AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಮಾಜಿ ಆರ್​ಸಿಬಿ ಆಟಗಾರನ ಪತ್ನಿ

Dhanashree Verma: ಭಾರತ ಕ್ರಿಕೆಟ್ ತಂಡದ ಹಾಲಿ ಆಟಗಾರ ಹಾಗೂ ಆರ್​ಸಿಬಿಯ ಮಾಜಿ ಆಟಗಾರ, ಖ್ಯಾತ ಕ್ರಿಕೆಟಿಗನ ಪತ್ನಿ ಇದೀಗ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅದೂ ತೆಲುಗು ಸಿನಿಮಾ ಒಂದರ ಮೂಲಕ.

ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಮಾಜಿ ಆರ್​ಸಿಬಿ ಆಟಗಾರನ ಪತ್ನಿ
ಮಂಜುನಾಥ ಸಿ.
|

Updated on: Nov 22, 2024 | 12:53 PM

Share

ಕ್ರಿಕೆಟಿಗರು ಸಿನಿಮಾ ತಾರೆಯವರನ್ನು ವಿವಾಹವಾಗುವ ಸಂಪ್ರದಾಯ ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಕ್ರಿಕೆಟಿಗರನ್ನು ವಿವಾಹವಾಗುವ ನಟಿಯರು ಆ ನಂತರ ಸಿನಿಮಾ ರಂಗವನ್ನು ಬಿಟ್ಟಿದ್ದೇ ಹೆಚ್ಚು. ಆದರೆ ಇದೀಗ ಖ್ಯಾತ ಕ್ರಿಕೆಟಿಗನ ಪತ್ನಿ, ಈಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅದೂ ತೆಲುಗು ಸಿನಿಮಾ ಮೂಲಕ! ಭಾರತ ಕ್ರಿಕೆಟ್ ತಂಡದ ಆಟಗಾರ, ಆರ್​ಸಿಬಿಯ ಮಾಜಿ ಕ್ರಿಕೆಟ್ ಆಟಗಾರ ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ, ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ, ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಆಗಿ ಈಗಾಗಲೇ ಬಹಳ ಜನಪ್ರಿಯವಾಗಿದ್ದಾರೆ. ಅತ್ಯುತ್ತಮ ಡ್ಯಾನ್ಸರ್ ಆಗಿರುವ ಧನಶ್ರೀ, ಇನ್​ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಸಹ ಧನಶ್ರೀ ಭಾಗವಹಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ನೃತ್ಯ ಪ್ರಧಾನ ಕತೆಯುಳ್ಳ ‘ಆಕಾಶಂ ಧಾಟಿ ವಸ್ತಾವ’ ಹೆಸರಿನ ತೆಲುಗು ಸಿನಿಮಾದಲ್ಲಿ ಧನಶ್ರೀ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದಲ್ಲಿ ಡ್ಯಾನ್ಸ್ ಮಾಸ್ಟರ್ ಯಶ್ ನಾಯಕ. ದಕ್ಷಿಣ ಭಾರತ ಚಿತ್ರರಂಗದ ಭಾರಿ ಬಜೆಟ್ ನಿರ್ಮಾಪಕರಾದ ದಿಲ್ ರಾಜು ಅವರ ಪ್ರೊಡಕ್ಷನ್ ಹೌಸ್​ ವತಿಯಿಂದ ಈ ಸಿನಿಮಾದ ನಿರ್ಮಾಣ ಮಾಡಲಾಗುತ್ತಿದೆ. ಬಂಡವಾಳ ಹೂಡುತ್ತಿರುವುದು ಹರ್ಷಿತ್ ರೆಡ್ಡಿ ಮತ್ತು ಹಂಸಿತ್. ಶಶಿ ಕುಮಾರ್ ಮುತ್ತುಲೂರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:ತಂದೆಯಾಗ್ತಿದ್ದಾರಾ ಯುಜ್ವೇಂದ್ರ ಚಹಲ್: ಕುತೂಹಲ ಮೂಡಿಸಿದ ಧನಶ್ರೀ ಪೋಸ್ಟ್

ಸಿನಿಮಾದ ಕೆಲವು ಭಾಗದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರಂತೆ ಧನಶ್ರೀ. ಸಿನಿಮಾದ ನಾಯಕಿಯ ಪಾತ್ರ ನೃತ್ಯಗಾರ್ತಿಯ ಪಾತ್ರವಾಗಿದ್ದು, ಭರತನಾಟ್ಯದಿಂದ ಹಿಡಿದು ಆಧುನಿಕ ನೃತ್ಯ ವಿವಿಧ ಮಾದರಿಯ ನೃತ್ಯದಲ್ಲಿ ಪ್ರವೀಣೆಯಾಗಿರುವ ನಟಿಗಾಗಿ ಚಿತ್ರತಂಡ ಹುಡುಕಾಟ ನಡೆಸಿತ್ತಂತೆ. ಹಲವರ ಆಡಿಷನ್ ಬಳಿಕ ಧನಶ್ರೀ ಅವರನ್ನು ಕೇಳಲಾಗಿದೆ. ಪಾತ್ರ ಮೆಚ್ಚಿಕೊಂಡ ಧನಶ್ರೀ ನಟಿಸಲು ಓಕೆ ಹೇಳಿದ್ದಾರೆ. ಮುಂಬೈನಲ್ಲಿ ಸಿನಿಮಾದ ಕೆಲ ಭಾಗದ ಚಿತ್ರೀಕರಣ ಮುಗಿದಿದೆ. ಉಳಿದ ಭಾಗದ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯಲಿದೆ. ಸಿನಿಮಾದಲ್ಲಿ ಧನಶ್ರೀ ಜೊತೆಗೆ ಮತ್ತೊಬ್ಬ ನಾಯಕಿಯೂ ಇರಲಿದ್ದಾರೆ. ಸೀರತ್ ಕಪೂರ್ ಅನ್ನು ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಸಿನಿಮಾದಲ್ಲಿ ಮಲಯಾಳಂ ನಟಿ ಕಾರ್ತಿಕಾ ಮುರಳೀಧರನ್ ಸಹ ಇರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ