ಸಿಎಂ ಪತ್ನಿಯಂತೆ ತ್ರಿಷಾಗೆ ರಾಜ ಮರ್ಯಾದೆ; ಶುರುವಾಯ್ತು ಚರ್ಚೆ

ಮುಖ್ಯಮಂತ್ರಿ ದಳಪತಿ ವಿಜಯ್ ವೈಯಕ್ತಿಕ ನಡವಳಿಕೆಗಳು ತಮಿಳುನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿವೆ. ನಟಿ ತ್ರಿಷಾ ಅವರಿಗೆ ಸಿಎಂ ಪತ್ನಿಯಂತೆ ರಾಜ ಮರ್ಯಾದೆ, ಸರ್ಕಾರಿ ಬೆಂಗಾವಲು ನೀಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅಧಿಕಾರ ದುರ್ಬಳಕೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ವಿಶ್ಲೇಷಿಸಲಾಗಿದೆ. ವಿಜಯ್ ವೈಯಕ್ತಿಕ ಜೀವನದ ಬಿಕ್ಕಟ್ಟು, ಮಕ್ಕಳ ಮೇಲಿನ ಪರಿಣಾಮದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.

ಸಿಎಂ ಪತ್ನಿಯಂತೆ ತ್ರಿಷಾಗೆ ರಾಜ ಮರ್ಯಾದೆ; ಶುರುವಾಯ್ತು ಚರ್ಚೆ
ವಿಜಯ್-ತ್ರಿಷಾ

Updated on: Jun 01, 2026 | 11:08 AM

ತಮಿಳುನಾಡಿನ ರಾಜಕೀಯಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟು, ಮುಖ್ಯಮಂತ್ರಿಯಾಗಿರುವ ದಳಪತಿ ವಿಜಯ್ ಅವರ ಕೆಲವು ವೈಯಕ್ತಿಕ ನಡೆಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ. ಆರಂಭದಲ್ಲಿ ಅವರು ತಮ್ಮ ಜ್ಯೋತಿಷಿಯನ್ನು ಸಲಹೆಗಾರರನ್ನಾಗಿ ನೇಮಿಸಿ ಟೀಕೆಗೆ ಒಳಗಾಗಿದ್ದರು. ಆದರೆ ಆ ತಪ್ಪು ತಿದ್ದಿಕೊಂಡು ಆದೇಶ ಹಿಂಪಡೆದಿದ್ದರು. ಮತ್ತೊಮ್ಮೆ ವಿಜಯ್ (Vijay) ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಾಯಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅಜಿತ್ ಅವರಿಗೆ ಸಾಂತ್ವನ ಹೇಳಲು ವಿಜಯ್ ಅವರು ಅಜಿತ್ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ವಿಜಯ್ ಒಬ್ಬರೇ ಹೋಗದೆ, ಅವರ ಜೊತೆ ನಟಿ ತ್ರಿಷಾ ಕೃಷ್ಣನ್ ಕೂಡ ಕಾಣಿಸಿಕೊಂಡಿರುವುದು ಈಗ ಚರ್ಚೆ ಹುಟ್ಟುಹಾಕಿದೆ.

ಅಜಿತ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟಿ ತ್ರಿಷಾ ಅವರಿಗೆ ಸಿಕ್ಕ ಗೌರವ ಮತ್ತು ಸವಲತ್ತುಗಳು ಚರ್ಚೆ ಹುಟ್ಟಲು ಪ್ರಮುಖ ಕಾರಣ. ಒಬ್ಬ ಮುಖ್ಯಮಂತ್ರಿಯ ಪತ್ನಿಗೆ ಸಿಗುವಂತಹ ಭದ್ರತೆ, ಪ್ರೋಟೋಕಾಲ್ ಹಾಗೂ ಸರ್ಕಾರಿ ವಾಹನಗಳ ಬೆಂಗಾವಲು ವ್ಯವಸ್ಥೆಯನ್ನು ತ್ರಿಷಾಗೆ ಕಲ್ಪಿಸಲಾಗಿತ್ತು. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವೈವಾಹಿಕ ಜೀವನ ಸದ್ಯ ಬಿಕ್ಕಟ್ಟಿನಲ್ಲಿದೆ. ಇವರಿಬ್ಬರ ವಿಚ್ಛೇದನ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿದೆ. ವಿಚ್ಛೇದನ ಪ್ರಕ್ರಿಯೆ ಮುಗಿದು ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಅಥವಾ ಅಧಿಕೃತವಾಗಿ ಮದುವೆಯಾಗುವವರೆಗೆ ವಿಜಯ್ ಅವರು ತ್ರಿಷಾ ಅವರನ್ನು ತಮ್ಮ ವೈಯಕ್ತಿಕ ವಿಷಯಗಳಿಂದ ದೂರ ಇಡುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ

ಇವರಿಬ್ಬರು ಹೊರಗೆ ಹೋದಾಗಲೆಲ್ಲಾ ಮಾಧ್ಯಮಗಳು ಇವರ ಮೇಲೆ ಅತಿಯಾದ ಗಮನ ಹರಿಸುವುದರಿಂದ, ಅದು ವಿಜಯ್ ಅವರ ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಒಬ್ಬ ಜವಾಬ್ದಾರಿಯುತ ತಂದೆಯಾಗಿ, ಈ ಕಠಿಣ ಸಮಯದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ವಿಜಯ್ ಮೇಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:36 am, Mon, 1 June 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us