ಸರ್ಕಾರದಿಂದ ಹೊಸ ಸಿನಿಮಾ ಮಸೂದೆ, ಹೆಚ್ಚಾಗಲಿದೆ ಸಿನಿಮಾ ಟಿಕೆಟ್ ಬೆಲೆ

ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಮಂಡಿಸಿದೆ, ಮಸೂದೆ ಅನುಮೋದನೆಗೊಂಡರೆ ರಾಜ್ಯದಲ್ಲಿ ಸಿನಿಮಾ ಟಿಕೆಟ್ ಬೆಲೆ 2% ಹೆಚ್ಚಾಗಲಿದೆ ಜೊತೆಗೆ ಒಟಿಟಿ ಸಬ್​ಕ್ಷಿಪ್ಷನ್ ಬೆಲೆ ಸಹ ಹೆಚ್ಚಾಗಲಿದೆ.

ಸರ್ಕಾರದಿಂದ ಹೊಸ ಸಿನಿಮಾ ಮಸೂದೆ, ಹೆಚ್ಚಾಗಲಿದೆ ಸಿನಿಮಾ ಟಿಕೆಟ್ ಬೆಲೆ
Follow us
|

Updated on:Jul 20, 2024 | 9:39 PM

ಕರ್ನಾಟಕ ರಾಜ್ಯ ವಿಧಾನಸಭೆಯ ಅಧಿವೇಶನ ಚಾಲ್ತಿಯಲ್ಲಿದೆ. ಹಲವು ಮಸೂದೆಗಳು ಮಂಡನೆಯಾಗುತ್ತಿವೆ. ಮಸೂದೆಗಳ ಕುರಿತಾಗಿ ಚರ್ಚೆಗಳು ಸಹ ನಡೆಯುತ್ತಿವೆ. ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಮಂಡಿಸಿದೆ. ಆದರೆ ಈ ಮಸೂದೆ ಬಗ್ಗೆ ಬಿಜೆಪಿಯು ಆಕ್ಷೇಪಣೆ ಎತ್ತಿದ್ದು, ಟಿಕೆಟ್ ಹಾಗೂ ಒಟಿಟಿ ದರಗಳನ್ನು ಹೆಚ್ಚಿಸಿ, ಮನೊರಂಜನೆಯನ್ನು ಪ್ರೇಕ್ಷಕರ ಪಾಲಿಗೆ ದುಬಾರಿ ಮಾಡುವ ಕಾರಣದಿಂದ ಈ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿದೆ ಎಂದು ಆರೋಪಿಸಿದೆ.

ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪತೆರಿಗೆ ಅಥವಾ ಉಪಕರವನ್ನು ಸಿನಿಮಾ ಟಿಕೆಟ್, ವಂತಿಗೆಗಳ ಮೇಲೆ ಹೇರತಕ್ಕದ್ದು ಎಂದು ರಾಜ್ಯ ಸರ್ಕಾರವು ಮಸೂದೆಯಲ್ಲಿ ಉಲ್ಲೇಖಿಸಿದೆ. ಈ ತೆರಿಗೆಯು ಶೇ 2 ರಷ್ಟನ್ನು ದಾಟುವಂತಿಲ್ಲ ಆದರೆ ಶೇಕಡಾ ಒಂದಕ್ಕಿಂತಾ ಕಡಿಮೆಯೂ ಇರುವಂತಿರುವಂತಿಲ್ಲ ಎಂದು ಹೇಳಿದೆ. ಈ ಮಸೂದೆಯು ಅನುಮೋದನೆಯಾದರೆ ಸಿನಿಮಾ ಟಿಕೆಟ್ ಬೆಲೆ ಹಾಗೂ ಒಟಿಟಿ ಸಬ್​ಸ್ಕ್ರಿಪ್ಷನ್ ಬೆಲೆಗಳು ಸಹ ಏರಿಕೆ ಆಗಲಿವೆ. ಈ ಶುಲ್ಕವನ್ನು ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಬಳಸಿಕೊಳ್ಳಲಾಗುತ್ತದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ವಿನೋದ್ ದೋಂಡಾಳೆ ನಿಧನ: ನಿರ್ದೇಶಕನ ಕೊಂದಿತೇ ಸಿನಿಮಾ?

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಟೀಕಿಸಿ ಟ್ವೀಟ್ ಒಂದನ್ನು ಮಾಡಿರುವ ಕರ್ನಾಟಕ ಬಿಜೆಪಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಸಿ.ಎಂ ಸೀಟನ್ನು ಉಳಿಸಿಕೊಳ್ಳಲು ನಾಡಿನ ಸಿನಿ ಪ್ರಿಯರ ಬೆನ್ನಿಗೂ ತೆರಿಗೆ ಬರೆ ಎಳೆಯಲು ಮುಂದಾಗಿದ್ದಾರೆ. ಕನ್ನಡ ಚಿತ್ರರಂಗ ಸಂಕಷ್ಟಗಳಿಂದ ಬಳಲುತ್ತಿದ್ದರೂ, ಅವುಗಳಿಗೆ ಕಿವಿಗೊಡದ ಮುಖ್ಯಮಂತ್ರಿಗಳು, ಸಿನಿಮಾ ಟಿಕೆಟ್, ಒಟಿಟಿಗಳ ಚಂದಾದಾರಿಕೆಯ ಮೇಲೆ ಶೇ.2ರಷ್ಟು ತೆರಿಗೆಯನ್ನು ವಿಧಿಸಿ ಹಣ ದೋಚಲು ವಿಧಾನಸಭೆಯಲ್ಲಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಹೋರಾಟಗಾರರ (ಕ್ಷೇಮಾಭಿವೃದ್ಧಿ) ಮಸೂದೆ-2024 ಅನ್ನು ಅನುಮೋದನೆಗೆ ಇಟ್ಟಿದ್ದಾರೆ. ಈಗಾಗಲೇ ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ರಣಹೇಡಿ ಕರ್ನಾಟಕ ಸರ್ಕಾರ ಈಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದಿದೆ ಬಿಜೆಪಿ.

ನೆರೆಯ ಆಂಧ್ರ, ತಮಿಳುನಾಡುಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆ ಈಗಾಗಲೇ ಹೆಚ್ಚಿದೆ. ನೆರೆಯ ರಾಜ್ಯಗಳಲ್ಲಿ ಇರುವಂತೆ ಸಿನಿಮಾ ಟಿಕೆಟ್ ಬೆಲೆಗಳ ಮೇಲೆ ನಿಯಂತ್ರಣವೂ ಸಹ ರಾಜ್ಯದಲ್ಲಿಲ್ಲ. ಚಿತ್ರಮಂದಿರಗಳು ಕೆಲ ಸಿನಿಮಾಗಳಿಗೆ ತನ್ನಿಷ್ಟ ಬಂದಷ್ಟು ಟಿಕೆಟ್ ಬೆಲೆಯನ್ನು ನಿಗದಿಪಡಿಸುವ ಪದ್ಧತಿಯೂ ರಾಜ್ಯದಲ್ಲಿದೆ. ಹೆಚ್ಚಾಗಿರುವ ಟಿಕೆಟ್ ಬೆಲೆಗಳಿಂದಾಗಿ ಈಗಾಗಲೇ ಕನ್ನಡ ಸಿನಿಮಾಗಳಗೆ ಜನ ಬರುತ್ತಿಲ್ಲ ಎಂಬ ಆರೋಪವಿದೆ. ಇದರ ಬೆನ್ನಲ್ಲೆ ಈಗ ರಾಜ್ಯ ಸರ್ಕಾರ 2 % ಉಪತೆರಿಗೆ ಹೇರಲು ಮುಂದಾಗಿದೆ. ಇದನ್ನು ಕನ್ನಡ ಚಿತ್ರರಂಗ ಹೇಗೆ ಸ್ವೀಕರಿಸುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Sat, 20 July 24

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು