‘ತಾಂಗಾಲನ್’ ಬಿಡುಗಡೆ ದಿನಾಂಕ ಘೋಷಣೆ, ಇದು ತಮಿಳರು ಹೇಳುತ್ತಿರುವ ಕೆಜಿಎಫ್ ಕತೆ

|

Updated on: Jul 20, 2024 | 11:16 PM

ನಾನು ನಿಜವಾದ ‘ಕೆಜಿಎಫ್’ ಕತೆ ಹೇಳುವೆ ಎಂದು ಸವಾಲು ಹಾಕಿದ್ದ ತಮಿಳು ನಿರ್ದೇಶಕ ಪಾ ರಂಜಿತ್​ರ ‘ತಾಂಗಾಲನ್ ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಸಿನಿಮಾ ಈಗಿನ ಕೆಜಿಎಫ್ ಇರುವ ಪ್ರದೇಶದಲ್ಲಿ ನಡೆವ ಕತೆ ಎನ್ನಲಾಗುತ್ತಿದೆ. ಸಿನಿಮಾದ ಟ್ರೈಲರ್, ಟೀಸರ್ ಕುತೂಹಲ ಮೂಡಿಸುತ್ತಿದೆ.

‘ತಾಂಗಾಲನ್’ ಬಿಡುಗಡೆ ದಿನಾಂಕ ಘೋಷಣೆ, ಇದು ತಮಿಳರು ಹೇಳುತ್ತಿರುವ ಕೆಜಿಎಫ್ ಕತೆ
ತಾಂಗಾಲನ್
Follow us on

‘ಕೆಜಿಎಫ್’ ಸಿನಿಮಾ ಯಾರಿಗೆ ಗೊತ್ತಿಲ್ಲ. ಪ್ಯಾನ್ ಇಂಡಿಯಾ ಅನ್ನೇ ಶೇಕ್ ಮಾಡಿದ್ದ ಕನ್ನಡ ಸಿನಿಮಾ ಸರಣಿ ‘ಕೆಜಿಎಫ್’ ಕನ್ನಡ ಸಿನಿಮಾ ಒಂದು ಇಷ್ಟು ದೊಡ್ಡ ಕಲೆಕ್ಷನ್ ಮಾಡಲಿದೆ ಎಂದು ಊಹೆ ಮಾಡದ ಮಟ್ಟದಲ್ಲಿ ಕೆಲಕ್ಷನ್ ಮಾಡಿ ಎಲ್ಲ ದಾಖಲೆಗಳನ್ನು ಪುಡಿಗಟ್ಟಿತು. ಸಿನಿಮಾದ ಹೆಸರಿನಿಂದ ಹಿಡಿದು ಹಲವು ಪವರ್​ಫುಲ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿತ್ತು. ಅಂದಹಾಗೆ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆದ ಕೆಲ ತಿಂಗಳಲ್ಲಿಯೇ ತಮಿಳಿನ ಜನಪ್ರಿಯ ನಿರ್ದೇಶಕರೊಬ್ಬರು, ತಾವು ನಿಜವಾದ ‘ಕೆಜಿಎಫ್’ ತೋರಿಸುವುದಾಗಿ ಹೇಳಿದ್ದರು. ಅಂತೆಯೇ ಅವರು ಕಷ್ಟಪಟ್ಟು ಸಿನಿಮಾ ಮಾಡಿದ್ದು ಸಿನಿಮಾ ದಿನಾಂಕ ಘೋಷಣೆ ಮಾಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ, ತಮ್ಮದೇ ಆದ ಸಿನಿಮಾ ಕಟ್ಟುವ ಶೈಲಿ ಹೊಂದಿರುವ ನಿರ್ದೇಶಕ ಪಾ ರಂಜಿತ್, ‘ತಾಂಗಾಲನ್’ ಸಿನಿಮಾ ನಿರ್ದೇಶನ ಮಾಡಿದ್ದು ಪ್ರತಿಭಾವಂತ ನಟ ಚಿಯಾನ್ ವಿಕ್ರಂ, ‘ತಾಂಗಾಲನ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನಿಜವಾದ ‘ಕೆಜಿಎಫ್’ ಕತೆ ಆಗಿದೆ ಎಂಬುದು ಚಿತ್ರತಂಡದ ವಾದ. ಸಿನಿಮಾದ ಟ್ರೈಲರ್ ನೋಡಿದರೆ, ಸಿನಿಮಾ ಬ್ರಿಟೀಷರ ಕಾಲದಲ್ಲಿ ನಡೆಯುವ ಕತೆ ಒಳಗೊಂಡಿರುವುದು ಸ್ಪಷ್ಟವಾಗುತ್ತದೆ.

ಅಸಲಿಗೆ ಸಿನಿಮಾದ ಕತೆ ನಡೆಯುವುದು ಕರ್ನಾಟಕದ ಕೆಜಿಎಫ್ ಈಗ ಸ್ಥಿತವಾಗಿರುವ ಪ್ರದೇಶದಲ್ಲಿಯೇ ನಿರ್ದೇಶಕರ ಪ್ರಕಾರ, ಬ್ರಿಟೀಷರು ಇಲ್ಲಿನ ಚಿನ್ನದ ಆಸೆಗೆ ಸ್ಥಳೀಯರ ಮೇಲೆ ನಡೆಸಿದ ದೌರ್ಜನ್ಯ, ಚಿನ್ನದ ಆಸೆಗೆ ನಡೆದ ಹೋರಾಟಗಳು, ಜನಾಂಗಗಳ ಒಳಗೆ ನಡೆದ ರಾಜಕೀಯಗಳು, ಪರಸ್ಪರರ ಮೇಲಿನ ಅಪನಂಬಿಕೆ ಇನ್ನಿತರೆಗಳನ್ನು ‘ತಾಂಗಾಲನ್’ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸುವಂತಿದೆ.

ಇದನ್ನೂ ಓದಿ: ತಾಂಗಾಲನ್ ಟೀಸರ್ ಬಿಡುಗಡೆ: ಇದು ಕೆಜಿಎಫ್ ಕತೆ ಆದರೆ ರಾಕಿಭಾಯ್​ ರೀತಿಯದ್ದಲ್ಲ

ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿಯಾನ್ ವಿಕ್ರಂ ಅಂತೂ ಗುರುತೇ ಸಿಕ್ಕದ ರೀತಿಯಲ್ಲಿ ತಮ್ಮ ವೇಷ, ಮುಖಚಹರೆಯನ್ನು ಈ ಸಿನಿಮಾಕ್ಕಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾರ್ವತಿ ಮೆನನ್, ಮಾಳವಿಕಾ ಮೋಹನನ್, ಪಶುಪತಿ ಕೆಲವು ವಿದೇಶಿ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಜ್ಞಾನವೇಲು ರಾಜ, ಪಾ ರಂಜಿತ್, ಜ್ಯೋತಿ ದೇಶಪಾಂಡೆ ಅವರುಗಳು ಒಟ್ಟಾಗಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಅಂದಹಾಗೆ ಈ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾ ಡಿಸೆಂಬರ್ 06 ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ