AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು, ಬಂಧನ ಸಾಧ್ಯತೆ

Ram Gopal Varma: ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆಂಧ್ರ ಸಿಎಂ ವಿರುದ್ಧ ಈ ಹಿಂದೆ ಮಾಡಿರುವ ಟ್ವೀಟ್​ ವಿರುದ್ಧ ದೂರು ದಾಖಲಿಸಿದ್ದು, ಬಂಧನ ಸಾಧ್ಯತೆ ಇದೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು, ಬಂಧನ ಸಾಧ್ಯತೆ
ಮಂಜುನಾಥ ಸಿ.
|

Updated on:Nov 13, 2024 | 12:59 PM

Share

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇಕ್ಕಟ್ಟಿಗೆ ಸಿಲುಕಿದ್ದಾರೆ, ಆದರೆ ಈ ರೀತಿಯ ಪರಿಸ್ಥಿತಿಗಳನ್ನು ಈ ಹಿಂದೆಯೂ ಅವರು ಎದುರಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ದೂರು ದಾಖಲಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. ವರ್ಮಾ, ತಮ್ಮ ಫಿಲ್ಟರ್ ಇಲ್ಲದ ಮಾತು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಜನಪ್ರಿಯ. ಇದೀಗ ಅದೇ ಕಾರಣಕ್ಕೆ ವರ್ಮಾ ಸಮಸ್ಯೆಗೆ ಸಿಲುಕಿದ್ದಾರೆ. ವರ್ಮಾ, ಆಂಧ್ರ ಸಿಎಂ ವಿರುದ್ಧ ಮಾಡಿದ ಟ್ವೀಟ್​ನಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಪಕ್ಷದ ಮುಖಂಡರೊಬ್ಬರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅವರ ಪುತ್ರ ಮತ್ತು ಸಚಿವ ನಾರಾ ಲೋಕೇಶ್ ಹಾಗೂ ಅವರ ಸೊಸೆಯ ವಿರುದ್ಧ ಮಾನಹಾನಿಕಾರಕ ಟ್ವೀಟ್​ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ವರ್ಷಗಳಿಂದಲೂ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ. ಅವರ ಬಗ್ಗೆ ಹಲವು ಬಾರಿ ಟ್ವೀಟ್​ಗಳನ್ನು ಮಾಡಿದ್ದಾರೆ. ಕಾಲೆಳೆದಿದ್ದಾರೆ, ವ್ಯಂಗ್ಯ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ತೋರಿಸಿ ‘ವ್ಯೂಹಂ’ ಹೆಸರಿನ ಸಿನಿಮಾ ಸಹ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಹಿಂದೆ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬದ ಬಗ್ಗೆ ಮಾಡಿರುವ ಟ್ವೀಟ್​ಗಳನ್ನೆಲ್ಲ ಕಲೆ ಹಾಕಿರುವ ಟಿಡಿಪಿ ಮಂಡಲ್ ಪರಿಷತ್ ಕಾರ್ಯದರ್ಶಿ ರಾಮಲಿಂಗಾ ರೆಡ್ಡಿ ಇದೀಗ ವರ್ಮಾ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾಗಾಗಿ ಹಲವು ಆಫರ್ ತಿರಸ್ಕರಿಸಿದ್ದ ಊರ್ಮಿಳಾ: ಪ್ರೇಮ ಪಯಣದ ಜರ್ನಿ ಗೊತ್ತಾ?

ಕಳೆದ ಕೆಲ ದಿನಗಳಲ್ಲಿ, ಮಾನಹಾನಿಕಾರಕ ಪೋಸ್ಟ್​ಗಳನ್ನು ಮಾಡಿದ್ದ ಕೆಲ ವೈಸಿಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕೇಸು ದಾಖಲಿಸಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ವಿರುದ್ಧವೂ ದೂರು ದಾಖಲಾಗಿದ್ದು, ಅವರನ್ನೂ ಸಹ ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಈ ಹಿಂದೆ ಟಿಡಿಪಿ ಪಕ್ಷದ ಮುಖಂಡನೊಬ್ಬ, ರಾಮ್ ಗೋಪಾಲ್ ವರ್ಮಾ ತಲೆ ಕಡಿದರೆ ಒಂದು ಕೋಟಿ ಹಣ ಕೊಡುವುದಾಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದ, ಆತನ ವಿರುದ್ಧ ವರ್ಮಾ ದೂರು ಸಹ ದಾಖಲಿಸಿದ್ದರು. ಈಗ ಟಿಡಿಪಿ ಮುಖಂಡರು ವರ್ಮಾ ವಿರುದ್ಧ ದೂರು ದಾಖಲಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ, ಚಂದ್ರಬಾಬು ನಾಯ್ಡು ಮಾತ್ರವೇ ಅಲ್ಲದೆ, ಪವನ್ ಕಲ್ಯಾಣ್ ವಿರುದ್ಧವೂ ಸಹ ಹಲವು ಮಾನಹಾನಿಕರ ಟ್ವೀಟ್​ಗಳನ್ನು ಮಾಡಿದ್ದರು. ಪವನ್ ಕಲ್ಯಾಣ್ ಅನ್ನು ವ್ಯಂಗ್ಯ ಮಾಡಿ ಸಿನಿಮಾ ಒಂದನ್ನು ಸಹ ನಿರ್ಮಾಣ ಮಾಡಿದ್ದರು ರಾಮ್ ಗೋಪಾಲ್ ವರ್ಮಾ. ಈಗ ಅವೆಲ್ಲವೂ ವರ್ಮಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Wed, 13 November 24