Godfather: ಹೇಗಿದೆ ‘ಗಾಡ್​ ಫಾದರ್​’ ಚಿತ್ರ? ಟ್ವಿಟರ್​ ವಿಮರ್ಶೆ ಮೂಲಕ ಅಭಿಪ್ರಾಯ ತಿಳಿಸಿದ ‘ಮೆಗಾಸ್ಟಾರ್​’ ಫ್ಯಾನ್ಸ್​

Godfather Twitter Review: ‘ಚಿರಂಜೀವಿ ಮತ್ತೆ ಫಾರ್ಮ್​ಗೆ ಬಂದಿದ್ದಾರೆ. ನಯನತಾರಾ ಹಾಗೂ ಸಲ್ಮಾನ್​ ಖಾನ್​ ನಟನೆ ಕೂಡ ಸೂಪರ್​ ಆಗಿದೆ’ ಎಂದು ‘ಗಾಡ್​ ಫಾದರ್​’ ನೋಡಿದ ಪ್ರೇಕ್ಷಕರು​ ಹೊಗಳುತ್ತಿದ್ದಾರೆ.

Godfather: ಹೇಗಿದೆ ‘ಗಾಡ್​ ಫಾದರ್​’ ಚಿತ್ರ? ಟ್ವಿಟರ್​ ವಿಮರ್ಶೆ ಮೂಲಕ ಅಭಿಪ್ರಾಯ ತಿಳಿಸಿದ ‘ಮೆಗಾಸ್ಟಾರ್​’ ಫ್ಯಾನ್ಸ್​
ಮೆಗಾ ಸ್ಟಾರ್ ಚಿರಂಜೀವಿ
Edited By:

Updated on: Oct 05, 2022 | 10:06 AM

‘ಮೆಗಾಸ್ಟಾರ್​’ ಚಿರಂಜೀವಿ (Mega Star Chiranjeevi) ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಚಿರು ನಟನೆಯ ‘ಗಾಡ್​ ಫಾದರ್​’ ಸಿನಿಮಾ ಇಂದು (ಅ.5) ಬಿಡುಗಡೆ ಆಗಿದೆ. 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದ ಈ ಸಿನಿಮಾ ವಿಶ್ವಾದ್ಯಂತ ತೆರೆಕಂಡಿದೆ. ಮೊದಲ ದಿನ ಮೊದಲ ಶೋ ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್ (Salman Khan)​ ಕೂಡ ನಟಿಸಿರುವುದು ವಿಶೇಷ. ಹಾಗಾಗಿ ಹಿಂದಿಗೂ ಡಬ್​ ಆಗಿ ಈ ಸಿನಿಮಾ ತೆರೆಕಂಡಿದೆ. ದಕ್ಷಿಣ ಭಾರತದ ಜೊತೆಗೆ ಉತ್ತರ ಭಾರತದ ಸಿನಿಪ್ರಿಯರ ವಲಯದಲ್ಲೂ ಈ ಸಿನಿಮಾ ಧೂಳೆಬ್ಬಿಸುತ್ತಿದೆ. ಅಭಿಮಾನಿಗಳು ಟ್ವಿಟರ್​ ಮೂಲಕ ‘ಗಾಡ್​ ಫಾದರ್​’ ಚಿತ್ರದ ವಿಮರ್ಶೆ (Godfather Twitter Review) ತಿಳಿಸುತ್ತಿದ್ದಾರೆ. ಈ ಸಿನಿಮಾ ಸೂಪರ್​ ಹಿಟ್​ ಆಗುವುದು ಖಚಿತ ಎಂಬ ಅನಿಸಿಕೆ ಬಹುತೇಕರಿಂದ ವ್ಯಕ್ತವಾಗುತ್ತಿದೆ.

ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಈ ವರ್ಷ ಏಪ್ರಿಲ್​ ತಿಂಗಳಲ್ಲಿ ಬಿಡುಗಡೆ ಆಗಿ ಹೀನಾಯವಾಗಿ ಸೋಲುಂಡಿತ್ತು. ಹಾಗಾಗಿ ಚಿರುಗೆ ತುರ್ತಾಗಿ ಒಂದು ಗೆಲುವು ಬೇಕಿತ್ತು. ‘ಗಾಡ್​ ಫಾದರ್​’ ಸಿನಿಮಾದಿಂದ ಅವರಿಗೆ ಭಾರಿ ಯಶಸ್ಸು ಸಿಗುವ ಸೂಚನೆ ಮೊದಲ ದಿನವೇ ಕಾಣಿಸಿದೆ. ಈ ಚಿತ್ರಕ್ಕೆ ಮೋಹನ್​ ರಾಜ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ
Megastar Chiranjeevi: ‘ಮೆಗಾ ಸ್ಟಾರ್​’ ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಗಾಡ್​ ಫಾದರ್​’ ಟೀಸರ್​; ಕೆಲವೇ ಗಂಟೆಗಳಲ್ಲಿ ಆದ ವೀಕ್ಷಣೆ ಎಷ್ಟು?
Chiranjeevi: ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾಯಿಸಿಕೊಂಡ ‘ಮೆಗಾ ಸ್ಟಾರ್​’ ಚಿರಂಜೀವಿ; ಇದೆಲ್ಲಾ ವರ್ಕ್​ ಆಗತ್ತಾ?
ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್​ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್​
ಚಿರಂಜೀವಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್​ ಹೇಳಿದ ಮೆಗಾಸ್ಟಾರ್​

ಅಂದಹಾಗೆ, ಇದು ಮಲಯಾಳಂನ ‘ಲೂಸಿಫರ್​’ ಚಿತ್ರದ ತೆಲುಗು ರಿಮೇಕ್​. ಮೂಲ ಸಿನಿಮಾದಲ್ಲಿ ಮೋಹನ್​ ಲಾಲ್​ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಮಾಡಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​ ಮಾಡಿದ್ದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್​ ಖಾನ್​ ನಿಭಾಯಿಸಿದ್ದಾರೆ. ಸಲ್ಲು ಮತ್ತು ಜಿರಂಜೀವಿ ಅವರ ಜುಗಲ್​ಬಂದಿ ನೋಡಲು ಚಿತ್ರಮಂದಿರಕ್ಕೆ ಫ್ಯಾನ್ಸ್​ ಮುಗಿಬಿದ್ದಿದ್ದಾರೆ.

‘ಗಾಡ್​ ಫಾದರ್​’ ಚಿತ್ರದ ಪ್ರೀ-ಕ್ಲೈಮ್ಯಾಕ್ಸ್​ ತುಂಬ ಚೆನ್ನಾಗಿದೆ. ಚಿರಂಜೀವಿ ಮತ್ತೆ ಫಾರ್ಮ್​ಗೆ ಬಂದಿದ್ದಾರೆ. ನಯನತಾರಾ ಮತ್ತು ಸಲ್ಮಾನ್​ ಖಾನ್​ ನಟನೆ ಕೂಡ ಸೂಪರ್​ ಆಗಿದೆ. ಫೈಟಿಂಗ್​ ದೃಶ್ಯಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ ಎಂದು ಫ್ಯಾನ್ಸ್​ ಹೊಗಳುತ್ತಿದ್ದಾರೆ.

ಟಾಲಿವುಡ್​ನಲ್ಲಿ ಬಾಕ್ಸ್ ಆಫೀಸ್​ ಕ್ಲ್ಯಾಶ್​ ಏರ್ಪಟ್ಟಿದೆ. ಇಂದು (ಅ.5) ಚಿರಂಜೀವಿ ನಟನೆಯ ‘ಗಾಡ್​ ಫಾದರ್​’ ಸಿನಿಮಾದ ಜೊತೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಅಭಿನಯದ ‘ದಿ ಘೋಸ್ಟ್’ ಚಿತ್ರ ಬಿಡುಗಡೆ ಆಗಿದೆ. ಇಬ್ಬರು ಸ್ಟಾರ್​ ನಟರ ಸಿನಿಮಾಗಳು ಮುಖಾಮುಖಿ ಆಗಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಯಾವ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:06 am, Wed, 5 October 22