‘ಸ್ವಯಂಭು’ ಸಿನಿಮಾ ಮೂಲಕ ನಭಾ ನಟೇಶ್ ಕಂಬ್ಯಾಕ್; ಯುವರಾಣಿ ಗೆಟಪ್

‘ಸ್ವಯಂಭು’ ಚಿತ್ರದ ಶೂಟಿಂಗ್​ನಲ್ಲಿ ನಭಾ ಭಾಗಿ ಆಗುತ್ತಿದ್ದಾರೆ. ಅವರ ಪಾತ್ರದ ಸಣ್ಣ ಝಲಕ್​ನ ಸಿನಿ ಪ್ರೇಮಿಗಳಿಗೆ ಪರಿಚಯಿಸಲಾಗಿದೆ. ನಭಾ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಸದ್ಯ ಇದಿಷ್ಟೇ ಮಾಹಿತಿ ಇದ್ದು, ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

‘ಸ್ವಯಂಭು’ ಸಿನಿಮಾ ಮೂಲಕ ನಭಾ ನಟೇಶ್ ಕಂಬ್ಯಾಕ್; ಯುವರಾಣಿ ಗೆಟಪ್
ನಭಾ
Follow us
ರಾಜೇಶ್ ದುಗ್ಗುಮನೆ
|

Updated on: Apr 04, 2024 | 2:00 PM

ನಟಿ ನಭಾ ನಟೇಶ್ (Nabha Natesh) ಅವರು ನಟನೆಯಿಂದ ಒಂದು ಬ್ರೇಕ್ ಪಡೆದಿದ್ದರು. ಅಪಘಾತಕ್ಕೆ ಒಳಗಾಗಿದ್ದರಿಂದ ಅವರು ಬ್ರೇಕ್ ಪಡೆಯಲೇಬೇಕಾದ ಅನಿವಾರ್ಯತೆ ಇತ್ತು. ಇತ್ತೀಚೆಗೆ ಅವರು ಕಂಬ್ಯಾಕ್ ಮಾಡುವ ಬಗ್ಗೆ ಸುದ್ದಿ ಆಗಿತ್ತು. ಈಗ ಚಿತ್ರತಂಡದ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ತೆಲುಗು ನಟ ನಿಖಿಲ್ ಸಿದ್ದಾರ್ಥ್ ಅಭಿನಯದ ‘ಸ್ವಯಂಭು’ ಸಿನಿಮಾದಲ್ಲಿ ನಭಾ ನಟಿಸುತ್ತಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

2019ರ ‘ಇಸ್ಮಾರ್ಟ್ ಶಂಕರ್’ ಮೂಲಕ ನಭಾ ನಟೇಶ್ ದೊಡ್ಡ ಗೆಲುವು ಕಂಡರು. 2020-21ರಲ್ಲಿ ಕೊವಿಡ್ ಹಾವಳಿ ಜೋರಿತ್ತು. ಹೀಗಾಗಿ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಎಲ್ಲವೂ ಸರಿ ಆಯಿತು ಎನ್ನುವಾಗಲೇ 2022ರಲ್ಲಿ ಅವರಿಗೆ ರಸ್ತೆ ಅಪಘಾತ ಆಯಿತು. ಈ ವೇಳೆ ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಸಂಪೂರ್ಣ ಚೇತರಿಕೆ ಕಂಡಿರುವ ನಭಾ ನಟೇಶ್ ಅವರು ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.

‘ಸ್ವಯಂಭು’ ಚಿತ್ರದ ಶೂಟಿಂಗ್​ನಲ್ಲಿ ನಭಾ ಭಾಗಿ ಆಗುತ್ತಿದ್ದಾರೆ. ಅವರ ಪಾತ್ರದ ಸಣ್ಣ ಝಲಕ್​ನ ಸಿನಿ ಪ್ರೇಮಿಗಳಿಗೆ ಪರಿಚಯಿಸಲಾಗಿದೆ. ನಭಾ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಸದ್ಯ ಇದಿಷ್ಟೇ ಮಾಹಿತಿ ಇದ್ದು, ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶಿವಣ್ಣ ನಟನೆಯ ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ನಂತರ ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಗಳಿಸಿದರು.

ಇದನ್ನೂ ಓದಿ: ಅಪಘಾತದ ಬಳಿಕ ಕಂಬ್ಯಾಕ್ ಮಾಡೋಕೆ ನಭಾ ನಟೇಶ್ ರೆಡಿ; ಸಿಕ್ಕಿದೆ ಎರಡು ಆಫರ್

ನಿಖಿಲ್ ನಟನೆಯ ‘ಸ್ವಯಂಭು’ ಚಿತ್ರದಲ್ಲಿ ಸಂಯುಕ್ತ ಮೆನನ್ ಕೂಡ ನಟಿಸುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ತಯಾರಿಯಲ್ಲಿದ್ದಾರೆ. ಭರತ್ ಕೃಷ್ಣಮಾಚಾರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಭುವನ್ ಹಾಗೂ ಶ್ರೀಕರ್ ‘ಪಿಕ್ಸೆಲ್ ಸ್ಟುಡಿಯೋ’ ಮೂಲಕ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‘ಸ್ವಯಂಭೂ’ ಎಂದರೆ ಸ್ವಯಂ ಹುಟ್ಟು ಎಂಬ ಅರ್ಥ ಇದೆ. ಬಿಗ್ ಬಜೆಟ್​ನಲ್ಲಿ ಸಿನಿಮಾ ರೆಡಿ ಆಗುತ್ತಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ಸಂಯೋಜನೆ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್