ಮೇ 31ಕ್ಕೆ ‘ಸಿನಿಮಾ ಲವರ್ಸ್ ಡೇ’; ಈ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ಬೆಲೆ ಕೇವಲ 99 ರೂಪಾಯಿ

ಈ ಶುಕ್ರವಾರ (ಮೇ 31) ‘ಸಿನಿಮಾ ಲವರ್ಡ್​ ಡೇ’ ಆಚರಿಸಲಾಗುತ್ತಿದೆ. ಸಿನಿಪೊಲಿಸ್​, ಪಿವಿಆರ್​ ಐನಾಕ್ಸ್​, ಮಿರಾಜ್​, ಏಷ್ಯನ್​ ಸಿನಿಮಾಸ್​, ಸಿಟಿ ಪ್ರೈಡ್​, ಮೂವೀ ಮ್ಯಾಕ್ಸ್, ಮೂವೀ ಟೈಮ್​ ಮುಂತಾದ ಮಲ್ಟಿಪ್ಲೆಕ್ಸ್​ಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್​ ಬೆಲೆ ಕೇವಲ 99 ರೂಪಾಯಿ ಇರಲಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಲು ಬರುವ ನಿರೀಕ್ಷೆ ಇದೆ.

ಮೇ 31ಕ್ಕೆ ‘ಸಿನಿಮಾ ಲವರ್ಸ್ ಡೇ’; ಈ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ಬೆಲೆ ಕೇವಲ 99 ರೂಪಾಯಿ
ಸಿನಿಮಾ ಲವರ್ಸ್​ ಡೇ
Follow us
ಮದನ್​ ಕುಮಾರ್​
|

Updated on: May 30, 2024 | 9:02 PM

ಪ್ರತಿ ವರ್ಷ ‘ಸಿನಿಮಾ ಲವರ್ಸ್​ ಡೇ’ (Cinema Lovers Day) ಆಚರಣೆ ಮಾಡಲಾಗುತ್ತದೆ. ಮೇ 31ರಂದು ಶುಕ್ರವಾರ ಸಿನಿಪ್ರಿಯರ ಪಾಲಿಗೆ ಸಖತ್​ ಸ್ಪೆಷಲ್​ ಆಗಿರಲಿದೆ. ಭಾರತದ ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಮೇ 31ರಂದು ಯಾವುದೇ ಸಿನಿಮಾ ನೋಡಿದರೂ ಟಿಕೆಟ್​ ಬೆಲೆ ಕೇವಲ 99 ರೂಪಾಯಿ ಆಗಿರಲಿದೆ. ಭಾರತದ ಮಲ್ಟಿಪ್ಲೆಕ್ಸ್​ ಒಕ್ಕೂಟವು (Multiplex Association of India) ಈ ಬಗ್ಗೆ ಪ್ರಕಟಣೆ ನೀಡಿದೆ. ಪಿವಿಆರ್​ ಐನಾಕ್ಸ್​, ಸಿನಿಪೊಲಿಸ್​ ಮುಂತಾದ ಮಲ್ಟಿಪ್ಲೆಕ್ಸ್​ಗಳಲ್ಲಿ (Multiplex) ಈ ಆಫರ್​ ನೀಡಲಾಗುತ್ತಿದೆ. ಈ ವಾರ (ಮೇ 31) ಬಿಡುಗಡೆ ಆಗಲಿರುವ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿಗೆ ಈ ಆಫರ್​ನಿಂದ ಸಖತ್​ ಖುಷಿ ಆಗಲಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಅದಕ್ಕೆ ಒಂದು ಮುಖ್ಯ ಕಾರಣ ಏನೆಂದರೆ ಟಿಕೆಟ್​ಗಳ ದುಬಾರಿ ದರ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್​ ಬೆಲೆ ಜಾಸ್ತಿ ಇರುತ್ತದೆ. ವಿಶೇಷ ದಿನಗಳಲ್ಲಿ ಬರೀ 99 ರೂಪಾಯಿಗೆ ಸಿನಿಮಾ ಟಿಕೆಟ್​ಗಳನ್ನು ಮಾರಾಟ ಮಾಡಿದಾಗ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಾರೆ. ಅದಕ್ಕಾಗಿ ‘ಸಿನಿಮಾ ಲವರ್ಸ್​ ಡೇ’ ಆಚರಿಸಲಾಗುತ್ತದೆ.

ಇದನ್ನೂ ಓದಿ: ಕಾವೇರಿ ಥಿಯೇಟರ್​ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ

ಕೊರೊನಾ ವೈರಸ್ ಹಾವಳಿ ಶುರುವಾದ ನಂತರ ಮಲ್ಟಿಪ್ಲೆಕ್ಸ್​ ಮತ್ತು ಏಕಪರದೆ ಚಿತ್ರಮಂದಿರಗಳಲ್ಲಿ ಬಂದು ಸಿನಿಮಾ ನೋಡುವವರು ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಪ್ಲೆಕ್ಸ್​ಗಳ ಹೊಸ ತಂತ್ರ ರೂಪಿಸಿದವು. ‘ಸಿನಿಮಾ ಲವರ್ಸ್​ ಡೇ’ ಹೆಸರಲ್ಲಿ ಆಫರ್​ ಬೆಲೆಗೆ ಟಿಕೆಟ್​ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲಾಯಿತು. ಈ ವರ್ಷ ಮೇ 31ರಂದು ‘ಸಿನಿಮಾ ಲವರ್ಸ್​ ಡೇ’ ಸೆಲೆಬ್ರೇಟ್​ ಮಾಡಲಾಗುತ್ತಿದೆ.

ಪಿವಿಆರ್​ ಐನಾಕ್ಸ್​, ಸಿನಿಪೊಲಿಸ್​, ಮಿರಾಜ್​, ಸಿಟಿ ಪ್ರೈಡ್​, ಏಷ್ಯನ್​ ಸಿನಿಮಾಸ್​, ಮೂವೀ ಟೈಮ್​, ಮೂವೀ ಮ್ಯಾಕ್ಸ್ ಮುಂತಾದ ಮಲ್ಟಿಪ್ಲೆಕ್ಸ್​ಗಳು ‘ಸಿನಿಮಾ ಲವರ್ಸ್​ ಡೇ’ ಆಚರಿಸುತ್ತಿವೆ. ಈ ವಾರ ಬಿಡುಗಡೆ ಆಗಲಿರುವ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ’, ‘ಫಾಸ್ಟ್​ ಚಾರ್ಲಿ’, ‘ಸವಿ’, ‘ಸ್ಟ್ರೇಂಜರ್ಸ್​’ ಮುಂತಾದ ಸಿನಿಮಾಗಳನ್ನು ಕೂಡ ಕೇವಲ 99 ರೂಪಾಯಿಗೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ. ಈ ಆಫರ್​ ಕೇವಲ ಒಂದು ದಿನ ಇರಲಿದೆ. ಐಷಾರಾಮಿ ಆಸನಗಳಿಗೆ ಈ ಆಫರ್​ ಅನ್ವಯ ಆಗುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.