AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಾಂಗಾಲನ್’ ಟೀಸರ್ ಬಿಡುಗಡೆ: ಇದು ‘ಕೆಜಿಎಫ್’ ಕತೆ ಆದರೆ ರಾಕಿಭಾಯ್​ ರೀತಿಯದ್ದಲ್ಲ

Thangaalan: 'ಕೆಜಿಎಫ್' ಎಂದ ಕೂಡಲೇ ರಾಕಿಭಾಯ್, ಅಧೀರ, ಗರುಡ ಅವರುಗಳೇ ನೆನಪಾಗುತ್ತಾರೆ. ಚಿನ್ನದ ಸಾಮ್ರಾಜ್ಯವನ್ನು ಹತೋಟಿಗೆ ತೆಗೆದುಕೊಳ್ಳಲು ಅವರು ನಡೆಸಿದ ಜಿದ್ದಾ-ಜಿದ್ದಿನ ಕಾದಾಟ. ಇದೀಗ 'ಕೆಜಿಎಫ್' ನೆಲದ ಕತೆಯನ್ನು ಒಳಗೊಂಡ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದರ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ.

'ತಾಂಗಾಲನ್' ಟೀಸರ್ ಬಿಡುಗಡೆ: ಇದು 'ಕೆಜಿಎಫ್' ಕತೆ ಆದರೆ ರಾಕಿಭಾಯ್​ ರೀತಿಯದ್ದಲ್ಲ
Follow us
ಮಂಜುನಾಥ ಸಿ.
|

Updated on: Nov 01, 2023 | 6:18 PM

ಕೆಜಿಎಫ್‘ (KGF) ಎಂದ ಕೂಡಲೇ ರಾಕಿಭಾಯ್, ಅಧೀರ (Adhira), ಗರುಡ ಅವರುಗಳೇ ನೆನಪಾಗುತ್ತಾರೆ. ಚಿನ್ನದ ಸಾಮ್ರಾಜ್ಯವನ್ನು ಹತೋಟಿಗೆ ತೆಗೆದುಕೊಳ್ಳಲು ಅವರು ನಡೆಸಿದ ಜಿದ್ದಾ-ಜಿದ್ದಿನ ಕಾದಾಟ. ಇದೀಗ ‘ಕೆಜಿಎಫ್’ ನೆಲದ ಕತೆಯನ್ನು ಒಳಗೊಂಡ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟೀಸರ್ ಇಂದು (ನವೆಂಬರ್ 1) ಬಿಡುಗಡೆ ಆಗಿದೆ. ಇದು ಚಿನ್ನದ ಗಣಿಗೆ ಸಂಬಂಧಿಸಿದ ಕತೆಯಲ್ಲ ಬದಲಿಗೆ ಕೆಜಿಎಫ್​ನ ಮೂಲ ನಿವಾಸಿಗಳ ಕತೆ, ಚಿನ್ನದ ಆಸೆಗೆ ಅವರನ್ನು ಹತ್ತಿಕ್ಕಲು ಮಾಡಿದ ಪ್ರಯತ್ನದ ಕತೆ. ಅದುವೇ ಪಾ ರಂಜಿತ್ ನಿರ್ದೇಶನದ ‘ತಾಂಗಾಲನ್’

ನಟ ಭಯಂಕರ ಚಿಯಾನ್ ವಿಕ್ರಂ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ತಾಂಗಾಲನ್’ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಇದು ಯಾರೂ ಕಾಣದ, ಕೇಳದ ಕೆಜಿಎಫ್ ಕತೆ ಎಂಬುದನ್ನು ಟೀಸರ್ ಮನಗಾಣಿಸುತ್ತಿದೆ. ಕೆಜಿಎಫ್ ಪ್ರದೇಶದಲ್ಲಿ ವಾಸವಿದ್ದ ಬುಡಕಟ್ಟು ಜನಾಂಗ ಇತರೆ ಜನಾಂಗಗಳೊಟ್ಟಿಗಿನ ಹೋರಾಟ, ಚಿನ್ನದ ಆಸೆಗೆ ಬರುವ ಬ್ರಿಟೀಷರು, ಅವರೊಟ್ಟಿಗೆ ಬುಡಕಟ್ಟು ಜನರ ಹೋರಾಟದ ಕತೆಯನ್ನು ಸಿನಿಮಾ ಒಳಗೊಂಡಿದೆ ಎಂಬುದನ್ನು ಟೀಸರ್ ಸೂಚ್ಯವಾಗಿ ಹೇಳುತ್ತಿದೆ.

ಈಗ ಬಿಡುಗಡೆ ಆಗಿರುವ ಟೀಸರ್, ಭಯಂಕರ ಆಕ್ಷನ್ ದೃಶ್ಯಗಳನ್ನು, ಹಿಂಸೆಯನ್ನು ಒಳಗೊಂಡಿದೆ. ವಿಕ್ರಂ ಅಂತೂ ಮತ್ತೊಮ್ಮೆ ತಮ್ಮನ್ನು ತಾವು ಸವಾಲಿಗೆ ಒಡ್ಡಿಕೊಂಡವರಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅರೆ ಬೋಳು ತಲೆ, ಒಣಗಿದ ಹೆರಳು, ಮೈಮೇಲೆ ಒಂದು ತುಂಡು ಬಟ್ಟೆ, ಕೊಳಕು ಮೈ ಬಿಟ್ಟುಕೊಂಡು ತನ್ನವರ ಪರವಾಗಿ, ತನ್ನ ನೆಲದ ಪರವಾಗಿ ಹೋರಾಡುವ ವ್ಯಕ್ತಿಯಾಗಿ ಚಿಯಾನ್ ವಿಕ್ರಂ ಕಾಣಿಸಿಕೊಂಡಿದ್ದಾರೆ. ಟೀಸರ್​ನ ಒಂದು ದೃಶ್ಯದಲ್ಲಂತು ವಿಷಕಾರಿ ಹಾವನ್ನು ಪೊರಕೆ ಕಡ್ಡಿ ಮುರಿದಂತೆ ಮುರಿದು ಬಿಸಾಡುತ್ತಾರೆ.

ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್​ 2’; ಕಾರಣ ಏನು?

‘ಕೆಜಿಎಫ್’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆದಾಗಲೇ ನಿರ್ದೇಶಕ ಪಾ ರಂಜಿತ್ ತಾವು ಯಾರೂ ಹೇಳದ ಕೆಜಿಎಫ್ ಕತೆಯನ್ನು ಸಿನಿಮಾ ಮಾಡುವುದಾಗಿ ಹೇಳಿದ್ದರು. ಟೀಸರ್ ನೋಡಿದರೆ ಪಾ ರಂಜಿತ್ ತಾವು ಹೇಳಿದ್ದನ್ನು ಮಾಡಿದ್ದಾರೆ ಅನಿಸುತ್ತದೆ. ‘ಸರಪಟ್ಟ ಪರಂಬರೈ’, ‘ಕಾಲ’, ‘ಕಬಾಲಿ’, ‘ನಚ್ಚತ್ತಿರಂ ನಗರ್ಗಿರದು’ ಇನ್ನೂ ಕೆಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಪಾ ರಂಜಿತ್ ಮತ್ತೊಂದು ಸೂಪರ್ ಹಿಟ್ ಸಿನಿಮಾವನ್ನು ಕಟ್ಟಿಕೊಟ್ಟಿರುವುದು ಟೀಸರ್ ನಿಂದ ಖಾತ್ರಿಯಾಗುತ್ತಿದೆ.

ಇನ್ನು ಚಿಯಾನ್ ವಿಕ್ರಂ ನಟನೆ ಮೈನವಿರೇಳುವಂತಿದೆ. ಗ್ಲಾಮರಸ್ ನಟಿಯಾದ ಮಾಳವಿಕಾ ಮೋಹನನ್ ಬುಕಟ್ಟು ಜನಾಂಗದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ‘ಮಿಲನ’ ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಿದ್ದ ಪಾರ್ವತಿ ಮೆನನ್ ಸಹ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಸಿನಿಮಾವು ಜನವರಿ 26, 2024 ಗಣರಾಜ್ಯೋತ್ಸವದಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನಿವಾರ ತೆಗೆದು ನೀಟ್​ ಪರೀಕ್ಷೆ ಬರಿ, ಇಲ್ಲ ಬರಿಬೇಡ ಅಂದ್ರು, ವಿದ್ಯಾರ್ಥಿ
ಜನಿವಾರ ತೆಗೆದು ನೀಟ್​ ಪರೀಕ್ಷೆ ಬರಿ, ಇಲ್ಲ ಬರಿಬೇಡ ಅಂದ್ರು, ವಿದ್ಯಾರ್ಥಿ
6 ಎಸೆತಗಳಲ್ಲಿ 6 ಸಿಕ್ಸರ್; ದಾಖಲೆ ಬರೆದ ಪರಾಗ್
6 ಎಸೆತಗಳಲ್ಲಿ 6 ಸಿಕ್ಸರ್; ದಾಖಲೆ ಬರೆದ ಪರಾಗ್
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್