದಿದೆ ಅನ್ನೋ ಮಾಹಿತಿ ಕಲೆಹಾಕಿತ್ತು. ಆಗಲೇ ಸೋನು ಅಸಲಿಯತ್ತು ಬಯಲಾಗಿತ್ತು. ಅಕ್ರಮವಾಗಿ ಮಗುವನ್ನ ದತ್ತು ಪಡೆದಿರೋದು ಗೊತ್ತಾಗಿತ್ತು. ಈ ಸಂಬಂಧ ಕೇಸ್ ದಾಖಲಾಗ್ತಿದ್ದಂತೆ ಸೋನು ಅರೆಸ್ಟ್ ಮಾಡಲಾಗಿತ್ತು.
ಸೋನು ವಶಕ್ಕೆ ಪಡೆದಿದ್ದ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರಿಗೆ ಅಂತಾ ರಾಯಚೂರು ಜಿಲ್ಲೆ ಕಾಚಾಪುರಕ್ಕೆ ಕರೆದೊಯ್ದಿದ್ರು. ಕಾಚಾಪುರದ ಬಾಲಕಿಯನ್ನೇ ದತ್ತು ಪಡೆದ ಕಾರಣಕ್ಕೆ ಅವರ ಸಂಬಂಧಿಕರ ವಿಚಾರಣೆ ಮಾಡಿದ್ದರು. ಆದರೆ ಬಾಲಕಿ ಸಂಬಂಧಿಕರು ಮಾತ್ರ, ನಾವು ದತ್ತು ಕೊಟ್ಟಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ‘ಸ್ವಯಂಭು’ ಸಿನಿಮಾ ಮೂಲಕ ನಭಾ ನಟೇಶ್ ಕಂಬ್ಯಾಕ್; ಯುವರಾಣಿ ಗೆಟಪ್
ಕಾಚಾಪುರದ ಬಡ ದಂಪತಿ ದುಡಿಯಲು ಅಂತಾ ಬೆಂಗಳೂರಿಗೆ ಹೋಗಿದ್ದು, ಅಲ್ಲೇ ಮಗು ಪೋಷಕರನ್ನ ಸೋನು ಪರಿಚಯ ಮಾಡಿಕೊಂಡಿದ್ದರು. ಮಗುವನ್ನ ಅಕ್ರಮವಾಗಿ ದತ್ತು ಪಡೆದಿರೋದು ಗೊತ್ತಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಮಗುವಿನ ಪೋಷಕರು ಮಾತ್ರ ಉಲ್ಟಾ ಹೊಡೆದಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:34 pm, Thu, 4 April 24