AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಹುಡುಗಿಯರೊಂದಿಗೆ ಮುತ್ತಯ್ಯ ಮುರಳೀಧರನ್ ನೃತ್ಯ?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ

ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ, ಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವವರು ನೃತ್ಯ ನಿರ್ದೇಶಕ ಕಿರಣ್ ಜೆ ಹೊರತು ಮುತ್ತಯ್ಯ ಮುರಳೀಧರನ್ ಅಲ್ಲ.

Fact Check: ಹುಡುಗಿಯರೊಂದಿಗೆ ಮುತ್ತಯ್ಯ ಮುರಳೀಧರನ್ ನೃತ್ಯ?: ವೈರಲ್ ವಿಡಿಯೋದ ನಿಜಾಂಶ ಇಲ್ಲಿದೆ
ವೈರಲ್​​ ಪೋಸ್ಟ್​
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 22, 2024 | 11:56 AM

Share

ಶ್ರೀಲಂಕಾ ಕ್ರಿಕೆಟ್ ತಂಡದ ಲೆಜೆಂಡರಿ ಬೌಲರ್ ಮುತ್ತಯ್ಯ ಮುರಳೀಧರನ್ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಸದಾ ನೆನಪಿನಲ್ಲಿ ಉಳಿಯುವಂತದ್ದು. ತನ್ನ ಸೈಲೆಂಟ್ ನೇಚರ್​ನಿಂದಲೇ ಕ್ರಿಕೆಟ್ ಲೋಕದಲ್ಲಿ ಪರಿಚಿತರಾಗಿರುವ ಮುರಳೀಧರನ್, ನೃತ್ಯ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಕ್ಕಿ ಕೌಶಲ್ ಅವರ ಬ್ಯಾಡ್ ನ್ಯೂಸ್ ಚಿತ್ರದ “ತೌಬಾ ತೌಬಾ” ಹಾಡಿಗೆ ಈ ವಿಡಿಯೋದಲ್ಲಿರುವ ವ್ಯಕ್ತಿ ಸ್ಟೆಪ್ ಹಾಕಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಅದ್ಭುತ ನೃತ್ಯ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ, ಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವವರು ನೃತ್ಯ ನಿರ್ದೇಶಕ ಕಿರಣ್ ಜೆ ಹೊರತು ಮುತ್ತಯ್ಯ ಮುರಳೀಧರನ್ ಅಲ್ಲ. ವೈರಲ್ ಕ್ಲೈಮ್ ಅನ್ನು ತನಿಖೆ ಮಾಡಲು, ನಾವು ಮೊದಲು ಗೂಗಲ್ ರಿವರ್ಸ್ ಇಮೇಜ್‌ಗಳಲ್ಲಿ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಹುಡುಕಿದೆವು.

ಆಗ ಜುಲೈ 22, 2022 ರಂದು ಕಿರಣ್ ಜೆ ಎಂಬ ನೃತ್ಯ ಸಂಯೋಜಕರ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅದರೊಂದಿಗೆ ಹೀಗೆ ಬರೆಯಲಾಗಿದೆ: ‘‘ಈ ವೈಬ್‌ನಿಂದ ಹೊರಬರಲು ಸಾಧ್ಯವಿಲ್ಲ, ತುಂಬಾ ಧನ್ಯವಾದಗಳು ಬೆಂಗಳೂರು @dance.inn.bangalore’’ ಎಂದು ಹೇಳಿಕೊಂಡಿದ್ದಾರೆ.

View this post on Instagram

A post shared by Kiran Jopale (@mr.kiranj)

ಜುಲೈ 25, 2022 ರಂದು ಇದೇ ಕಿರಣ್ ಜೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಈ ವಿಡಿಯೋ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.

ಈ ಕಿರಣ್ ಜೆ ಯಾರು ಎಂದು ಕೀವರ್ಡ್‌ಗಳೊಂದಿಗೆ ಗೂಗಲ್​ನಲ್ಲಿ ಹುಡುಕಿದ ನಂತರ, ಕಿರಣ್ ಜೋಪಲ್ ಪ್ರಸಿದ್ಧ ನೃತ್ಯ ಸಂಯೋಜಕ ಮತ್ತು ಸಾಮಾಜಿಕ ಮಾಧ್ಯಮದ ಪ್ರಸಿದ್ಧ ವ್ಯಕ್ತಿ. ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಇವರನ್ನು ನೃತ್ಯದ ಕಲೆ ಉತ್ತುಂಗಕ್ಕೆ ಕರೆದುಕೊಂಡು ಹೋಯಿತು. ಅದ್ಭುತ ನೃತ್ಯಗಳನ್ನು ಮಾಡುವ ಮೂಲಕ ಇನ್‌ಸ್ಟಾಗ್ರಾಮ್, ಯೂಟ್ಯೂಬ್​ನಲ್ಲಿ ಫೇಮಸ್ ಆದರು. ಇವರ ಜೀವನದ ಕುರಿತು 4 ವರ್ಷದ ಹಿಂದೆ TEDx ಟಾಕ್ಸ್ ಎಂಬ ಯೂಟ್ಯೂಬ್ ಖಾತೆಯಲ್ಲಿ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಅವರು ತಮ್ಮ ಜೀವನದ ಪಯಣದ ಬಗ್ಗೆ ಮಾತನಾಡಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವವರು ನೃತ್ಯ ನಿರ್ದೇಶಕ ಕಿರಣ್ ಜೆ ಹೊರತು ಮುತ್ತಯ್ಯ ಮುರಳೀಧರನ್ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ